Team India Shocking Defeat: ಮತ್ತೊಮ್ಮೆ ಶ್ರೇಯಸ್ ಅಯ್ಯರ್ ಬ್ಲಂಡರ್ ಮಿಸ್ಟೇಕ್​​, ಈ ಒಂದು ತಪ್ಪು ಟೀಂ ಇಂಡಿಯಾ ಹೀನಾಯ ಸೋಲಿಗೆ ಕಾರಣ! | ಕ್ರೀಡಾ ಸುದ್ದಿ | ACTPnews

ಗೌತಮ್ ಗಂಭೀರ್/ ಶ್ರೇಯಸ್ ಅಯ್ಯರ್ (ಸಂಗ್ರಹ ಚಿತ್ರ)


Last Updated:

ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 125 ರನ್‌ಗಳ ಹೀನಾಯ ಸೋಲು. ಶ್ರೇಯಸ್ ಅಯ್ಯರ್ ನಾಯಕತ್ವದ ಬಗ್ಗೆ ಪ್ರಶ್ನೆಗಳು ಉದ್ಭವಿಸಿದೆ.

ಗೌತಮ್ ಗಂಭೀರ್/ ಶ್ರೇಯಸ್ ಅಯ್ಯರ್ (ಸಂಗ್ರಹ ಚಿತ್ರ)
ಗೌತಮ್ ಗಂಭೀರ್/ ಶ್ರೇಯಸ್ ಅಯ್ಯರ್ (ಸಂಗ್ರಹ ಚಿತ್ರ)

ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ (England vs India T20 Series) ಭಾರತದ ತಂಡಕ್ಕೆ ಟಿ20 ಸರಣಿಯಲ್ಲಿ ಬಿಗ್ ಶಾಕ್ ಎದುರಾಗಿದೆ. ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ (Trent Bridge Stadium) ನಡೆದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾಗೆ (Team India) 125 ರನ್ ಗಳ ಭಾರೀ ಅಂತರದೊಂದಿಗೆ ಸೋಲುಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕಿದ್ದ ಪಿಚ್ ನಲ್ಲಿ, ಶ್ರೇಯಸ್ ಅಯ್ಯರ್ (Shreyas Iyer) ತೆಗೆದುಕೊಂಡ ತಪ್ಪು ನಿರ್ಧಾರ ಭಾರತ ತಂಡದ ಸೋಲಿಗೆ ಕಾರಣವಾಗಿದೆ. ಅಭಿಮಾನಿಗಳಿಗೆ ತೀವ್ರ ನಿರಾಸೆ ಎದುರಾಗಿದೆ.

ಕೈಕೊಟ್ಟ ಕ್ಯಾಪ್ಟನ್, ಟೀಂ ಇಂಡಿಯಾ ಕೋಚ್ ವ್ಯೂಹ!

ಟಾಸ್​ ಗೆದ್ದ ಬಳಿಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಭಾರೀ ಸ್ಕೋರ್ ಮಾಡಲು ಅನುಕೂಲಕರವಾಗಿದ್ದ ಟ್ರೆಂಟ್​ ಬ್ರಿಡ್ಜ್ ಪಿಚ್​​ನಲ್ಲಿ, ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಅಚ್ಚರಿ ಮೂಡಿಸಿದ್ದರು. ಪಿಚ್ ಸ್ವಭಾವವನ್ನು ಅಂದಾಜು ಮಾಡಲು ವಿಫಲರಾದ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್ ಮಾಡಿದ ಅತೀ ದೊಡ್ಡ ತಪ್ಪು ತಂಡದ ಹೀನಾಯ ಸೋಲಿಗೆ ಕಾರಣವಾಯ್ತು ಎಂದು ಹೇಳಬಹುದು.

ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡ ಇಂಗ್ಲೆಂಡ್, ನಿಗದಿತ 20 ಓವರ್ ಗಳಲ್ಲಿ 201 ರನ್ ಗಳಿಸಿತ್ತು. ಭಾರೀ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಯಾವುದೇ ಹಂತದಲ್ಲಿಯೂ ಹೋರಾಟವನ್ನೇ ತೋರಲಿಲ್ಲ. ಪವರ್ ಪ್ಲೇ ನಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದರೆ, 11.4 ಓವರ್ ಗಳಲ್ಲಿ ಜಸ್ಟ್ 76 ರನ್ ಗಳಿಗೆ ಆಲೌಟ್ ಆಗಿತ್ತು.

ಕ್ಯಾಪ್ಟನ್ ಸ್ಥಾನಕ್ಕೆ ಕುತ್ತು!

ಈ ಸೋಲಿನೊಂದಿಗೆ ಟೀಂ ಇಂಡಿಯಾ ಟಿ20 ಇತಿಹಾಸದಲ್ಲಿಯೇ ಅತ್ಯಂತ ಭಾರೀ ಅಂತರದ ಸೋಲು ದಾಖಲಿಸಿದೆ. ಈ ಹಿಂದೆ 2019ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 80 ರನ್ ಅಂತರದೊಂದಿಗೆ ಸೋಲುಂಡಿತ್ತು. ವಿಶ್ವಕಪ್ ಬಳಿಕ ಟೀಂ ಇಂಡಿಯಾ ಕ್ಯಾಪ್ಟನ್ ಪಟ್ಟ ಪಡೆದುಕೊಂಡ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಸತತ ಐದು ಸೋಲು ಅನುಭವಿಸಿದೆ. ಶ್ರೇಯಸ್ ನಾಯಕತ್ವದಲ್ಲಿ ಆಡಿದ 12 ಟಿ20 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲುಂಡಿದೆ. ಇದರೊಂದಿಗೆ ಶ್ರೇಯಸ್ ಅಯ್ಯರ್ ನಾಯಕತ್ವದ ಮೇಲೆಯೇ ಪ್ರಶ್ನೆ ಮತ್ತು ಟೀಕೆಗಳು ಕೇಳಿ ಬರುತ್ತಿದೆ.

