Team India: ಆ ವಿಚಾರವಾಗಿ ಗಂಭೀರ್ ಮತ್ತು ಅಗರ್ಕರ್ ನಡುವಿನ ಸಂಘರ್ಷ! ಕ್ರಿಕೆಟ್​​ ವಲಯದಲ್ಲಿ ಕಿಚ್ಚೆಬ್ಬಿಸಿದ ಮಾಜಿ ಕ್ರಿಕೆಟರ್ ಹೇಳಿಕೆ | ಕ್ರೀಡಾ ಸುದ್ದಿ | ACTPnews

ಗೌತಮ್ ಗಂಭೀರ್- ಅಜಿತ್ ಅಗರ್ಕರ್


Last Updated:

ಸತತ ಎರಡು ಟಿ20 ಸರಣಿಗಳನ್ನ ಕಳೆದುಕೊಂಡ ನಂತರ ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್ ವಿರುದ್ಧ ತೀವ್ರ ಟೀಕೆಗೆ ದಾರಿ ಮಾಡಿಕೊಟ್ಟಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಪ್ಲೇಯುಂಗ್ XI ನಲ್ಲಿ ಆಗಾಗ್ಗೆ ಬದಲಾವಣೆಗಳು ಮತ್ತು ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್ ಅವರನ್ನು ಬದಿಗಿಡುವ ನಿರ್ಧಾರವು ತೀವ್ರ ಟೀಕೆಗೆ ಗುರಿಯಾಯಿತು. ಇದರ ಮಧ್ಯೆ ಗಂಭೀರ್​​​​​- ಅಗರ್ಕರ್ ನಡುವಿನ ಮನಸ್ಥಾಪ ಮತ್ತೊಮ್ಮೆ ಸುದ್ದಿಯಾಗಿದೆ.

ಗೌತಮ್ ಗಂಭೀರ್- ಅಜಿತ್ ಅಗರ್ಕರ್
ಗೌತಮ್ ಗಂಭೀರ್- ಅಜಿತ್ ಅಗರ್ಕರ್

ಟೀಮ್ ಇಂಡಿಯಾ ಇತ್ತೀಚೆಗೆ ಟಿ20 ಸರಣಿಗಳಲ್ಲಿ (T20 Series) ಅವಮಾನಕರ ಸೋಲುಗಳನ್ನು ಎದುರಿಸಿದೆ. ಇದು ಭಾರತದ ಕ್ರಿಕೆಟ್ ಇತಿಹಾಸದಲ್ಲೇ ಕೇಳಿ ಕಂಡರಿಯದಂತಹ ಸೋಲುಗಳಾಗಿದ್ದವು. ಭಾರತ ಟಿ20 ವಿಶ್ವ ಚಾಂಪಿಯನ್ (T20 World Champions) ಆಗಿ ಐರಿಶ್ ನೆಲಕ್ಕೆ ಕಾಲಿಟ್ಟಿತ್ತು. ಆದರೆ ಆತಿಥೇಯ ತಂಡದ ಕೈಯಲ್ಲಿ 2-0 ಕ್ಲೀನ್ ಸ್ವೀಪ್ ಅನುಭವಿಸಿತು. ಮತ್ತೆ ತಂಡ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿತು. ಅಲ್ಲಿಯೂ ಆತಿಥೇಯರ ವಿರುದ್ಧ 0-4ರ ಅಂತರದಿಂದ ವೈಟ್‌ವಾಶ್ ಮುಖಭಂಗ ಅನುಭವಿಸಿತು. ಇದು ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಸರಣಿ ಸೋಲಾಗಿತ್ತು.

ಈ ಫಲಿತಾಂಶದ ನಂತರ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವಿರುದ್ಧ ತೀವ್ರ ಟೀಕೆಗೆ ದಾರಿ ಮಾಡಿಕೊಟ್ಟಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಪ್ಲೇಯಿಂಗ್ XI ನಲ್ಲಿ ಆಗಾಗ್ಗೆ ಬದಲಾವಣೆಗಳು ಮತ್ತು ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್ ಅವರನ್ನು ಬದಿಗಿಡುವ ನಿರ್ಧಾರವು ತೀವ್ರ ಟೀಕೆಗೆ ಗುರಿಯಾಯಿತು.

ಗಂಭೀರ್​ vs ಅಗರ್ಕರ್ ನಡುವೆ ಮುನಿಸು

ಇದಲ್ಲದೆ, ಈ ಹಿಂದೆ ಮ್ಯಾನೇಜ್‌ಮೆಂಟ್ ನಡುವೆ ಬಿರುಕು ಸೂಚಿಸುವ ವರದಿಗಳು ಹೊರಹೊಮ್ಮಿದ್ದವು ಎಂಬುದು ತಿಳಿದಿರುವ ವಿಷಯ. ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಶ್ರೇಯಸ್ ಅಯ್ಯರ್ ಅವರನ್ನು ಹೊಸ ಟಿ 20 ನಾಯಕನನ್ನಾಗಿ ನೇಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಈ ಕ್ರಮವನ್ನು ಬಲವಾಗಿ ವಿರೋಧಿಸಿದ್ದರು. ಸೋಲುಗಳ ಸರಮಾಲೆಯ ನಡುವೆ, ಈ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ದಿನೇಶ್ ಕಾರ್ತಿಕ್ ಶಾಕಿಂಗ್ ಹೇಳಿಕೆ

ಭಾರತದ ಸತತ ವೈಫಲ್ಯಗಳ ನಡುವೆ ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್  ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ. ಗಂಭೀರ್ ಮತ್ತು ಅಗರ್ಕರ್ ನಡುವಿನ ಭಿನ್ನಾಭಿಪ್ರಾಯಗಳೇ ಭಾರತೀಯ ತಂಡದ ಕಳಪೆ ಸ್ಥಿತಿಗೆ ಕಾರಣ ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ, ಅವರ ವರ್ತನೆ ಆಟಗಾರರಲ್ಲಿ ಗೊಂದಲವನ್ನು ಸೃಷ್ಟಿಸಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ” ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದಾರೆ. ದೀರ್ಘಾವಧಿಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಬಲಿಷ್ಠ ತಂಡವನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ. ಆದರೆ ಕೋಚ್ ಗಂಭೀರ್ ವಿಭಿನ್ನ ಆಲೋಚನೆವುಳ್ಳವರಾಗಿದ್ದಾರೆ. ಅವರಿಗೆ ಪ್ರತಿಯೊಂದು ಪಂದ್ಯ ಮತ್ತು ಪ್ರತಿ ಸರಣಿಯನ್ನು ಗೆಲ್ಲಬೇಕೆಂದು ಬಯಸುತ್ತಾರೆ.

 ಆಟಗಾರರ ಮೇಲೆ ಪರಿಣಾಮ

ದೀರ್ಘಾವಧಿಗೆ ಆದ್ಯತೆ ನೀಡುವ  ಆಲೋಚನೆ ಮತ್ತು  ತಕ್ಷಣದ ಫಲಿತಾಂಶಗಳ ಮೇಲೆ ಕೇಂದ್ರೀಕರಿಸುವ ದೃಷ್ಟಿಕೋನ ಇಬ್ಬರ ನಡುವೆ ಬಹುಶಃ  ಸಂಘರ್ಷಕ್ಕೆ ಕಾರಣವಾಗಿರಬಹುದು. ಇದು ಆಟಗಾರರ ಮನಸ್ಸಿನಲ್ಲಿ ಗೊಂದಲವನ್ನು ಸೃಷ್ಟಿಸಲಿದೆ. ಮುಖ್ಯ ಆಯ್ಕೆದಾರ ಮತ್ತು ತರಬೇತುದಾರರ ನಡುವಿನ ಈ ಚಿಂತನೆಯ ವ್ಯತ್ಯಾಸವು ಆಟಗಾರರಿಗೆ ಪ್ರಯೋಜನಕಾರಿಯೇ? ನಾನು ಖಂಡಿತವಾಗಿಯೂ ಇಲ್ಲ ಎಂದು ಹೇಳುತ್ತೇನೆ.

ಅಂತಹ ಸಂದರ್ಭಗಳಲ್ಲಿ, ಆಟಗಾರರು ತಂಡದಲ್ಲಿ ತಮ್ಮ ಸ್ಥಾನಗಳ ಬಗ್ಗೆ ಅಸುರಕ್ಷಿತ ಭಾವನೆ ಹೊಂದಲು ಪ್ರಾರಂಭಿಸುತ್ತಾರೆ, ಇದು ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಈ ವ್ಯತ್ಯಾಸಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಿದರೆ ತಂಡಕ್ಕೆ ಉತ್ತಮ,” ಎಂದು ದಿನೇಶ್ ಕಾರ್ತಿಕ್ ಸಲಹೆ ನೀಡಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Team India: ಆ ವಿಚಾರವಾಗಿ ಗಂಭೀರ್ ಮತ್ತು ಅಗರ್ಕರ್ ನಡುವಿನ ಸಂಘರ್ಷ! ಕ್ರಿಕೆಟ್​​ ವಲಯದಲ್ಲಿ ಕಿಚ್ಚೆಬ್ಬಿಸಿದ ಮಾಜಿ ಕ್ರಿಕೆಟರ್ ಹೇಳಿಕೆ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed