Jordan Hermann: ಪದಾರ್ಪಣೆ ಪಂದ್ಯದಲ್ಲೇ 150 ರನ್! ಏಕದಿನ ಕ್ರಿಕೆಟ್​ನಲ್ಲಿ ಚರಿತ್ರೆ ಸೃಷ್ಟಿಸಿದ ದಕ್ಷಿಣ ಆಫ್ರಿಕಾದ 24 ವರ್ಷದ ಬ್ಯಾಟರ್ | ಕ್ರೀಡಾ ಸುದ್ದಿ | ACTPnews

ಜೋರ್ಡನ್ ಹರ್ಮನ್


Last Updated:

ನಮೀಬಿಯಾ ವಿರುದ್ಧದ ಮೊದಲ ಏಕದಿನ (ODI) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ 24 ವರ್ಷದ ಎಡಗೈ ಆರಂಭಿಕ ಬ್ಯಾಟರ್ ಜೋರ್ಡಾನ್ ಹರ್ಮನ್ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ದಾಖಲಿಸಿದ್ದಾರೆ.

ಜೋರ್ಡನ್ ಹರ್ಮನ್
ಜೋರ್ಡನ್ ಹರ್ಮನ್

ದಕ್ಷಿಣ ಆಫ್ರಿಕಾ ಕ್ರಿಕೆಟ್ (South Africa) ತನ್ನ ಯುವ ಪ್ರತಿಭೆಗಳ ತಾಕತ್ತನ್ನು ಮತ್ತೊಮ್ಮೆ ಜಗತ್ತಿಗೆ ಪರಿಚಯಿಸಿದೆ. ನಮೀಬಿಯಾ (Namibia) ವಿರುದ್ಧದ ಮೊದಲ ಏಕದಿನ (ODI) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ 24 ವರ್ಷದ ಎಡಗೈ ಆರಂಭಿಕ ಬ್ಯಾಟರ್ ಜೋರ್ಡಾನ್ ಹರ್ಮನ್ (Jordan Hermann) ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಶಾಶ್ವತವಾಗಿ ದಾಖಲಿಸಿದ್ದಾರೆ. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನಾಡಿದ ಈ ಯುವ ಆಟಗಾರ, ನಮೀಬಿಯಾ ಬೌಲರ್‌ಗಳ ದಾಳಿಯನ್ನು ಧೂಳೀಪಟ ಮಾಡಿದರು. ತಮ್ಮ ಮೊದಲ ಇನ್ನಿಂಗ್ಸ್‌ನಲ್ಲೇ 150 ರನ್‌ಗಳ ಬೃಹತ್ ಶತಕ ಸಿಡಿಸಿ ವಿಶ್ವ ದಾಖಲೆ ಬರೆದರು. ಹರ್ಮನ್ ಏಕದಿನ ಇತಿಹಾಸದಲ್ಲಿ ಪದಾರ್ಪಣೆ ಪಂದ್ಯದಲ್ಲೇ ಅತಿ ಹೆಚ್ಚು ರನ್​ ಸಿಡಿಸಿದ ಬ್ಯಾಟರ್ ಎಂಬ ವಿಶ್ವದಾಖಲೆಯನ್ನ ತಮ್ಮದೇ ದೇಶದ ಆಟಗಾರ ಮ್ಯಾಥ್ಯೂ ಬ್ರೀಟ್ಜ್ಕೆ ಜೊತೆ ಹಂಚಿಕೊಂಡರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed