Last Updated:
Darshan Case: ಸುಪ್ರೀಂ ಕೋರ್ಟ್ನಲ್ಲಿ ದರ್ಶನ್ಗೆ ಹಿನ್ನಡೆಯಾಗಿದೆ. ಆದರೆ ಇತ್ತ ಪ್ರದೋಷ್ ಬೇಡಿಕೆಗೆ ಕೋರ್ಟ್ ಅಸ್ತು ಎಂದಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿ ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗಿದ್ದಾನೆ. ಕೊಲೆ ಆರೋಪಿಯಾಗಿದ್ದ ಪ್ರದೋಷ್ ಮಾಫಿ ಸಾಕ್ಷಿಯಾಗುತ್ತೇನೆ ಎಂದು ಅರ್ಜಿ (Plea) ಹಾಕಿ ಅದನ್ನು ಕೋರ್ಟ್ ಒಪ್ಪಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯೂ (Document Marking) ಮುಗಿದಿದೆ. ಅಷ್ಟೇ ಅಲ್ಲದೆ ನಂತರದ ಹಂತವಾದ ಡಾಕ್ಯುಮೆಂಟ್ ಮಾರ್ಕಿಂಗ್ ನಡೆಯುತ್ತಿದೆ.
ಆದರೆ ಪ್ರದೋಷ್ ಮಾಫಿ ಸಾಕ್ಷಿ ತಡೆಯೋಕೆ ದರ್ಶನ್ ಸಾಕಷ್ಟು ಪ್ರಯತ್ನಪಟ್ಟಿದ್ದರು. ಸೆಷನ್ಸ್ ಕೋರ್ಟ್ ಕದ ತಟ್ಟಿದ್ದರು. ಆದರೆ ದರ್ಶನ್ ಅರ್ಜಿ ಪುರಸ್ಕರಿಸದ ಕೋರ್ಟ್ ತಡೆ ನೀಡಲು ನಿರಾಕರಿಸಿತ್ತು. ಅದೇ ಆದೇಶವನ್ನು ಕರ್ನಾಟಕ ಹೈಕೋರ್ಟ್ ಕೂಡಾ ಎತ್ತಿಹಿಡಿದಿತ್ತು. ಕೊನೆಗೆ ದಾಳ ಸುಪ್ರೀಂ ಅಂಗಳಕ್ಕೆ ಬಿದ್ದಿತ್ತು.
ಸುಪ್ರೀಂ ಕೋರ್ಟ್ನಲ್ಲಿ ಮಾಫಿ ಸಾಕ್ಷಿಯನ್ನು ತಡೆಯೋಕೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಇಬ್ಬರು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ಆದೇಶ ಈಗ ಬಂದಿದೆ.
ಸುಪ್ರೀಂ ಕೋರ್ಟ್ನಲ್ಲಾದರೂ ಗೆಲುವು ಸಿಗುತ್ತೆ, ಮಾಫಿ ಸಾಕ್ಷಿಗೆ ತಡೆ ಬೀಳುತ್ತೆ ಎಂದು ಭರವಸೆಯಲ್ಲಿದ್ದ ದರ್ಶನ್ಗೆ ಬಿಗ್ ಶಾಕ್ ಸಿಕ್ಕಿದೆ. ಸುಪ್ರೀಂ ಕೋರ್ಟ್ ಕರ್ನಾಟಕದ ಸೆಷನ್ಸ್ ಕೋರ್ಟ್ ಹಾಗೂ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.
ದರ್ಶನ್ಗೆ ಅತ್ತ ಹಿನ್ನಡೆಯಾಗಿದ್ದರೆ ಇತ್ತ ಪ್ರದೋಷ್ ಮನವಿಗೆ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟು ಅಸ್ತು ಎಂದು ಹೇಳಿದೆ. ಯಾವ ವಿಚಾರದಲ್ಲಿ ಗೊತ್ತಾ?
ಈ ಹಿಂದಿನ ವಿಚಾರಣೆ ವೇಳೆ ಪ್ರದೋಷ್ ವಕೀಲರ ಜೊತೆ ಮಾತಾನಾಡಲು ಇ ಮುಕಲಾತ್ ಸಲ್ಲಿಕೆ ಮಾಡಿದ್ದಾರೆ. ಜೈಲು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲು ಪ್ರದೂಷ್ ಮನವಿ ಮಾಡಿದ್ದರು.
ತಂದೆಯ ವರ್ಷದ ತಿಥಿ ಹಿನ್ನಲೆಯಲ್ಲಿ ಕೋರ್ಟ್ ಬಳಿ ಅನುಮತಿ ಕೇಳಿದ ಪ್ರದೋಷ್ ಬೇಡಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ವರ್ಷದ ತಿಥಿಯಲ್ಲಿ ಪಾಲ್ಗೊಳ್ಳಲು ಪ್ರದೂಷ್ ಗೆ ಕೋರ್ಟ್ ಅನುಮತಿ ನೀಡಿದೆ.
ವರದಿ: ಮಂಜುನಾಥ್ ಎನ್, ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು














