Karavali Movie: ಕರಾವಳಿ ಚಿತ್ರಕ್ಕೆ ಕಾಂತಾರ ಸಿಂಗರ್; ಅಬ್ಬಿ ಹಾಡಿಗೆ ರಾಜ್ ಬಿ ಶೆಟ್ಟಿ ಫಿದಾ! | | ACTPnews

ಕರಾವಳಿ ಚಿತ್ರಕ್ಕೆ ಕಾಂತಾರ ಸಿಂಗರ್; ಅಬ್ಬಿ ಹಾಡಿಗೆ ರಾಜ್ ಬಿ ಶೆಟ್ಟಿ ಫಿದಾ!


Last Updated:

ಕರಾವಳಿ ಚಿತ್ರ ಡಬ್ಬಿಂಗ್ ವಿವಾದಿಂದಲೇ ಹೆಚ್ಚು ಸದ್ದು ಮಾಡಿದೆ. ಆದರೆ, ಇದೀಗ ಈ ಚಿತ್ರದ ಒಂದು ಹಾಡನ್ನ ಕಾಂತಾರ ಚಾಪ್ಟರ್ ಒನ್ ಸಿಂಗರ್ ಹಾಡಿದ್ದಾರೆ. ಈ ವಿಷಯ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕರಾವಳಿ ಚಿತ್ರಕ್ಕೆ ಕಾಂತಾರ ಸಿಂಗರ್; ಅಬ್ಬಿ ಹಾಡಿಗೆ ರಾಜ್ ಬಿ ಶೆಟ್ಟಿ ಫಿದಾ!
ಕರಾವಳಿ ಚಿತ್ರಕ್ಕೆ ಕಾಂತಾರ ಸಿಂಗರ್; ಅಬ್ಬಿ ಹಾಡಿಗೆ ರಾಜ್ ಬಿ ಶೆಟ್ಟಿ ಫಿದಾ!

ಕಾಂತಾರ ಚಾಪ್ಟರ್ ಒನ್ ಚಿತ್ರದ (Kantara Chapter One Movie) ಬ್ರಹ್ಮಕಲಶ ಹಾಡನ್ನ (Brahmakalasha Movie) ಹಾಡಿರೋ ಕೆನಡಾ ಗಾಯಕ ಅಬ್ಬಿ ವಿ (Abby V) ಮತ್ತೊಂದು ಕನ್ನಡ ಹಾಡು ಹಾಡಿದ್ದಾರೆ. ಇದು ಕೂಡ ಕರಾವಳಿ ಕಡೆಯ ಚಿತ್ರ ಅನ್ನೋದು ಗೊತ್ತಾಗಿದೆ. ಕರಾವಳಿ ಹೆಸರಿನ ಪ್ರಜ್ವಲ್ ದೇವರಾಜ್ ಅವರ ಈ ಚಿತ್ರದ ಒಂದು ಹಾಡನ್ನ ಅಬ್ಬಿ ವಿ ಹಾಡಿದ್ದಾರೆ. ಸಚಿನ್ ಬಸ್ರೂರು (Sachit Basruru) ಸಂಗೀತದಲ್ಲಿಯೇ ಈ ಗೀತೆ ಬಂದಿದೆ. ಇದನ್ನೆ ಅಬ್ಬಿ ವಿ ಹಾಡಿದ್ದಾರೆ. ಇದನ್ನ ಕೇಳಿದ ಚಿತ್ರದ ನಟ ರಾಜ್ ಬಿ ಶೆಟ್ಟಿ ಕಳೆದು ಹೋಗಿದ್ದಾರೆ. ಆ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕಾಂತಾರ ಗಾಯಕನ ಸ್ಪರ್ಶ

ಕರಾವಳಿ ಚಿತ್ರಕ್ಕೆ ಕಾಂತಾರ ಚಾಪ್ಟರ್ ಒನ್ ಚಿತ್ರದ ಗಾಯಕ ಅಬ್ಬಿ ವಿ ಒಂದು ಪ್ರಮುಖ ಹಾಡನ್ನೆ ಹಾಡಿದ್ದಾರೆ. ಈ ಹಾಡಿನ ಮೇಕಿಂಗ್ ವಿಡಿಯೋ ಇದೀಗ ಹೊರ ಬಂದಿದೆ.
kantara chapter one movie singer abby v sung a song for prajwal devaraj raj b shetty karavali Movie

ಕರಾವಳಿ ಚಿತ್ರದ ಯಾವ ಹಾಡು

ಈ ಹಾಡಿನ ಮೇಕಿಂಗ್ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಡಿವೈನ್ ಫೀಲ್ ಕೊಡುವ ಇವರ ಧ್ವನಿಯಲ್ಲಿ ಒಂದು ಸೆಳೆತ ಇದೆ. ಅದನ್ನ ಕರಾವಳಿ ಚಿತ್ರದಲ್ಲೂ ನೋಡಬಹುದು.

