ಡ್ರ್ಯಾಗನ್ ಲೋಕ
(ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್)
ಆದರೆ, ಪ್ರಶಾಂತ್ ನೀಲ್ ಕಡುಗಪ್ಪು ಲೋಕವನ್ನ ಕನ್ನಡದ ಬೆಳ್ಳಿತೆರೆಗೆ ಪರಿಚಯಿಸಿದರು. ಇದು ನಿಜಕ್ಕೂ ಹೊಸ ಅಲೆ ಎಬ್ಬಿಸಿತು. ಆದರೆ, ಇದು ಇಲ್ಲಿಗೆ ನಿಲ್ಲಲಿಲ್ಲ. ಕೆಜಿಎಫ್ ಸರಣಿಯ ಎರಡೂ ಚಿತ್ರಕ್ಕೂ ಮುಂದುವರೆಯಿತು. ಸಾಲದಕ್ಕೆ ಸಲಾರ್ ಚಿತ್ರದಲ್ಲೂ ಈ ಕಡುಗಪ್ಪು ಲೋಕವೇ ಇತ್ತು.
ಡ್ರ್ಯಾಗನ್ ಲೋಕದಲ್ಲಿ ತೀರಾ ಕಡುಗಪ್ಪು ಇಲ್ಲ. ಅಂದ್ರೆ, ಇಲ್ಲಿ ಬಣ್ಣ ತುಂಬಿದ್ದಾರೆ. ಆದರೆ, ಅದು ತೀರಾ ಕಲರ್‌ಫುಲ್ ಏನೂ ಅಲ್ಲ. ಕೊಂಚ ಬಣ್ಣ ಬಂದಿದೆ.
ಆದರೆ, ಈ ಹಿಂದಿನ ಚಿತ್ರದಂತೇನೂ ಈ ಚಿತ್ರ ಇದೆ. ಹೆರಾಯಿನ್ ಸುತ್ತ ಕಥೆ ಇದ್ದಂತೆ ಇದೆ. ಸಾಯಿ ಕುಮಾರ್ ಖಡಕ್ ಧ್ವನಿಯಲ್ಲಿಯೇ ಈ ಕಥೆಯನ್ನ ನಿರೂಪಿಸುವ ಕೆಲಸ ಮಾಡಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಅನಂತ್ ನಾಗ್ ಮಾಡಿದ್ದರು. ಎರಡನೇ ಭಾಗದಲ್ಲಿ ಪ್ರಕಾಶ್ ರೈ ಇದ್ದರು.
ರುಕ್ಮಿಣಿ ವಸಂತ್ ಇಲ್ಲಿ ಡ್ರ್ಯಾಗನ್ ಹುಟ್ಟಿದ್ದು ಹೇಗೆ ಅಂತ ಹೇಳ್ತಾನೆ ಹೋಗ್ತಾರೆ. ಏಳು ದಿನಗಳಲ್ಲಿ ದೇವರು ಯಾರನ್ನೆಲ್ಲ ಕ್ರಿಯೇಟ್ ಮಾಡಿದ ಅಂತಲೇ ಹೇಳ್ತಾರೆ.
ಜೂನಿಯರ್ ಎನ್‌ಟಿಆರ್
(ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್)
ಆದರೆ, ಸ್ವಲ್ಪ ವಿರಾಮದ ನಂತರ ದೇವರು ಈ ಡ್ರ್ಯಾಗನ್ ಸೃಷ್ಟಿ ಮಾಡಿದ ಅನ್ನೋದನ್ನು ಇಲ್ಲಿ ಹೇಳ್ತಾರೆ. ಈ ಡ್ರ್ಯಾಗನ್ ಪಾತ್ರ ಈ ರೀತಿ ಪರಿಚಯ ಆಗುತ್ತದೆ. ಹಾಗೆ ಜೂನಿಯರ್ ಎನ್‌ಟಿಆರ್ ಜನ್ಮ ದಿನಕ್ಕೆ ಈ ಒಂದು ಗ್ಲಿಂಪ್ಸ್ ರಿಲೀಸ್ ಆಗಿದೆ.
ಪ್ರಶಾಂತ್ ನೀಲ್ ಅವರು ತಮ್ಮ ಈ ಹಿಂದಿನ ಚಿತ್ರಗಳ ಹ್ಯಾಂಗೋವರ್ ಅಲ್ಲಿಯೇ ಇದ್ದಾರೆ ಅನಿಸುತ್ತದೆ. ಕಥೆ ಬೇರೆ ಇದ್ದರೂ ಅದರ ಮೇಕಿಂಗ್ ಸೇಮ್ ಟು ಸೇಮ್ ಇದೆ.
ಒಂದು ಸಲಾರ್, ಒಂದು ಕೆಜಿಎಫ್ ನೋಡಿದ ಹಾಗೆ ಆಗುತ್ತದೆ. ಜೂನಿಯರ್ ಎನ್‌ಟಿಆರ್ ನಿಲ್ಲೋ ಸ್ಟೈಲ್ ನೋಡಿದ್ರೆ ಸಲಾರ್ ಚಿತ್ರದ ಪ್ರಭಾಸ್ ನೋಡಿದ ಹಾಗೆ ಆಗುತ್ತದೆ.
ಡ್ರ್ಯಾಗನ್ ಲೋಕ
(ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್)
ಡ್ರ್ಯಾಗನ್ ಚಿತ್ರದಲ್ಲಿ ಗುಂಡಿನ ಸುರಿಮಳೇನೆ ಆಗುತ್ತದೆ. ಇದಕ್ಕಾಗಿ ಬಳಕೆ ಮಾಡಿರೋ ವೆಪನ್‌ಗಳು ಪಕ್ಕಾ ಕೆಜಿಎಫ್-2 ಚಿತ್ರವನ್ನ ನೆನಪಿಸುತ್ತವೆ.
ಕೆಜಿಎಫ್ ಚಿತ್ರದಲ್ಲಿ ಬಂಗಾರದ ಕಥೆ ಹೇಳಿದ್ದರು. ಆದರೆ, ಈ ಡ್ಯಾಗನ್ ಸಿನಿಮಾದಲ್ಲಿ ಹೆರಾಯಿನ್ ಮ್ಯಾಟರ್ ಇಟ್ಟಿದ್ದಾರೆ. ಬ್ರಿಟಿಷ್ ಕಾಲದಿಂದಲೂ ಇದು ಇಂಡಿಯಾದಲ್ಲಿ ಹೇಗೆಲ್ಲ ನಡೀತಿತ್ತು ಅನ್ನೋದನ್ನ ಇಲ್ಲಿ ಹೇಳುತ್ತಿದ್ದಾರೆ.
ಜೂನಿಯರ್ ಎನ್‌ಟಿಆರ್ ಈ ಚಿತ್ರದಲ್ಲಿ ಡ್ರ್ಯಾಗನ್ ಆಗಿಯೇ ಅಬ್ಬರಿಸಿದ್ದಾರೆ. ಈ ಡ್ರ್ಯಾಗನ್ ಒಳ್ಳೆಯವನಾ? ಕೆಟ್ಟವನಾ ಅನ್ನುವ ಕುತೂಹಲವು ಇದೆ.
ಆದರೆ, ಗ್ಲಿಂಪ್ಸ್ ನೋಡಿದ್ರೆ ಪಕ್ಕಾ ವಿಲನ್ ಅನಿಸುತ್ತದೆ. ಕೆಜಿಎಫ್ ರಾಕಿ ಭಾಯ್ ರೀತಿನೇ ಈ ಡ್ರ್ಯಾಗನ್ ಬೆಳೆಯುತ್ತಾನೆ ಅನಿಸುತ್ತದೆ. ಈ ಒಂದು ಫೀಲ್ ಅನ್ನ ಡ್ರ್ಯಾಗನ್ ಚಿತ್ರದ ಗ್ಲಿಂಪ್ಸ್ ವಿಡಿಯೋ ಈಗಲೇ ಕೊಟ್ಟಿದೆ. ಮುಂದಿನ ವರ್ಷ 11.06.2027 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ ಅಂತ ಹೇಳಬಹುದು.












