Komal Kumar: ನಾನಾ ಪಾಟೇಕರ್ ‘ಯಕ್ಷ’ ಚಿತ್ರದ ದೃಶ್ಯ ಹಂಚಿಕೊಂಡ ಕೋಮಲ್! ಹೇಳಿದ್ದೇನು ಗೊತ್ತಾ? | | ACTPnews

Komal Kumar Share his Yaksha Movie Scene with Nana Patekar on social media


ಕೋಮಲ್ ಹೇಳಿದ್ದೇನು

ಕೋಮಲ್ ಕುಮಾರ್ ಈ ಯಕ್ಷ ಚಿತ್ರದಲ್ಲಿ ಪೊಲೀಸ್ ರೋಲ್ ಮಾಡಿದ್ದಾರೆ. ನಾನಾ ಪಾಟೇಕರ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.

ಗೋಡೆಗೆ ಜೀವ ಇಲ್ಲ..

ನಾನಾ ಪಾಟೇಕರ್ ಅವರ ಜೊತೆಗಿನ ತಮ್ಮ ದೃಶ್ಯಗಳನ್ನು ಶೇರ್ ಮಾಡಿದ್ದಾರೆ. ಅಭಿನಯ, ಡೈಲಾಗ್ ಹೇಳುವ ರೀತಿ, ಯಕ್ಷ ಅನ್ನುವ ಪದ ಅರ್ಥ ಹೇಳುವ ರೀತಿ, ಹೀಗೆ ನಾನಾ ಪಾಟೇಕರ್ ಅವರ ಅಭಿನಯದ ಝಲಕ್ ಕೊಡುವ ದೃಶ್ಯಗಳನ್ನ ಹಂಚಿಕೊಂಡಿದ್ದಾರೆ.

ನಾನಾ ಬಗ್ಗೆ ಕೋಮಲ್ ಸಾಲು

ನಾನಾ ಪಾಟೇಕರ್ ಬಗ್ಗೆ ಕೋಮಲ್ ಕೆಲವು ಸಾಲು ಬರೆದಿದ್ದಾರೆ. ಇಂಗ್ಲಿಷ್ ಅಲ್ಲಿ ಬರೆದ ಈ ಸಾಲುಗಳು ಹೀಗೆ ಇವೆ.

A truly brilliant actor and one of the finest of our generation.

Grateful to have had the privilege of working with him.

Rest in peace, sir

You will always be remembered.

Om Shanthi.

ಇದರ ಕನ್ನಡದ ಅರ್ಥ ಹೀಗಿದೆ; ನಮ್ಮ ಕಾಲದ ಅದ್ಭುತ ಹಾಗೂ ಶ್ರೇಷ್ಠ ನಟರಲ್ಲಿ ನೀವು ಒಬ್ಬರು. ನಿಮ್ಮ ಜೊತೆಗೆ ಕೆಲಸ ಮಾಡುವ ಭಾಗ್ಯ ಸಿಕ್ಕಿರೋದಕ್ಕೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ.

ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್. ನಿಮ್ಮನ್ನ ನಾವು ಸದಾ ನೆನಪಿಸಿಕೊಳ್ತಾನೇ ಇರ್ತೀವಿ ಅಂತಲೇ ಕೋಮಲ್ ಬರೆದ ಸಾಲಿನ ಅರ್ಥವಾಗಿದೆ.

ಕೋಮಲ್ ಡೈಲಾಗ್

ಕೋಮಲ್ ಹಂಚಿಕೊಂಡ ದೃಶ್ಯಗಳು ಗಮನ ಸೆಳೆಯುತ್ತವೆ. ಇದರಲ್ಲಿ ಕೋಮಲ್ ಮತ್ತು ನಾನಾ ಪಾಟೇಕರ್ ಡೈಲಾಗ್ ಇವೆ. ಕೋಮಲ್ ಅವರಿಗೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಅಂತ ನಾನಾ ಪಾಟೇಕರ್ ಕೇಳ್ತಾರೆ.