ಅಬ್ಬಿ ವಿ ಹಾಡು ಕೇಳಿ ರಾಜ್ ಫಿದಾ

ರಾಜ್ ಬಿ ಶೆಟ್ರು ಈ ಕರಾವಳಿ ಚಿತ್ರದಲ್ಲಿ ಮಹಾವೀರ ಅನ್ನುವ ಪಾತ್ರವನ್ನ ಮಾಡಿದ್ದಾರೆ. ಕೋಣವನ್ನ ಅತೀಯಾಗಿಯೇ ಪ್ರೀತಿಸುವ ಪಾತ್ರ ಇದಾಗಿದೆ.

ಕರಾವಳಿ ಚಿತ್ರದ ಯಾವ ಹಾಡು

ಈ ಒಂದು ಕುತೂಹಲ ಜಾಸ್ತಿ ಆಗಿದೆ. ಸದ್ಯ ಹಂಚಿಕೊಂಡ ವಿಡಿಯೋದ ಹಿನ್ನೆಲೆಯಲ್ಲಿ ಬಾ ಕರಾವಳಿಗೆ ಅನ್ನುವ ಹಾಡಿನ ಆಡಿಯೋನೇ ಇದೆ.

ಈ ಹಾಡನ್ನ ಸಾಯಿ ವಿಘ್ನೇಶ್ ಈ ಚಿತ್ರದಲ್ಲಿ ಹಾಡಿದ್ದಾರೆ. ಆದರೆ, ಅಬ್ಬಿ ವಿ ಯಾವ ಗೀತೆ ಹಾಡಿದ್ದಾರೆ ಅನ್ನು ಕುತೂಹಲ ಹೆಚ್ಚಾಗಿದೆ. ಇನ್ನು ರಿಲೀಸ್ ಆದ್ಮೇಲೆ ಅದ್ಯಾವುದು ಅಂತ ಗೊತ್ತಾಗುತ್ತದೆ. ಸದ್ಯ ಅದರ ಬಗ್ಗೆ ಚಿತ್ರ ತಂಡ ಏನೂ ಹೇಳಿಕೊಂಡಿಲ್ಲ.

kantara chapter one movie singer abby v sung a song for prajwal devaraj raj b shetty karavali Movie

ಅಬ್ಬಿ ವಿ ಹಾಡು ಕೇಳಿ ರಾಜ್ ಫಿದಾ
ಜುಲೈ-24 ರಂದು ಚಿತ್ರ ರಿಲೀಸ್

ಜುಲೈ-24 ರಂದು ಈ ಕರಾವಳಿ ಚಿತ್ರ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರ ಟ್ರೈಲರ್ ರಿಲೀಸ್ ಆಗಿದೆ. ಎರಡು ಹಾಡುಗಳು ರಿಲೀಸ್ ಆಗಿದೆ.

ಅದರಲ್ಲಿ ಬಾ ಕರಾವಳಿಗೆ ಅನ್ನುವ ಹಾಡಿನ ವೈಬ್ರೇಷನ್ ಬೇರೆ ಇದೆ. ಮುದ್ದು ಗುಮ್ಮ ಅನ್ನುವ ಹಾಡು ಬಹುತೇಕರಿಗೆ ಇಷ್ಟ ಆಗಿದೆ. ಆ ರೀತಿನೇ ಈ ಗೀತೆ ಇವೆ.

ಸಿನಿಮಾದ ಇತರ ಮಾಹಿತಿ

ಕರಾವಳಿ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಸಂಪದ ಲೀಡ್ ಅಲ್ಲಿಯೇ ಇದ್ದಾರೆ. ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡಿದ್ದಾರೆ. ಆದರೆ, ಈ ಪಾತ್ರಕ್ಕೂ ಪ್ರಾಮುಖ್ಯತೆ ಇದ್ದೇ ಇದೆ.

ಈ ಚಿತ್ರದಲ್ಲಿ ಮಿತ್ರ ನಟಿಸಿದ್ದಾರೆ. ರಮೇಶ್ ಇಂದಿರಾ ಅಭಿನಯಿಸಿದ್ದಾರೆ. ಹಿರಿಯ ನಟ ಶ್ರೀಧರ್ ಅಭಿನಯಿಸಿದ್ದಾರೆ. ಇವರ ಈ ಚಿತ್ರವನ್ನ ಗುರುದತ್ತ ಗಾಣಿಗೆ ಡೈರೆಕ್ಷನ್ ಮಾಡಿದ್ದಾರೆ.

ಈ ಚಿತ್ರವನ್ನು ಇವರು ನಿರ್ಮಾಣ ಕೂಡ ಮಾಡಿದ್ದಾರೆ. ಹಾಗೆ ಈ ಚಿತ್ರವನ್ನ ದೊಡ್ಡಮಟ್ಟದಲ್ಲಿಯೇ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports