Last Updated:
ಬಾಲಿವುಡ್ ಆ್ಯಕ್ಟರ್ ಸುಶಾಂತ್ ಸಿಂಗ್ ರಜಪೂರ್ ಸಾವಿನ ಸುತ್ತ ಇಂದಿಗೂ ಸಾಕಷ್ಟು ಪ್ರಶ್ನೆಗಳಿವೆ. ಆದರೆ, ಇದೀಗ ಈ ಸಾವಿನ ಸುತ್ತ ಒಂದು ಚಿತ್ರ ಬರ್ತಿದೆ. ಇದಕ್ಕೆ ಸಾರಿ ಬಾಬು ಅಂತ ಹೆಸರಿಟ್ಟಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಸುಮಾರು ವಿಷಯ ಹೇಳುತ್ತಿದೆ. ಚಿತ್ರ ತಂಡವೂ ಒಂದಷ್ಟು ಮಾಹಿತಿ ಕೊಟ್ಟಿದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಬಾಲಿವುಡ್ ನಾಯಕ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ಸುತ್ತ ಸುಮಾರು ವಿಚಾರಗಳಿವೆ. ರಿಯಾ ಚಕ್ರವರ್ತಿ (Rhea Chakraborty) ಕೊನೆಗಳಿಗೆಯಲ್ಲಿ ಸುಶಾಂತ್ ಸಿಂಗ್ (Sushant Singh) ಅವರಿಗೆ ಹೇಳಿರೋ “Sorry Babu” ಇದೀಗ ಸಿನಿಮಾ ಟೈಟಲ್ ಆಗಿದೆ. ಇದರ ಪೋಸ್ಟರ್ ಕೂಡ ಹೊರ ಬಂದಿದೆ. ಇದು ಇದೀಗ ಹೆಚ್ಚು ಕುತೂಹಲ ಮೂಡಿಸುತ್ತಿದೆ. ಇದರೊಟ್ಟಿಗೆ ಇದರಲ್ಲಿ ಏನು ಹೇಳ್ತಾರೆ ಅನ್ನುವ ಪ್ರಶ್ನೆಗಳು ಇವೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಈ ಚಿತ್ರದ ಡೈರೆಕ್ಟರ್ ಯಾರು
(ಚಿತ್ರ ಕೃಪೆ: ಸುಜೀತ್ ಸಿಂಗ್ ರಾಥೋಡ್ ಇನ್ಸ್ಟಾಗ್ರಾಮ್)
ಈ ಒಂದು ಮಾತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಒಂದು ಮಾತನ್ನೆ ಇದೀಗ ಸಿನಿಮಾ ಟೈಟಲ್ ಆಗಿ ಇಡಲಾಗಿದೆ. ಈ ಒಂದು ಪ್ರಕರಣದ ವಿಷಯವನ್ನ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ.
ಈ ಚಿತ್ರದ ಪೋಸ್ಟರ್ ಹೆಚ್ಚು ಕುತೂಹಲ ಮೂಡಿಸಿದೆ. ಆದರೆ, ಈ ಒಂದು ಮಾತನ್ನ ಕೂಪರ್ ಆಸ್ಪತ್ರೆಯ ಶವಾಗಾರದಲ್ಲಿಯೇ ಪ್ರೇಯಸಿ ರಿಯಾ ಚಕ್ರವರ್ತಿ ಹೇಳಿದ್ದಾರೆ ಎನ್ನಲ್ಲಾಗಿದೆ.
ಸುಶಾಂತ್ ಸಿಂಗ್ ದೇಹವನ್ನ ನೋಡಿದಾಗ ರಿಯಾ ಚಕ್ರವರ್ತಿ ಬಾಯಿಂದ ಈ ಒಂದು ಮಾತು ಬಂದಿದೆ. ಈ ಸಮಯದಲ್ಲಿ ಸುಜೀತ್ ಸಿಂಗ್ ರಾಥೋಡ್ ಕೂಡ ಪಾರ್ಥಿವ ಶರೀರದ ದರ್ಶನ ಪಡೆದಿದ್ದರು.
ಇದೇ ವಿಚಾರವೇ ಈಗ ಇಂಟ್ರಸ್ಟಿಂಗ್ ಆಗಿದೆ. ಸಾರಿ ಬಾಬು ಚಿತ್ರದ ನಾಯಕರಾಗಿ ಅದೇ ಸುಜೀತ್ ಸಿಂಗ್ ರಾಥೋಡ್ ಅವರೇ ಅಭಿನಯಿಸುತ್ತಿದ್ದಾರೆ.
ಈ ಚಿತ್ರದ ಡೈರೆಕ್ಟರ್ ಯಾರು
(ಚಿತ್ರ ಕೃಪೆ: ಸುಜೀತ್ ಸಿಂಗ್ ರಾಥೋಡ್ ಇನ್ಸ್ಟಾಗ್ರಾಮ್)
ಸುಶಾಂತ್ ಸಿಂಗ್ ಕೊನೆಗಳಿಗೆಯಲ್ಲಿ ಸುಜೀತ್ ಸಿಂಗ್ ರಾಥೋಡ್ ಇದ್ದರು. ಹಾಗಾಗಿಯೇ ಈ ಚಿತ್ರದಲ್ಲಿ ಕೂಪರ್ ಆಸ್ಪತ್ರೆಯಲ್ಲಿ ಏನೆಲ್ಲ ಆಯಿತು ಅನ್ನೋದು ಇವರಿಗೆ ತಿಳಿದಿದೆ. ಈ ಕಾರಣಕ್ಕೆ ಈ ಚಿತ್ರದಲ್ಲಿ ಅಸಲಿ ಸತ್ಯ ಹೊರ ಬರುತ್ತದೆ ಅನ್ನುವ ನಿರೀಕ್ಷೆ ಇದೆ. ಅಷ್ಟೆ ಕುತೂಹಲವೂ ಇದೆ.
ಸಾರಿ ಬಾಬು ಚಿತ್ರವನ್ನ ದೀಪಕ್ ಭಾಗವತ್ ಡೈರೆಕ್ಷನ್ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಚಿತ್ರದ ಪೋಸ್ಟರ್ ಹೊರ ಬಂದಿದೆ. ಚಿತ್ರೀರಕಣದ ಇತರ ಮಾಹಿತಿ ಇನ್ನಷ್ಟೆ ಹೊರ ಬರ್ತವೆ ಅಂತಲೂ ಸುದ್ದಿ ಇದೆ.
ಸುಜೀತ್ ಸಿಂಗ್ ರಾಥೋಡ್ ಈ ಚಿತ್ರದ ಫಸ್ಟ್ ಲುಕ್ ಅನ್ನ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನ ತಮ್ಮ ಪೇಜ್ ಅಲ್ಲಿಯೇ ಈ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ. “THE TRUTH WILL BE REVEALED SOON…” ಅಂತಲೂ ಬರೆದುಕೊಂಡಿದ್ದಾರೆ.
ಈ ಚಿತ್ರವನ್ನ ಎಸ್.ಎಸ್.ಆರ್. ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಹಾಗೆ ಈ ಚಿತ್ರದ ಕತೆಯನ್ನ ಸುಜೀತ್ ಸಿಂಗ್ ರಾಥೋಡ್ ಬರೆದಿದ್ದಾರೆ. ಇದಕ್ಕೆ ಚಿತ್ರಕತೆ ಮತ್ತು ನಿರ್ದೇಶನವನ್ನ ದೀಪಕ್ ಭಾಗವತ್ ಮಾಡುತ್ತಿದ್ದಾರೆ.
ಈ ಚಿತ್ರ ಈ ವರ್ಷ ಏನೂ ಬರೋದಿಲ್ಲ. ಮುಂದಿನ ವರ್ಷ ಅಂದ್ರೆ 2027 ಕ್ಕೆ ಬರುತ್ತದೆ. ಈ ವಿಚಾರ ಕೂಡ ಪೋಸ್ಟರ್ ಅಲ್ಲೂ ಇನ್ಸ್ಟಾಗ್ರಾಪ್ ಪೋಸ್ಟ್ ಅಲ್ಲೂ ಇದೆ. ಆದರೆ, ಈ ಸಿನಿಮಾ ಬರುವ ಹೊತ್ತಿಗೆ ಏನೆಲ್ಲ ಆಗುತ್ತದೆಯೋ ಏನೋ.
Mumbai,Maharashtra
Jun 15, 2026 10:06 PM IST