Komal Kumar Share his Yaksha Movie Scene with Nana Patekar on social media

ಕೋಮಲ್ ಡೈಲಾಗ್
(ಚಿತ್ರ ಕೃಪೆ: ಕೋಮಲ್ ಕುಮಾರ್ ಇನ್​ಸ್ಟಾಗ್ರಾಮ್)

ಈ ಪ್ರಶ್ನೆಗೆ ಕೋಮಲ್ ಉತ್ತರ ಕೊಡ್ತಾರೆ. ನಾನು ಸತ್ತರು ಪರವಾಗಿಲ್ಲ. ಮನೆಯವರು ನೆಮ್ಮದಿಯಾಗಿ ಜೀವನ ನಡೆಸಬಹುದು. ಅಷ್ಟು ದುಡ್ಡು ಇದೆ ಅಂತಲೇ ಕೋಮಲ್ ಹೇಳ್ತಾರೆ.

ಗೋಡೆಗೆ ಜೀವ ಇಲ್ಲ..

ಆದರೆ, ಒಂದು ಡೈಲಾಗ್ ಮುಂಚೆ ನಾನಾ ಪಾಟೇಕರ್ ಒಂದು ಮಾತು ಹೇಳಿರುತ್ತಾರೆ. ಅದನ್ನ ಕೋಮಲ್ ಇಲ್ಲಿ ರಿಪೀಟ್ ಮಾಡ್ತಾರೆ.

ನಾನು ಏನು ಹೇಳ್ತಾ ಇದ್ದೆ ಅಂತಲೇ ನಾನಾ ಪಾಟೇಕರ್ ಕೇಳ್ತಾರೆ. “ಗೋಡೆಗೆ ಜೀವ ಇಲ್ಲ. ಆದರೆ, ಕಿವಿ ಇದೆ” ಅಂತಲೇ ಹೇಳ್ತಾ ಇದ್ರಿ ಅಂತಲೇ ಕೋಮಲ್ ಹೇಳ್ತಾರೆ. ಇದು ಯಕ್ಷ ಚಿತ್ರದ ಡೈಲಾಗ್ ಆಗಿದೆ.

ಯಕ್ಷ ಅಂದ್ರೆ ಏನು

ಈ ಯಕ್ಷ ಚಿತ್ರದಲ್ಲಿ ಯಕ್ಷ ಅನ್ನೋದರ ಅರ್ಥ ಏನು ಅನ್ನೋದನ್ನ ನಾನಾ ಪಾಟೇಕರ್ ಇಲ್ಲಿ ವಿವರಿಸಿದ್ದಾರೆ. ಯಕ್ಷ ಅಂದ್ರೆ ಪ್ರಕೃತಿಯ ರಕ್ಷಕ ಅಂತಲೇ ನಾನಾ ಹೇಳ್ತಾ ಹೋಗ್ತಾರೆ.

ತಮ್ಮ ಖಡಕ್ ಧ್ವನಿಯಲ್ಲಿಯೇ ನಾನಾ ಪಾಟೇಕರ್ ಈ ಡೈಲಾಗ್ ಹೇಳ್ತಾರೆ. ಇವರ ಧ್ವನಿಯಲ್ಲಿ ಮಾತುಗಳನ್ನ ಕೇಳೋದೇ ಚೆಂದ ಬಿಡಿ. ಕೇಳುಗರಿಗೆ ಸೀರಿಯಸ್‌ನೆಸ್ ಬಂದೇ ಬಿಡುತ್ತದೆ.

ಹಾಗೆ ಈ ಚಿತ್ರದಲ್ಲಿ ಹಲವು ಖಡಕ್ ಡೈಲಾಗ್ ಹೇಳಿದ್ದಾರೆ. ಲೂಸ್ ಮಾದಾ ಯೋಗಿ ಈ ಚಿತ್ರದಲ್ಲಿ ನಾನಾ ಪಾಟೇಕರ್ ಮಗನ ಪಾತ್ರ ಮಾಡಿದ್ದಾರೆ. ರಮೇಶ್ ಭಾಗವತರ್ ಡೈರೆಕ್ಷನ್ ಮಾಡಿದ್ದಾರೆ. ಯೋಗಿ ತಂದೆ ಸಿದ್ದರಾಜು ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports