Last Updated:
Swachh Vayu Sarvekshan 2026: ವಿಷಕಾರಿ ಗಾಳಿ ಮತ್ತು ದಟ್ಟ ಹೊಗೆಯಿಂದ ಸದಾ ಸುದ್ದಿಯಲ್ಲಿರುವ ದೇಶದ ರಾಜಧಾನಿ ದೆಹಲಿ, ಕೇಂದ್ರ ಸರ್ಕಾರದ ‘ಸ್ವಚ್ಛ ವಾಯು ಸರ್ವೇಕ್ಷಣೆ 2026’ರ ಶ್ರೇಯಾಂಕದಲ್ಲಿ ಶ್ರೀನಗರ ಮತ್ತು ಬೆಂಗಳೂರಿನಂತಹ ನಗರಗಳಿಗಿಂತ ಮುಂದಿದೆ.
ಬೆಂಗಳೂರು: ವಿಷಕಾರಿ ಗಾಳಿ ಮತ್ತು ದಟ್ಟ ಹೊಗೆಯಿಂದ ಸದಾ ಸುದ್ದಿಯಲ್ಲಿರುವ ದೇಶದ ರಾಜಧಾನಿ ದೆಹಲಿ (Delhi), ಕೇಂದ್ರ ಸರ್ಕಾರದ ‘ಸ್ವಚ್ಛ ವಾಯು ಸರ್ವೇಕ್ಷಣೆ 2026’ರ (Swachh Vayu Sarvekshan 2026) ಶ್ರೇಯಾಂಕದಲ್ಲಿ ಶ್ರೀನಗರ (Srinagar) ಮತ್ತು ಬೆಂಗಳೂರಿನಂತಹ (Bengaluru) ನಗರಗಳಿಗಿಂತ ಮುಂದಿದೆ. ಈ ವರದಿಯಲ್ಲಿ ಕೇವಲ ನಗರದ ಗಾಳಿಯ ಶುದ್ಧತೆಯನ್ನು ಮಾತ್ರ ಅಳೆಯದೇ, ಮಾಲಿನ್ಯ ನಿಯಂತ್ರಣಕ್ಕೆ ನಗರಗಳು ಕೈಗೊಂಡಿರುವ ಕ್ರಮಗಳು ಮತ್ತು ಅವುಗಳ ಅನುಷ್ಠಾನಕ್ಕೆ ಹೆಚ್ಚಿನ ಅಂಕ ನೀಡಲಾಗಿದೆ. 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳ ಪಟ್ಟಿಯಲ್ಲಿ ದೆಹಲಿ 21ನೇ ಸ್ಥಾನ ಪಡೆದಿದ್ದರೆ, ಶ್ರೀನಗರ 26ನೇ ಸ್ಥಾನ ಹಾಗೂ ಬೆಂಗಳೂರು 32ನೇ ಸ್ಥಾನಕ್ಕೆ ತಳ್ಳಲ್ಪಟ್ಟಿವೆ.














