Team India: 5 ತಿಂಗಳು ಕ್ರಿಕೆಟ್​​​ನಿಂದ ದೂರ ಉಳಿದವನಿಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್! ಗಂಭೀರ್ -ಅಗರ್ಕರ್ ವಿರುದ್ಧ ಸಿಡಿದೆದ್ದ ಮಾಜಿ ಕ್ರಿಕೆಟರ್ | ಕ್ರೀಡಾ ಸುದ್ದಿ | ACTPnews

ಗೌತಮ್ ಗಂಭೀರ್, ಅಗರ್ಕರ್, ಹರ್ಷಿತ್ ರಾಣಾ


Last Updated:

Sadagoppan Ramesh Harshit Rana selection: ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾ ತಂಡವನ್ನು ಘೋಷಿಸಲಾಗಿದ್ದು, ಹರ್ಷಿತ್ ರಾಣಾ ಮರಳಿದ್ದಾರೆ. ಆದಾಗ್ಯೂ, ಮಾಜಿ ಭಾರತೀಯ ಕ್ರಿಕೆಟಿಗರೊಬ್ಬರು ಅವರ ಆಯ್ಕೆಯನ್ನು ಪ್ರಶ್ನಿಸಿದ್ದಾರೆ.

ಗೌತಮ್ ಗಂಭೀರ್, ಅಗರ್ಕರ್, ಹರ್ಷಿತ್ ರಾಣಾ
ಗೌತಮ್ ಗಂಭೀರ್, ಅಗರ್ಕರ್, ಹರ್ಷಿತ್ ರಾಣಾ

ಶನಿವಾರ ಐರ್ಲೆಂಡ್ ಮತ್ತು ಇಂಗ್ಲೆಂಡ್ (England and Ireland) ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ (Ajit Agarkar) ಮತ್ತು ಆಯ್ಕೆ ಸಮಿತಿಯೂ ಕೆಲವು ಪ್ರಮುಖ ಕ್ರಮಗಳನ್ನು ತೆಗೆದುಕೊಂಡು ತಂಡದಲ್ಲಿ ಹಲವು ಬದಲಾವಣೆಗಳನ್ನ ಮಾಡಿದೆ. ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನು ನಾಯಕತ್ವ ಹಾಗೂ ತಂಡದಿಂದ ಕೈಬಿಡಲಾಗಿದೆ. ಮತ್ತೊಬ್ಬ ಮುಂಬೈ ಪ್ಲೇಯರ್ ಶ್ರೇಯಸ್ ಅಯ್ಯರ್ (Shreyas Iyer) ನಾಯಕನಾಗಿ ಮರಳಿದ್ದಾರೆ. ಆಯ್ಕೆದಾರರು ವೈಭವ್ ಸೂರ್ಯವಂಶಿ (Vaibhav Sooryavanshi)ಗೂ ಅವಕಾಶ ನೀಡಿದ್ದಾರೆ. ಈ ಸರಣಿಯ ಮೂಲಕ ಹರ್ಷಿತ್ ರಾಣಾ ಕೂಡ ಟೀಮ್ ಇಂಡಿಯಾ ಜೆರ್ಸಿಗೆ ಮರಳಲಿದ್ದಾರೆ. ಆದರೆ ಹರ್ಷಿತ್ ಆಯ್ಕೆಯ ಬಗ್ಗೆ ಮಾಜಿ ಭಾರತೀಯ ಕ್ರಿಕೆಟಿಗರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹರ್ಷಿತ್ ರಾಣಾ ಆಯ್ಕೆಗೆ ವಿವಾದ ಏಕೆ?

ಭಾರತದ ಮಾಜಿ ಕ್ರಿಕೆಟಿಗ ಸದಗೋಪನ್ ರಮೇಶ್ ಟೀಮ್ ಇಂಡಿಯಾಕ್ಕೆ ಹರ್ಷಿತ್ ರಾಣಾ ಮರಳುವುದನ್ನು ಪ್ರಶ್ನಿಸಿದ್ದಾರೆ. ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ತೆಗೆದುಕೊಂಡ ನಿರ್ಧಾರವನ್ನು ಅವರು ಟೀಕಿಸಿದರು. ಕಳೆದ ಐದು ತಿಂಗಳಿನಿಂದ ರಾಣಾ ಒಂದೇ ಒಂದು ಪಂದ್ಯ ಆಡದಿದ್ದರೂ ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಂಡಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ಶಮಿ ಸೇರಿದಂತೆ ಇತರ ಆಟಗಾರರ ಫಿಟ್ನೆಸ್ ಬಗ್ಗೆ ಪ್ರಶ್ನಿಸುವ ನೀವು ಹರ್ಷಿತ್ ರಾಣಾ ಅವರನ್ನು ಹೇಗೆ ಆಯ್ಕೆ ಮಾಡಿದ್ದೀರಿ? ಅವರ ಮೊಣಕಾಲು ಶಸ್ತ್ರಚಿಕಿತ್ಸೆಯ ನಂತರ ಅವರು ಯಾವುದೇ ದೇಶೀಯ ಪಂದ್ಯಗಳನ್ನು ಆಡಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಅವರನ್ನ ಯಾವ ಮಾನ ದಂಡದ ಮೇಲೆ ಆಯ್ಕೆ ಮಾಡಲಾಗಿದೆ, ಇದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ಇಂತಹ ಸನ್ನಿವೇಶದಲ್ಲಿ ಮೊಹಮ್ಮದ್ ಶಮಿ ಮತ್ತು ಇತರರ ಮನಸ್ಸಿನಲ್ಲಿ ಏನೆಲ್ಲಾ ಓಡುತ್ತಿರಬಹುದು ಎಂದು ಊಹಿಸಿ” ಎಂದು ಗಂಭೀರ್​ ಹಾಗೂ ಅಗರ್ಕರ್​​ರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಶಮಿಗೊಂದು ನ್ಯಾಯ, ಹರ್ಷಿತ್​​ಗೊಂದು ನ್ಯಾಯ

ಮುಂದುವರಿಸಿ “ವಿರಾಟ್ ಕೊಹ್ಲಿ ಆಗಿರಲಿ ಅಥವಾ ರೋಹಿತ್ ಶರ್ಮಾ ಆಗಿರಲಿ, ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪ್ರತಿಯೊಬ್ಬ ಆಟಗಾರನೂ ದೇಶೀಯ ಕ್ರಿಕೆಟ್ ಆಡಬೇಕು ಎಂದು ಮ್ಯಾನೇಜ್‌ಮೆಂಟ್ ಹಿಂದೆ ಹೇಳಿತ್ತು. ಹಾರ್ದಿಕ್ ಪಾಂಡ್ಯ ಗಾಯಗೊಂಡಾಗ, ಆಯ್ಕೆಗಾಗಿ ಅವರ ಫಿಟ್ನೆಸ್ ಅನ್ನು ಸಾಬೀತುಪಡಿಸಲು ಅವರನ್ನು ಕೇಳಲಾಯಿತು. ಶಮಿ ಪ್ರಕರಣದಲ್ಲಿಯೂ ಗಾಯದ ನಂತರ ಅವರು ಹೇಗೆ ದೀರ್ಘ ಸ್ಪೆಲ್‌ಗಳನ್ನು ಬೌಲಿಂಗ್ ಮಾಡುತ್ತಾರೆ ಎಂಬ ಪ್ರಶ್ನೆಗಳನ್ನು ಎತ್ತಲಾಗುತ್ತದೆ ಮತ್ತು ಅವರು ತಮ್ಮನ್ನು ತಾವು ಸಾಬೀತುಪಡಿಸಲು ಕೇಳಲಾಗಿತ್ತು. ಆದರೆ ರಾಣಾ ವಿಷಯದಲ್ಲಿ ಅದ್ಯಾವುದು ಏಕೆ ನಡೆದಿಲ್ಲ” ಎಂದು ರಮೇಶ್ ಪ್ರಶ್ನಿಸಿದ್ದಾರೆ.

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡ

ಶ್ರೇಯಸ್ ಅಯ್ಯರ್ (ನಾಯಕ), ವರುಣ್ ಚಕ್ರವರ್ತಿ, ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಅರ್ಷದೀಪ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅಭಿಷೇಕ್ ಶರ್ಮಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ತಿಲಕ್ ವರ್ಮಾ, ಪ್ರಿನ್ಸ್ ಯಾದವ್, ಅಕ್ಷರ್ ಪಟೇಲ್ ಮತ್ತು ಶಿವಂ ದುಬೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Team India: 5 ತಿಂಗಳು ಕ್ರಿಕೆಟ್​​​ನಿಂದ ದೂರ ಉಳಿದವನಿಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್! ಗಂಭೀರ್ -ಅಗರ್ಕರ್ ವಿರುದ್ಧ ಸಿಡಿದೆದ್ದ ಮಾಜಿ ಕ್ರಿಕೆಟರ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed