Sourav Ganguly Biopic: ‘ದಾದಾ’ ಚಿತ್ರದ ಫಸ್ಟ್ ಲುಕ್ ರಿಲೀಸ್ ; ರಾಜ್‌ಕುಮಾರ್ ರಾವ್ ಅಭಿನಯ ಕಂಡು ಸೌರವ್ ಗಂಗೂಲಿ ಭಾವುಕ | | ACTPnews

ಸೌರವ್ ಗಂಗೂಲಿ


Last Updated:

ಸೌರವ್ ಗಂಗೂಲಿ 54 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಚಿತ್ರತಂಡ ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ, ನಟ ರಾಜ್‌ಕುಮಾರ್ ರಾವ್ ‘ದಾದಾ’ ಅಂದ್ರೆ ಸೌರವ್ ಗಂಗೂಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸೌರವ್ ಗಂಗೂಲಿ
ಸೌರವ್ ಗಂಗೂಲಿ

ಭಾರತೀಯ ಕ್ರಿಕೆಟಿಗ ಸೌರವ್ ಗಂಗೂಲಿ (Sourav Ganguly) ಜೀವನ ಆಧಾರಿತ ‘ದಾದಾ – ದಿ ಸೌರವ್ ಗಂಗೂಲಿ ಸ್ಟೋರಿ’ ಚಿತ್ರದ ಫಸ್ಟ್ ಲುಕ್ ಕೊನೆಗೂ ರಿಲೀಸ್ ಆಗಿದೆ. ಸೌರವ್ ಗಂಗೂಲಿ 54 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಚಿತ್ರತಂಡ ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ, ನಟ ರಾಜ್‌ಕುಮಾರ್ ರಾವ್ ‘ದಾದಾ’ ಅಂದ್ರೆ ಸೌರವ್ ಗಂಗೂಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ್‌ಕುಮಾರ್ ಅವರ ಲುಕ್ ಅನ್ನು ನೋಡಿ ಸೌರವ್ ಗಂಗೂಲಿ ಕೂಡ ಭಾವುಕರಾಗಿದ್ದಾರೆ.

ಬಿಡುಗಡೆಯಾದ ಮೊದಲ ಪೋಸ್ಟರ್‌ನಲ್ಲಿ, ರಾಜ್‌ಕುಮಾರ್ ರಾವ್ ಲಾರ್ಡ್ಸ್‌ನ ಬಾಲ್ಕನಿಯಲ್ಲಿ ನಿಂತಿರುವುದು ಕಂಡುಬರುತ್ತದೆ. ಅವರು ಟೀಮ್ ಇಂಡಿಯಾ ಜೆರ್ಸಿಯನ್ನು ಕೈಯಲ್ಲಿ ಎತ್ತಿ ಹಿಡಿದಿದ್ದಾರೆ. 2002 ರಲ್ಲಿ ನ್ಯಾಟ್‌ವೆಸ್ಟ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ಅನ್ನು ಸೋಲಿಸಿದ ನಂತರ ಸೌರವ್ ಗಂಗೂಲಿ ಲಾರ್ಡ್ಸ್‌ನ ಬಾಲ್ಕನಿಯಲ್ಲಿ ತಮ್ಮ ಜೆರ್ಸಿಯನ್ನು ತೆಗೆದ ಅದೇ ಐತಿಹಾಸಿಕ ಕ್ಷಣ ಇದಾಗಿದೆ. ಈ ಕ್ಷಣವನ್ನು ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಮತ್ತು ಆಕ್ರಮಣಕಾರಿ ಯುಗದ ಆರಂಭವೆಂದು ಪರಿಗಣಿಸಲಾಗಿದೆ.

ತಮ್ಮ ಹುಟ್ಟುಹಬ್ಬದಂದು ಜೀವನ ಚರಿತ್ರೆಯ ಫಸ್ಟ್ ಲುಕ್ ಬಿಡುಗಡೆಯಾದ ನಂತರ ಸೌರವ್ ಗಂಗೂಲಿ ತುಂಬಾ ಭಾವುಕರಾಗಿದ್ದಾರೆ ಮತ್ತು ಸಂತೋಷವಾಗಿದ್ದಾರೆ. ಗಂಗೂಲಿ, ‘ಜನ್ಮದಿನಗಳು ಯಾವಾಗಲೂ ವಿಶೇಷ, ಆದರೆ ಈ ದಿನ ನನ್ನ ಜೀವನ ಚರಿತ್ರೆಯ ಮೊದಲ ನೋಟ ಬಿಡುಗಡೆಯಾಗಿದ್ದು ಈ ದಿನವನ್ನು ಇನ್ನಷ್ಟು ಸ್ಮರಣೀಯವಾಗಿಸಿದೆ’ ಎಂದು ಗಂಗೂಲಿ ಹೇಳಿದ್ದಾರೆ. ಜೊತೆಗೆ ಈ ಪೋಸ್ಟರ್ ಅನ್ನು ತಮ್ಮ ಹುಟ್ಟುಹಬ್ಬದಂದು ‘ಅತ್ಯುತ್ತಮ ಉಡುಗೊರೆ’ ಎಂದು ತಿಳಿಸಿದ್ದಾರೆ . ಅಲ್ಲದೆ, ರಾಜ್‌ಕುಮಾರ್ ರಾವ್ ಅವರನ್ನು ಶ್ಲಾಘಿಸುತ್ತಾ, ‘ರಾಜ್‌ಕುಮಾರ್ ಈ ಪಾತ್ರಕ್ಕಾಗಿ ಅತ್ಯಂತ ಪ್ರಾಮಾಣಿಕ ತಯಾರಿ ನಡೆಸಿದ್ದಾರೆ’ ಎಂದು ಹಾಡಿ ಹೊಗಳಿದ್ದಾರೆ.

ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ

ಫಸ್ಟ್ ಲುಕ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ರಾಜ್‌ಕುಮಾರ್ ರಾವ್ ಅವರ ಲುಕ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ‘ದಾದಾ ಪಾತ್ರಕ್ಕೆ ಸೂಕ್ತ ಆಯ್ಕೆ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಭಾರತೀಯ ಕ್ರಿಕೆಟ್‌ನ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ ಅವರ ಬದುಕಿನ ಕಥೆ ಬೆಳ್ಳಿತೆರೆಯಲ್ಲಿ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಈಗ ಮತ್ತಷ್ಟು ಹೆಚ್ಚಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed