Last Updated:
ಸ್ವಿಸ್ ಇಂಟರ್‌ನ್ಯಾಷನಲ್ ಏರ್ ಲೈನ್ಸ್ ಬೆಂಗಳೂರು ಮತ್ತು ಜ್ಯೂರಿಕ್ ನಡುವೆ ಹೊಸ ನೇರ ವಿಮಾನ ಸೇವೆಯನ್ನು ಅಕ್ಟೋಬರ್ 28, 2026 ರಿಂದ ಆರಂಭಿಸಲಿದೆ. ವಾರದಲ್ಲಿ ಐದು ದಿನ ಕಾರ್ಯಾಚರಣೆ ನಡೆಯಲಿದೆ.
ಬೆಂಗಳೂರು: ಸ್ವಿಸ್ ಇಂಟರ್‌ನ್ಯಾಷನಲ್ ಏರ್ ಲೈನ್ಸ್ (SWISS) ದಕ್ಷಿಣ ಭಾರತದ ಪ್ರಯಾಣಿಕರಿಗೆ (Tourist) ಮತ್ತಷ್ಟು ಸುಲಭ ಹಾಗೂ ನೇರ ಸಂಪರ್ಕ ಕಲ್ಪಿಸುವ ಸಲುವಾಗಿ, ಬೆಂಗಳೂರು (Bengaluru) ಮತ್ತು ಜ್ಯೂರಿಕ್ ನಡುವೆ ಹೊಸ ನಾನ್-ಸ್ಟಾಪ್ ವಿಮಾನ ಸೇವೆಯನ್ನು (Air Service) ಅಕ್ಟೋಬರ್ 28, 2026 ರಿಂದ ಅಧಿಕೃತವಾಗಿ ಆರಂಭಿಸಲಿದೆ. ಈ ಹೊಸ ಸೇವೆಯು ಸ್ವಿಟ್ಜರ್ಲೆಂಡ್‌ಗೆ (Switzerland) ನೇರ ಸಂಪರ್ಕ ಕಲ್ಪಿಸುವುದಲ್ಲದೆ, ಯುರೋಪ್ ಮತ್ತು ವಿವಿಧ ಪ್ರಮುಖ ತಾಣಗಳಿಗೆ ತೆರಳುವವರಿಗೆ ಅತ್ಯುತ್ತಮ ಅವಕಾಶ ಕಲ್ಪಿಸಲಿದೆ.
LX 141 (ಬೆಂಗಳೂರು – ಜ್ಯೂರಿಕ್): ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 04:50ಕ್ಕೆ ಹೊರಟು, ಅದೇ ದಿನ ಬೆಳಿಗ್ಗೆ 10:50ಕ್ಕೆ ಜ್ಯೂರಿಕ್ ತಲುಪಲಿದೆ. (ಪ್ರಯಾಣದ ಅಂದಾಜು ಸಮಯ ಸುಮಾರು 10 ಗಂಟೆ 35 ನಿಮಿಷಗಳು). LX 140 (ಜ್ಯೂರಿಕ್ – ಬೆಂಗಳೂರು): ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 13:20ಕ್ಕೆ ಹೊರಟು, ಮರುದಿನ ಬೆಳಗಿನ ಜಾವ 02:55ಕ್ಕೆ ಬೆಂಗಳೂರು ತಲುಪಲಿದೆ. (ಪ್ರಯಾಣದ ಅಂದಾಜು ಸಮಯ ಸುಮಾರು 9 ಗಂಟೆ 05 ನಿಮಿಷಗಳು).
ಜ್ಯೂರಿಕ್ ಮುಖಾಂತರ ಆಮ್‌ಸ್ಟರ್‌ಡ್ಯಾಮ್, ಜಿನೀವಾ, ನೈಸ್, ಪ್ಯಾರಿಸ್, ಲಂಡನ್, ಚಿಕಾಗೋ, ಬೋಸ್ಟನ್ ಮತ್ತು ಟೊರೊಂಟೊ ಮುಂತಾದ ಪ್ರಮುಖ ಜಾಗತಿಕ ನಗರಗಳಿಗೆ ಮುಂದಿನ ಸಂಪರ್ಕವನ್ನು (Connecting Flights) ಲುಫ್ಥಾನ್ಸಾ ಗ್ರೂಪ್ ನೆಟ್‌ವರ್ಕ್ ಮೂಲಕ ಪಡೆದುಕೊಳ್ಳಬಹುದು. ಉದ್ಯಮ ಹಾಗೂ ಪ್ರವಾಸೋದ್ಯಮದಲ್ಲಿ ತೊಡಗಿರುವವರಿಗೆ ಈ ಸೇವೆ ಅತ್ಯಂತ ಅನುಕೂಲಕರವಾಗಲಿದೆ.













