Last Updated:
ಕರ್ನಾಟಕ ಸಾರಿಗೆ ಇಲಾಖೆ VAHAN 4.0 ತಾಂತ್ರಿಕ ದೋಷ ನಿವಾರಣೆಗೆ ಮೇ 15-18 ರವರೆಗೆ ಎಲ್ಲಾ ಆನ್‌ಲೈನ್ ವಾಹನ ಸೇವೆ ಸ್ಥಗಿತ, ಮೇ 19 ರಿಂದ ಸೇವೆ ಪುನರಾರಂಭ ನಿರೀಕ್ಷೆ
ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆ (Karnataka Transport Department) ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದ್ದು, VAHAN 4.0 ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ನಿವಾರಣೆ ಮತ್ತು ಬ್ಯಾಕ್‌ಎಂಡ್ ನಿರ್ವಹಣಾ ಕಾರ್ಯ ನಡೆಸಲು ಮೇ 15, 2026 ರಿಂದ ಮೇ 18, 2026 ರವರೆಗೆ ಸಂಪೂರ್ಣ 4 ದಿನಗಳ ಕಾಲ ಎಲ್ಲಾ ಆನ್‌ಲೈನ್ (Online) ವಾಹನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
VAHAN 4.0 ಅಂದರೆ ಭಾರತ ಸರ್ಕಾರದ ಪರಿವಹನ ಯೋಜನೆಯ ಭಾಗವಾದ ರಾಷ್ಟ್ರೀಯ ಡಿಜಿಟಲ್ ವ್ಯವಸ್ಥೆ. ದೇಶಾದ್ಯಂತ ವಾಹನ ನೋಂದಣಿ, ಡ್ರೈವಿಂಗ್ ಲೈಸೆನ್ಸ್ ಮತ್ತು ಸಂಬಂಧಿತ ಎಲ್ಲ ಸೇವೆಗಳನ್ನು ಈ ಒಂದೇ ವ್ಯವಸ್ಥೆ ನಿರ್ವಹಿಸುತ್ತದೆ.
ಮೇ 19 ಕ್ಕೆ ಎಲ್ಲವೂ ಪುನರಾರಂಭ!
ಸಾರಿಗೆ ಇಲಾಖೆ ಎಲ್ಲಾ ವಾಹನ ಮಾಲೀಕರನ್ನು ಈ ನಾಲ್ಕು ದಿನ ಆನ್‌ಲೈನ್ ಸೇವೆ ಬಳಸಲು ಪ್ರಯತ್ನಿಸದಂತೆ ವಿನಂತಿಸಿದೆ. ಅಗತ್ಯ ಕೆಲಸ ಇದ್ದಲ್ಲಿ ನೇರವಾಗಿ RTO ಕಚೇರಿಗೆ ಭೇಟಿ ನೀಡಬಹುದು. ಆದರೆ ಆನ್‌ಲೈನ್ ಸಂಯೋಜನೆ ಇಲ್ಲದ ಕಾರಣ ಕೆಲಸ ವಿಳಂಬವಾಗಬಹುದು ಎಂದು ಎಚ್ಚರಿಸಿದೆ. ಮೇ 19, 2026 ರಿಂದ ಸೇವೆಗಳು ಮತ್ತೆ ಸಾಮಾನ್ಯ ಸ್ಥಿತಿಗೆ ಬರಲಿವೆ ಎಂದು ನಿರೀಕ್ಷಿಸಲಾಗಿದೆ. ತುರ್ತು ವಾಹನ ಸಂಬಂಧಿ ಕೆಲಸ ಇದ್ದವರು ಈಗಾಗಲೇ ಮುಗಿಸಿಕೊಳ್ಳಿ ಅಥವಾ ಮೇ 19 ರ ನಂತರ ಮಾಡಿ ಸಹಕರಿಸಿ.
Bangalore [Bangalore],Bangalore,Karnataka
May 16, 2026 12:53 PM IST













