Last Updated:
ನಟ ತಮ್ಮಿಗಿಂತ 33 ವರ್ಷ ಚಿಕ್ಕ ವಯಸ್ಸಿನ ಯುವತಿಯನ್ನು ಮದುವೆ ಮಾಡಿಕೊಂಡು, ಒಂದು ವರ್ಷದಲ್ಲೇ ವಿಚ್ಛೇಧನ ಪಡೆದು ಮತ್ತೆ ಸಿಂಗಲ್ ಆಗಿದ್ದಾರೆ.
ಸಿನಿಮಾ ರಂಗದಲ್ಲಿ (Cinema) ಹಲವು ನಟ-ನಟಯರು ತಮ್ಮ ಸಿನಿಮಾಗಳ ಹೊರತಾಗಿ ವಿವಾದಗಳಿಂದ, ವ್ಯಕ್ತಿಗತ ವಿಚಾರಗಳಲ್ಲಿ ಸಾಕಷ್ಟು ಸುದ್ದಿಯಾಗ್ತಾರೆ. ಕೆಲವರು ಪ್ರೇಮ, ಪ್ರೀತಿ, ಮದುವೆ (Marriage), ವಿಚ್ಛೇಧನಗಳಂತ ವಿಚಾರಗಳಲ್ಲಿ ಸದಾ ಸದ್ದು ಮಾಡುತ್ತಿರುತ್ತಾರೆ. ಈ ಪಟ್ಟಿಯಲ್ಲಿ ತಮಗಿಂತ ವಯಸ್ಸಿನಲ್ಲಿ ಚಿಕ್ಕವರನ್ನು ಮದುವೆಯಾದವರು ಇದ್ದರೆ. ಈ ನಾವು ಹೇಳುತ್ತಿರುವುದು ಇಂತಹ ನಟರ (Actor) ಬಗ್ಗೆಯೇ, ಇವರು ತಮಗಿಂತ 33 ವರ್ಷ ಕಡಿಮೆ ವಯಸ್ಸಿನ ಯುವತಿಯನ್ನು (Woman) ಮದುವೆಯಾಗಿದ್ದರು.
ಪ್ರೀತಿಸಿ ಮದುವೆಯಾಗುವುದು, ಆ ಬಳಿಕ ಇಬ್ಬರ ನಡುವೆ ಹೊಂದಾಣಿಕೆ ಇಲ್ಲ ಅಂತ ವಿಚ್ಛೇಧನ ಪಡೆಯುವುದು ಈಗ ಒಂದು ಫ್ಯಾಷನ್ ಆಗಿದೆ. ಮದುವೆ ಸಮಯದಲ್ಲಿ ಜೀವನ ಪೂರ್ತಿ ಒಟ್ಟಿಗೆ ಇರ್ತೀವಿ ಅಂತ ಹೇಳಿ, ಮದುವೆಯಾದ ಕೆಲಸವೇ ದಿನಗಳಲ್ಲಿ ದೂರ ಆಗ್ತಾರೆ. ಸಿನಿಮಾ ರಂಗದಲ್ಲಿ ಕೆಲಸ ಮಾಡುವವರು ಇದರಲ್ಲಿ ಹೆಚ್ಚು ಅಂತ ಹೇಳಬಹುದು.
ಸ್ಟಾರ್ ಹೀರೋ, ಹೀರೋಯಿನ್ಗಳು ತಮ್ಮ ಸಂಗತಿಯಿಂದ ದೂರ ಆಗ್ತಿದ್ದಾರೆ ಅಂತ ಅಭಿಮಾನಿಗಳು ಮಾತ್ರ ಶಾಕ್ಗೆ ಒಳಗಾಗುತ್ತಾರೆ. ನಟ ಬಬ್ಲೂ ಪೃಥ್ವಿರಾಜ್ ಜೀವನದಲ್ಲಿಯೂ ಇಂತಹದ್ದೇ ಪರಿಸ್ಥಿತಿ ಎದುರಿಸಿದ್ದರು. ತನ್ನ ಮಗನಿಗಿಂತ ಕಡಿಮೆ ವಯಸ್ಸಿನ ಯುವತಿಯನ್ನು ಮದುವೆಯಾಗಿ ಸುದ್ದಿಯಾಗಿದ್ದರು. ಆದರೆ ಆ ಬಳಿಕ ಮತ್ತೆ ವಿಚ್ಛೇಧನ ಪಡೆದುಕೊಂಡು ಭಾರೀ ಚರ್ಚೆಗೆ ಒಳಗಾಗಿದ್ದರು. ಪೃಥ್ವಿರಾಜ್ ತೆಲುಗು, ತಮಿಳು, ಕನ್ನಡ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲ ನಟನಾಗಿ ಸಿನಿರಂಗ ಪ್ರವೇಶ ಮಾಡಿ, 1974ರಲ್ಲಿಯೇ ಪ್ರೇಕ್ಷಕರ ಮನಗೆದಿದ್ದರು.
ಟಾಲಿವುಡ್ ನಲ್ಲಿ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಪೃಥ್ವಿ ‘ಪೆಳ್ಳಿ’ ಸಿನಿಮಾಗೆ ರಾಜ್ಯ ಸರ್ಕಾರ ನೀಡುವ ನಂದಿ ಆವಾರ್ಡ್ ಪಡೆದುಕೊಂಡಿದ್ದರು. ಆ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಆ ಬಳಿಕ ಸಿನಿಮಾಗಳಿಂದ ದೂರವಿದ್ದ, ನಟ ಆ ಬಳಿಕ ಕಮ್ ಬ್ಯಾಕ್ ಮಾಡಿ ವೆಬ್ ಸೀರಿಸ್ ಗಳಲ್ಲಿ ನಟಿಸುವ ಮೂಲಕ ಎರಡನೇ ಇನ್ನಿಂಗ್ಸ್ ಆರಂಭ ಮಾಡಿದ್ದರು. ಪೃಥ್ವಿರಾಜ್ ವೃತ್ತಿ ಜೀವನ ಒಂದು ಕಡೆ ಸಾಗುತ್ತಿದ್ದರೆ, ಮತ್ತೊಂದು ಕಡೆ ವೈಯುಕ್ತಿಕ ಜೀವನಕ್ಕೆ ಸಂಬಂಧಿಸಿದ ಸುದ್ದಿಗಳು ಹೊರಬಂದಿದ್ದವು.
1994ರಲ್ಲಿ ಪೃಥ್ವಿರಾಜ್, ಬಿನಾ ಎಂಬ ಮಹಿಳೆಯನ್ನು ಮದುವೆಯಾಗಿದ್ದರು. ಇಬ್ಬರಿಗೂ ಓರ್ವ ಮಗ ಕೂಡ ಇದ್ದಾರೆ. ಆದರೆ ಇಬ್ಬರ ನಡುವಿನ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾಗಿ ಆರು ವರ್ಷಗಳ ಕಾಲ ಬೇರೆ ಬೇರೆ ವಾಸ ಮಾಡುತ್ತಿದ್ದರು. ಆ ಬಳಿಕ ವಿಚ್ಛೇಧನ ಪಡೆದುಕೊಂಡಿದ್ದರು.
ಪೃಥ್ವಿರಾಜ್ ಆ ಬಳಿಕ ಬೆಂಗಳೂರು ಮೂಲಕದ 24 ವರ್ಷದ ರುಕ್ಮಿಣಿ ಶೀತಲ್ ಎಂಬ ಯುವತಿಯೊಂದಿಗೆ ಪ್ರೀತಿ ಪ್ರೇಮಾ ಅಂತ ಸುತ್ತಾಟ ನಡೆಸಿದ್ದರು. ಅಲ್ಲದೇ ಕೆಲ ಸಮಯದ ಬಳಿಕ ತಮ್ಮ 57ನೇ ವಯಸ್ಸಿನಲ್ಲಿ ತನಗಿಂತ 33 ವರ್ಷ ಕಡಿಮೆ ವಯಸ್ಸಿನ ಯುವತಿಯೊಂದಿಗೆ ಎರಡನೇ ಮದುವೆಯಾಗಿದ್ದರು. ಇಬ್ಬರ ನಡುವಿನ ವಯಸ್ಸಿನ ಅಂತರ ಈ ವೇಳೆ ಭಾರೀ ಟ್ರೋಲ್ಗೆ ಕಾರಣವಾಗಿತ್ತು.
ಆದರೆ, ಪ್ರೀತಿ ಹುಟ್ಟಲು ವಯಸ್ಸು ಮುಖ್ಯ ಅಲ್ಲ. ವಯಸ್ಸಿ ಅನ್ನೋದು ಜಸ್ಟ್ ನಂಬರ್ ಅಷ್ಟೇ. ನನಗಿಂತ ಆಕೆ ಬಹಳ ಮೆಚ್ಯುರ್ ಎಂದು ಪೃಥ್ವಿರಾಜ್ ಟ್ರೋಲ್ಗಳಿಗೆ ತಿರುಗೇಟು ನೀಡಿದ್ದರು. ಶೀತಲ್ ಅವರೇ ಮೊದಲು ಪೃಥ್ವಿರಾಜ್ ಅವರನ್ನು ಅಪ್ರೋಚ್ ಆಗಿದ್ದರಂತೆ. ಯೋಚನೆ ಮಾಡು ಅಂತ ಹೇಳಿದರೂ ಆಕೆ ತನ್ನ ನಿರ್ಧಾರ ಬದಲಾವಣೆ ಮಾಡಿಕೊಳ್ಳಲಿಲ್ಲ ಎಂದು ಪೃಥ್ವಿ ಹೇಳಿದ್ದರು. ಇಷ್ಟು ಬಲವಾಗಿ, ಪ್ರೀತಿ ಹಾಗೂ ಮೆಚ್ಯುರಿಟಿಯೊಂದಿಗೆ ಮದುವೆಯಾದರೂ ಇವರ ದಾಂಪತ್ಯ ಒಂದು ವರ್ಷವಷ್ಟೇ ಉಳಿಯಿತು. ಆ ಬಳಿಕ ಇಬ್ಬರು ಬೇರೆ ಆಗಬೇಕು ಎಂದು ತೀರ್ಮಾನ ಮಾಡಿ ವಿಚ್ಛೇಧನ ಪಡೆದುಕೊಂಡಿದ್ದರು. ಆ ಬಳಿಕ ಶೀತಲ್ ಅವರು ಮತ್ತೋರ್ವ ವ್ಯಕ್ತಿಯನ್ನು ಮದುವೆಯಾಗಿದ್ದಾರೆ, ಇತ್ತ ಪೃಥ್ವಿರಾಜ್ ಸಿಂಗಲ್ ಆಗಿಯೇ ಉಳಿದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಜನಿಸಿ, ತಮಿಳಿನ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಪೃಥ್ವಿರಾಜ್ ಇಂದಿಗೂ ಫಿಟ್ನೆಸ್ ಕಾಯ್ದುಕೊಂಡಿದ್ದು, ಹಲವು ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ಪೃಥ್ವಿರಾಜ್ ಅವರು ಶ್ವೇತ ನಾಗು, ಭಗವಾನ್, ಕೊಲೆಗಾರ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇದರ ನಡುವೆ ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಅವರು ಅಡುಗೆ, ಪ್ರವಾಸದ ವಿಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.













