Last Updated:
ಬಹುನಿರೀಕ್ಷಿತ 2026ರ ಏಷ್ಯನ್ ಗೇಮ್ಸ್ ಅನ್ನು ಜಪಾನ್ ಆಯೋಜಿಸುತ್ತಿದೆ. ಈ ಮೆಗಾ ಕ್ರೀಡಾಕೂಟಕ್ಕೆ ಬಿಸಿಸಿಐ ಭಾರತದ ಬಿ ತಂಡವನ್ನು ಕಳುಹಿಸಲು ತಯಾರಿ ನಡೆಸುತ್ತಿದೆ.
ಜಪಾನ್(Japan)ನಲ್ಲಿ ನಡೆಯುವ ಏಷ್ಯನ್ ಗೇಮ್ಸ್(Asian Games)ನಲ್ಲಿ ಆಟಗಾರರ ವಸತಿ ಮತ್ತು ಇತರ ಸೌಲಭ್ಯಗಳ ಬಗ್ಗೆ ಬಿಸಿಸಿಐ (BCCI) ಸಂಪೂರ್ಣವಾಗಿ ಸಂತೋಷವಾಗಿಲ್ಲ. ಅಲ್ಲಿನ ವ್ಯವಸ್ಥೆಗಳಿಂದ ಬಿಸಿಸಿಐ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಎರಡೂ ಅತೃಪ್ತವಾಗಿವೆ. ಆದ್ದರಿಂದ ಭಾರತ(India)ದ ಮುಖ್ಯ ತಂಡವನ್ನು ಕಳುಹಿಸುವ ಬದಲು ಬಿ ತಂಡವನ್ನು ಜಪಾನ್ಗೆ ಕಳುಹಿಸುವ ಯೋಚನೆ ನಡೆಯುತ್ತಿದೆ. ಈ ಮೆಗಾ ಕ್ರೀಡಾಕೂಟ ಸೆಪ್ಟೆಂಬರ್ 19 ರಂದು ಜಪಾನ್ನ ಐಚಿ-ನಗೋಯಾ(Aichi-Nagoya)ದಲ್ಲಿ ಆರಂಭವಾಗಲಿದೆ.