ಟ್ರೆಂಟ್ ಬ್ರಿಡ್ಜ್ ಪಿಚ್ ವಿಶೇಷತೆಗಳೇನು?

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಮೈದಾನಕ್ಕೆ ಒಂದು ವಿಶೇಷ ಸ್ಥಾನವಿದೆ. ಈ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳ ಸ್ವರ್ಗ ಎಂದು ಹೆಸರು ಪಡೆದಿದೆ. ಇಲ್ಲಿ ಚೆಂಡು ಪಿಚ್ ಮೇಲೆ ಬೀಳುತ್ತಿದ್ದಂತೆ ಬ್ಯಾಟ್‌ಗೆ ಬರುತ್ತದೆ. ಇದರಿಂದ ಭಾರೀ ಸ್ಕೋರ್ ಪಂದ್ಯವನ್ನು ನಿರೀಕ್ಷೆ ಮಾಡಬಹುದಾಗಿದೆ. ಪಂದ್ಯದ ಆರಂಭದಲ್ಲಿ ಪಿಚ್ ವೇಗದ ಬೌಲರ್‌ಗಳಿಗೆ ಉತ್ತಮ ಸ್ವಿಂಗ್, ಬೌನ್ಸ್ ನೀಡಿದರೂ, ಬ್ಯಾಟರ್‌ಗಳು ಒಮ್ಮೆ ಕ್ರಿಸ್‌ನಲ್ಲಿ ಸೆಟ್ ಆದರೆ ರನ್ ಮಳೆ ಆರಂಭವಾಗುತ್ತದೆ.

ಈ ಪಿಚ್‌ನಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಲು ಯೋಚನೆ ಮಾಡುತ್ತದೆ. ಏಕೆಂದರೆ ಪಂದ್ಯ ನಡೆಯುತ್ತಿದ್ದಂತೆ, ಎರಡನೇ ಇನ್ನಿಂಗ್ಸ್ ಸಮಯಕ್ಕೆ ಪಿಚ್ ಸ್ಲೋ ಆಗುತ್ತದೆ. ಇದರಿಂದ ಚೇಸಿಂಗ್ ಮಾಡುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ಎರಡು ತಂಡದ ಕ್ಯಾಪ್ಟನ್‌ಗಳು ಟಾಸ್ ಗೆದ್ದು, ಬೃಹತ್ ರನ್ ಕಲೆ ಹಾಕುವ ತಂತ್ರದೊಂದಿಗೆ ಕಣಕ್ಕೆ ಇಳಿಯುತ್ತಾರೆ. ಆದರೆ ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಮ್ಯಾನೇಜ್​​ಮೆಂಟ್ ಇದನ್ನು ಅರಿತುಕೊಳ್ಳಲು ವಿಫಲವಾಗಿತ್ತು.

ಟ್ರೆಂಟ್ ಬ್ರಿಡ್ಜ್ ಮೈದಾನದ ಟಿ20 ಅಂಕಿ-ಅಂಶಗಳು ಇಂತಿದೆ..

ಈ ಐತಿಹಾಸಿಕ ಮೈದಾನದಲ್ಲಿ ಇಲ್ಲಿವರೆಗೂ ನಡೆದ ಅಂತರಾಷ್ಟ್ರೀಯ ಟಿ20 ಪಂದ್ಯಗಳ ದಾಖಲೆಗಳನ್ನು ಪರಿಶೀಲಿಸಿದರೆ ಪಿಚ್ ಸ್ವಭಾವ ಸ್ಪಷ್ಟವಾಗಿ ಅರ್ಥವಾಗುತ್ತದೆ.

  • ಒಟ್ಟು ಪಂದ್ಯಗಳು- 15
  • ಮೊದಲು ಬ್ಯಾಟಿಂಗ್ ಮಾಡಿ ಗೆದ್ದ ಪಂದ್ಯಗಳು- 09
  • ಚೇಸ್ ಮಾಡಿ ಗೆದ್ದ ಪಂದ್ಯಗಳು- 06
  • ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್- 155 ರನ್
  • ಅತ್ಯಧಿಕ ಸ್ಕೋರ್: 232/6 (ಪಾಕಿಸ್ತಾನ ವರ್ಸಸ್ ಇಂಗ್ಲೆಂಡ್, 2021)
  • ಈ ಹಿಂದೆ ಇದ್ದ ಕಡಿಮೆ ಸ್ಕೋರ್: 110 (ನ್ಯೂಜಿಲೆಂಡ್ ವರ್ಸಸ್ ಇಂಗ್ಲೆಂಡ್, 2009)
  • ಈಗ ಕಡಿಮೆ ಸ್ಕೋರ್: 76 ಆಲೌಟ್ (ಭಾರತ ವರ್ಸಸ್ ಇಂಗ್ಲೆಂಡ್, 2026)
  • ಬೆಸ್ಟ್ ಚೇಸಿಂಗ್ ಸ್ಕೋರ್: 179/04 (ನ್ಯೂಜಿಲೆಂಡ್ ವರ್ಸಸ್ ಇಂಗ್ಲೆಂಡ್, 2023)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed