Strict Rules: ದುಬಾರೆ ದುರಂತದ ಎಫೆಕ್ಟ್, ಇನ್ಮೇಲೆ ಎಲ್ಲಾ ಸಾಕಾನೆ ಶಿಬಿರದಲ್ಲೂ ಪ್ರವಾಸಿಗರಿಗೆ ಕಠಿಣ ನಿಯಮ ಜಾರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಸಾಕಾನೆ ಶಿಬಿರ


Last Updated:

ದುಬಾರೆ ಸಾಕಾನೆ ಶಿಬಿರದಲ್ಲಿ ಕಂಜನ್ ಆನೆ ಗುದ್ದಾಟದಲ್ಲಿ ಚೆನ್ನೈನ ತುಳಸಿ ಸಾವು, ಘಟನೆ ಬಳಿಕ ಸಚಿವ ಈಶ್ವರ ಬಿ ಖಂಡ್ರೆ ರಾಜ್ಯದ ಎಲ್ಲ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಮೇಲೆ ಕಠಿಣ ನಿಯಮ ಜಾರಿ

ಸಾಕಾನೆ ಶಿಬಿರ
ಸಾಕಾನೆ ಶಿಬಿರ

ಬೆಂಗಳೂರು: ಇಂದು ರಾಜ್ಯವೇ ಬೆಚ್ಚಿ ಬೀಳುವ ಘಟನೆಯೊಂದು (Incident) ನಡೆಯಿತು. ರಾಜ್ಯದ ಪ್ರಸಿದ್ಧ ಸಾಕಾನೆ ಶಿಬಿರವಾದ ದುಬಾರೆಯಲ್ಲಿ, ಅದ್ಯಾವ ಕೆಟ್ಟ ಘಳಿಗೆಯೋ (Bad Time)  ಅಥವಾ ಅದ್ಯಾರ ಕೆಟ್ಟ ದೃಷ್ಟಿಯೋ ನಮ್ಮ ರಾಜ್ಯದ ಹೆಮ್ಮೆಯಾಗಿದ್ದ ದಸರಾ ಆನೆಗಳಲ್ಲಿ ಕಳೆದ ಬಾರಿ ಪಟ್ಟದ ಆನೆಯ ಸ್ಥಾನ ಪಡೆದಿದ್ದ ಕಂಜನ್‌ ಅಕ್ಷರಶಃ ರಾಕ್ಷಸನಾಗಿದ್ದ. ನದಿಗಿಳಿದು ಮಾರ್ತಾಂಡನೊಂದಿಗೆ ಗುದ್ದಾಡುವಾಗ (Fight) ಒಂದು ಕುಟುಂಬವನ್ನು (Family) ಅನಾಥವನ್ನಾಗಿಸಿಬಿಟ್ಟ. 33 ವರ್ಷದ ಚೆನ್ನೈನ ತುಳಸಿ ಈ ಗುದ್ದಾಟದ ಬಲಿಪಶುವಾಗಿ ಅಸುನೀಗಿದರು.

ಕಂಜನ್‌ ಮೂಲತಃ ಸಾಧು ಪ್ರಾಣಿ

ಕಂಜನ್ ಮೂಲತಃ ಸಾಧು ಪ್ರಾಣಿಯಾಗಿದ್ದು, ಅರಣ್ಯ ಇಲಾಖೆಯ ಹೆದರಿಕೆಯಿಲ್ಲದ ‘ಕುಮ್ಕಿ’ ಆನೆಯಾಗಿ ಗುರುತಿಸಿಕೊಂಡಿದ್ದಾನೆ. 2023 ರಲ್ಲಿ ದಕ್ಷಿಣ ಕನ್ನಡದ ಕಡಬ ಭಾಗದಲ್ಲಿ ಕಾಡಾನೆಗಳು ಇಬ್ಬರನ್ನು ಬಲಿಪಡೆದಾಗ, ಆ ಪುಂಡಾನೆಗಳನ್ನು ಸೆರೆಹಿಡಿಯುವ ‘ಆಪರೇಷನ್ ಎಲಿಫೆಂಟ್’ ಕಾರ್ಯಾಚರಣೆಯಲ್ಲಿ ಅಭಿಮನ್ಯು ತಂಡದ ಜೊತೆ ಕಂಜನ್ ಪ್ರಮುಖ ಪಾತ್ರ ವಹಿಸಿದ್ದನು.

ಆನೆಗಳ ಕಾದಾಟದಲ್ಲಿ ಮಗು ತಬ್ಬಲಿ

ಅಂತಹ ಕಂಜನ್‌, ಮಾರ್ತಾಂಡ ಆನೆಗಳು ಸ್ನಾನ ಮಾಡಿಸುತ್ತಿದ್ದ ವೇಳೆ ಪರಸ್ಪರ ಕಾದಾಟ ನಡೆಸಿದ್ದು, ಮಾವುತರು ನಿಯಂತ್ರಿಸುತ್ತಿದ್ದರೂ ಮುನ್ನುಗ್ಗಿದ ಕಂಜನ್ ಆನೆ, ಮಾರ್ತಾಂಡ ಆನೆಗೆ ಗುದ್ದಿದ್ದು, ಮಾರ್ತಾಂಡ ಆಯ ತಪ್ಪಿ ಕೆಳಗೆ ಬಿದ್ದಾಗ, ಈ ಮಹಿಳೆ ಆನೆಯ ಕೆಳಗೆ ಸಿಲುಕಿ ಮೃತಪಟ್ಟಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಚಿವ ಈಶ್ವರ್‌ ಖಂಡ್ರೆ ತತಕ್ಷಣದ ಕ್ರಮಗಳನ್ನು ಕೈಗೊಂಡಿದ್ದಾರೆ. ಆ ನಿಯಮಗಳ ಪಟ್ಟಿ ಹೀಗಿದೆ.

ಎಲ್ಲಾ ಸಾಕಾನೆ ಶಿಬಿರದಲ್ಲಿ ಈ ನಿಯಮ ಜಾರಿ

ಆನೆಗಳ ಜೊತೆ ಸೆಲ್ಫಿ ತೆಗೆಸಿಕೊಳ್ಳಲು, ಅವುಗಳ ಜೊತೆ ಮೈತೊಳೆಯಲು ಮತ್ತು ಕೈಯಿಂದ ಆಹಾರ ತಿನ್ನಿಸಲು ಅವಕಾಶ ನೀಡುತ್ತಿದ್ದ ರಾಜ್ಯದ ಸಾಕಾನೆ ಶಿಬಿರಗಳಲ್ಲಿ ಇನ್ನು ಮುಂದೆ ಇದಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಅವರು ಪ್ರವಾಸಿಗರ ಸುರಕ್ಷತೆಗಾಗಿ ಕಠಿಣ ಆದೇಶ ಹೊರಡಿಸಿದ್ದು, ರಾಜ್ಯದ ಎಲ್ಲಾ ಸಾಕಾನೆ ಶಿಬಿರಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರಲಿದೆ.

ಪ್ರವಾಸಿಗರು ಆನೆ ಬಳಿ ಹೋಗುವಂತಿಲ್ಲ!

ಸಚಿವ ಖಂಡ್ರೆ ಅವರ ಆದೇಶದ ಪ್ರಕಾರ ಪ್ರವಾಸಿಗರು ಆನೆಗಳ ಬಳಿ ಹೋಗುವಂತೆಯೇ ಇಲ್ಲ! ಕನಿಷ್ಠ 100 ಅಡಿ ದೂರದಲ್ಲಿ ನಿಂತು ಆನೆ ಮೈತೊಳೆಯುವ ದೃಶ್ಯ ವೀಕ್ಷಿಸಲು ಮಾತ್ರ ಅವಕಾಶ ನೀಡಲಾಗುವುದು. ಆನೆ ಬಳಿ ಹೋಗಿ ಸೆಲ್ಫಿ ತೆಗೆಸಿಕೊಳ್ಳುವುದು, ಫೋಟೋ ತೆಗೆಸಿಕೊಳ್ಳುವುದು, ಆನೆಯೊಂದಿಗೆ ಮೈತೊಳೆಯುವುದು ಸಂಪೂರ್ಣ ನಿಷಿದ್ಧ. ಅಷ್ಟೇ ಅಲ್ಲ, ಬಾಳೆಹಣ್ಣು, ಬೆಲ್ಲ, ಕಬ್ಬು ಸೇರಿದಂತೆ ಯಾವುದೇ ಆಹಾರ ಪದಾರ್ಥವನ್ನು ಪ್ರವಾಸಿಗರ ಕೈಯಿಂದ ಆನೆಗಳಿಗೆ ತಿನ್ನಿಸಲು ಅವಕಾಶ ಇರುವುದಿಲ್ಲ.

ಅರಣ್ಯ ಸಚಿವರ ಖಡಕ್‌ ಸೂಚನೆ



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports