Rachita Ram: ಪ್ರೇಮದ ಊರಲಿ ಚಿತ್ರಕ್ಕೆ ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಥ್; ಹೇಳಿದ್ದೇನು ಗೊತ್ತಾ? | | ACTPnews

Rachita Ram congratulates Premada Oorali movie team


ಪ್ರೇಮದ ಊರಲಿ….

ಪ್ರೇಮದ ಊರಲಿ ಚಿತ್ರ ತಂಡದಲ್ಲಿ ನನ್ನ ನೆಚ್ಚಿನ ನಟ ರಂಗಾಯಣ ರಘು ಇದ್ದಾರೆ. ನಾಯಕ ನಟ ಶ್ರೀರಾಮ್, ನಟಿಯರಾದ ತಪಸ್ವಿನಿ , ರಿಮಿಕಾ ಶಿವು ಅವರಿಗೆ ಅಭಿನಂದನೆ ಹೇಳುತ್ತೇನೆ.

ಟೆಕ್ನಿಷನ್‌ಗಳಿಗೆ ಅಭಿನಂದನೆ
(ಚಿತ್ರ ಕೃಪೆ: ರಚಿತಾ ರಾಮ್)

ಇವರ ಈ ಚಿತ್ರವನ್ನ ಜನ ಮೆಚ್ಚಿಕೊಂಡಿದ್ದಾರೆ. ಉತ್ತಮ ಕಂಟೆಂಟ್‌ನ ಚಿತ್ರಗಳನ್ನ ಜನ ಸ್ವೀಕರಿಸುತ್ತಾರೆ. ಪ್ರೇಮದ ಊರಲಿ ಸಿನಿಮಾ ಜನರ ಮೆಚ್ಚುಗೆ ಪಡೆದುಕೊಂಡಿದೆ.

ಡೈರೆಕ್ಟರ್‌ಗೆ ಅಭಿನಂದನೆ

ಡೈರೆಕ್ಟರ್ ಮನೋಜ್ ಕುಮಾರ್ ಅವರಿಗೆ ಅಭಿನಂದನೆ ಹೇಳುತ್ತೇನೆ. ಕಾರಣ, ಒಂದು ಚೆಂದದ ಕಥೆಯನ್ನ ಜನರಿಗೆ ತಲುಪಿಸಿದ್ದಾರೆ. ಹಾಗೆ ಎಲ್ಲರ ಹೃದಯ ತಟ್ಟುವಲ್ಲಿ ಯಶಸ್ವಿ ಆಗಿದ್ದಾರೆ.

ಒಳ್ಳೆ ಕಥೆಗೆ ಗೆಲುವು ಗ್ಯಾರಂಟಿ

ಒಂದು ಒಳ್ಳೆ ಕಥೆ, ಉತ್ತಮ ಚಿತ್ರಕತೆ ಇದ್ದರೆ ಆಯಿತು. ಅದು ಜನರ ಹೃದಯ ಮುಟ್ಟಿದರೆ ದೊಡ್ಡ ಗೆಲುವು ಪಕ್ಕಾನೆ ಬಿಡಿ. ಈ ಚಿತ್ರದ ವಿಚಾರದಲ್ಲೂ ಅದೇ ಆಗಿದೆ.

ನಾವೆಲ್ಲ ಒಂದೇ ಚಿತ್ರರಂಗದವರು ಅಲ್ಲವೇ? ಇಂತಹ ಗೆಲುವು ಎಲ್ಲರಿಗೂ ಖುಷಿ ಕೊಡುತ್ತದೆ. ಹೆಮ್ಮೆನೂ ಆಗುತ್ತದೆ ಅಂತಲೇ ರಚಿತಾ ರಾಮ್ ಹೇಳಿಕೊಂಡಿದ್ದಾರೆ.

ಟೆಕ್ನಿಷನ್‌ಗಳಿಗೆ ಅಭಿನಂದನೆ

ಈ ಚಿತ್ರದ ಹಿಂದೆ ಅನೇಕರು ಕೆಲಸ ಮಾಡಿದ್ದಾರೆ. ನಿರ್ದೇಶಕರು, ನಿರ್ಮಾಪಕರು, ಲಿರಿಕ್ ರೈಟರ್, ಮ್ಯೂಸಿಕ್ ಡೈರೆಕ್ಟರ್ ಹೀಗೆ ಇವರಿಗೂ ರಚಿತಾ ರಾಮ್ ಅಭಿನಂದನೆ ಹೇಳಿದ್ದಾರೆ.

Rachita Ram congratulates Premada Oorali movie team

ಡೈರೆಕ್ಟರ್‌ಗೆ ಅಭಿನಂದನೆ
(ಚಿತ್ರ ಕೃಪೆ: ರಮಿಕಾ ಶಿವು ಇನ್​ಸ್ಟಾಗ್ರಾಮ್)

ಪ್ರೇಮದ ಊರಲಿ ಚಿತ್ರ ತಂಡ ಮುಂದೇನೂ ಒಳ್ಳೆ ಚಿತ್ರಗಳನ್ನ ಕೊಡಲಿ, ಇಡಿ ತಂಡಕ್ಕೆ ಒಳ್ಳೆಯದಾಗಲಿ ಅಂತಲೇ ರಚಿತಾ ರಾಮ್ ಶುಭ ಕೋರಿದ್ದಾರೆ ಅಂತ ಹೇಳಬಹುದು.

ಪ್ರೇಮದ ಊರಲಿ…

ಪ್ರೇಮದ ಊರಲಿ ಚಿತ್ರಕ್ಕೆ ಕನ್ನಡದ ಕಲಾವಿದರು ಸಪೋರ್ಟ್ ಮಾಡ್ತಿದ್ದಾರೆ. ಶಿವರಾಜ್ ಕುಮಾರ್ ಚಿತ್ರ ಚೆನ್ನಾಗಿದೆ ಅಂತ ಹೊಗಳಿದ್ದಾರೆ.

ಸಕ್ಸಸ್ ಮೀಟ್

ಪ್ರೇಮದ ಊರಲಿ ಚಿತ್ರ ತಂಡ ಸಕ್ಸಸ್ ಮೀಟ್ ಮಾಡಿದೆ. ಇಲ್ಲಿ ಚಿತ್ರ ತಂಡ ತಮ್ಮ ಅನುಭವ ಹಂಚಿಕೊಂಡಿದೆ. ಸಿನಿಮಾ ಮೇಕಿಂಗ್ ಹಿಂದಿನ ವಿಚಾರಗಳನ್ನು ಹೇಳಿಕೊಂಡಿದೆ.

ನಿರ್ದೇಶಕ ಮನೋಜ್ ಕುಮಾರ್ ತಮ್ಮ ಚಿತ್ರ ಜೀವನದ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಒಟ್ಟಾರೆ, ಪ್ರೇಮದ ಊರಲಿ ಸಿನಿಮಾ ತಂಡ ಈ ವರ್ಷದ ಬಿಗೆಸ್ಟ್ ಹಿಟ್ ಸಿನಿಮಾ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports