Sports School: ರಾಜ್ಯ ಮಟ್ಟದ ಕ್ರೀಡಾ ಶಾಲೆಗೆ ಸೇರಬೇಕೆ? ಜೂನ್ 1ರ ಈ ವಿಶೇಷ ಆಯ್ಕೆ ಪ್ರಕ್ರಿಯೆ ತಪ್ಪಿಸಿಕೊಳ್ಳಬೇಡಿ! | ಮೈಸೂರು ನ್ಯೂಸ್ (Mysuru News) | ACTPnews

ಕ್ರೀಡಾ ಶಾಲೆಗಳ ಪ್ರವೇಶ


Last Updated:

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜೂನ್ 1ರಂದು ಕ್ರೀಡಾ ವಸತಿ ಶಾಲೆ ಪ್ರವೇಶಕ್ಕೆ ವಿಶೇಷ ಆಯ್ಕೆ, 8ನೇ ತರಗತಿ ಮತ್ತು ಪ್ರಥಮ ಪಿಯುಸಿ ಕ್ರೀಡಾಪಟುಗಳಿಗೆ ಕೊನೆಯ ಅವಕಾಶ.

ಕ್ರೀಡಾ ಶಾಲೆಗಳ ಪ್ರವೇಶ
ಕ್ರೀಡಾ ಶಾಲೆಗಳ ಪ್ರವೇಶ

ಮೈಸೂರು: ನಿಮ್ಮ ಮಗು ಕ್ರೀಡೆಯಲ್ಲಿ ಅದ್ಭುತ ಪ್ರತಿಭೆಯನ್ನು (Talent) ಹೊಂದಿದೆಯೇ? ರಾಜ್ಯ ಮಟ್ಟದ ಕ್ರೀಡಾ ತರಬೇತಿ (Sports Training) ಪಡೆದು ದೇಶಕ್ಕೆ ಕೀರ್ತಿ ತರಬೇಕೆಂಬ ಕನಸು ನಿಮ್ಮದಾಗಿದೆಯೇ? ಹಾಗಿದ್ದರೆ ಈ ಸುದ್ದಿ ನಿಮಗಾಗಿಯೇ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕ್ರೀಡಾ ವಸತಿ ಶಾಲೆ (Sports School) ಮತ್ತು ನಿಲಯಗಳಿಗೆ ಪ್ರವೇಶ ಪಡೆಯಲು ಜೂನ್ 1 ರಂದು ವಿಶೇಷ ಆಯ್ಕೆ ಪ್ರಕ್ರಿಯೆಯನ್ನು ನಡೆಸುತ್ತಿದೆ.

ಯಾರಿಗೆಲ್ಲ ಅವಕಾಶ?

ಈ ಹಿಂದೆ ಜಿಲ್ಲಾ ಅಥವಾ ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಕ್ರೀಡಾಪಟುಗಳಿಗೆ ಇದೊಂದು ಕೊನೆಯ ಅವಕಾಶ. 2026-27ನೇ ಸಾಲಿಗೆ 8ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿ ತರಗತಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಅರ್ಹರು.

8ನೇ ತರಗತಿ: ಜೂನ್ 2026ಕ್ಕೆ 14 ವರ್ಷದೊಳಗಿನವರಾಗಿರಬೇಕು.

ಪ್ರಥಮ ಪಿ.ಯು.ಸಿ: 18 ವರ್ಷದೊಳಗಿನವರಾಗಿರಬೇಕು.

ಯಾವ ಕ್ರೀಡೆಗೆ ಎಲ್ಲಿ ಆಯ್ಕೆ?

ರಾಜ್ಯದ ವಿವಿಧ ಕಡೆಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ನೀವು ಆಯಾ ಕ್ರೀಡೆಗೆ ಸಂಬಂಧಿಸಿದ ಸ್ಥಳಗಳಿಗೆ ಹಾಜರಾಗಬೇಕು.

ಬೆಳಗಾವಿ: ವಾಲಿಬಾಲ್, ಸೈಕ್ಲಿಂಗ್, ಕುಸ್ತಿ, ಜುಡೋ.

ತುಮಕೂರು: ಅಥ್ಲೆಟಿಕ್ಸ್, ಕಬಡ್ಡಿ, ಜಿಮ್ನಾಸ್ಟಿಕ್ಸ್, ಫುಟ್‍ಬಾಲ್.

ಬೆಂಗಳೂರು (ಕಂಠೀರವ ಕ್ರೀಡಾಂಗಣ): ಬಾಸ್ಕೆಟ್‍ಬಾಲ್, ಬಾಕ್ಸಿಂಗ್, ಆರ್ಚರಿ, ಫೆನ್ಸಿಂಗ್.

ಬೆಂಗಳೂರು (ಹಾಕಿ ಕ್ರೀಡಾಂಗಣ): ಹಾಕಿ.

ಏನೇನು ದಾಖಲೆಗಳು ಬೇಕು?

ಜೂನ್ 1 ರಂದು ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಕ್ರೀಡಾಂಗಣಕ್ಕೆ ಹಾಜರಾಗಿ. ಬರುವಾಗ ಇತ್ತೀಚಿನ ಭಾವಚಿತ್ರ, ವೈದ್ಯಕೀಯ ದೃಢೀಕರಣ ಪತ್ರ, ಜನನ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ತನ್ನಿ. ದಾಖಲೆಗಳಿಲ್ಲದಿದ್ದರೆ ಅವಕಾಶ ಸಿಗುವುದಿಲ್ಲ, ನೆನಪಿಡಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports