Last Updated:
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಕೊರಿಯರ್ ಮೂಲಕ ಜೀವ ಬೆದರಿಕೆ ಪತ್ರಗಳು ಬಂದಿದ್ದು, ಕೋಲ್ಕತ್ತಾ ಪೊಲೀಸರು ತನಿಖೆ ಆರಂಭಿಸಿದ್ದಾರೆ
ಟೀಮ್ ಇಂಡಿಯಾದ ಲೆಜೆಂಡರಿ ಕ್ರಿಕೆಟಿಗ ಸೌರವ್ ಗಂಗೂಲಿ (Sourav Ganguly) ಹಾಗೂ ಅವರ ಪತ್ನಿಗೆ ಜೀವಬೆದರಿಕೆ ಕರೆ ಬಂದಿದ್ದು, ಮಾಜಿ ಕ್ರಿಕೆಟರ್ ಪೊಲೀಸರಿಗೆ ದೂರು ನೀಡಿದ್ದಾರೆ. ಹಲವು ತಿಂಗಳಿನಿಂದ ಪತ್ರಗಳ ಮೂಲಕ ಬೆದರಿಕೆ ಬರುತ್ತಿದ್ದರೂ, ಆರಂಭದಲ್ಲಿ ಇವುಗಳನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಸೋಮವಾರ ಅವರ ಕಚೇರಿಗೆ ಬಂದ ಎರಡು ಇಂಗ್ಲಿಷ್ ಪತ್ರಗಳಲ್ಲಿ ಗಂಗೂಲಿ, ಅವರ ಪತ್ನಿ ಡೋನಾ ಹಾಗೂ ಅವರ ಆಪ್ತರಿಗೆ ನೇರವಾಗಿ ಕೊಲೆ ಬೆದರಿಕೆ ಹಾಕಲಾಗಿದೆ. ಪ್ರಸ್ತುತ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (CAB) ಅಧ್ಯಕ್ಷರಾಗಿರುವ ಗಂಗೂಲಿ ಅವರು, ದಕ್ಷಿಣ ಕೋಲ್ಕತಾದ ಠಾಕೂರ್‌ಪುಕುರ್ ಪೊಲೀಸ್ ಠಾಣೆಗೆ ತೆರಳಿ ಈ ಕುರಿತು ಅಧಿಕೃತವಾಗಿ ಲಿಖಿತ ದೂರನ್ನು ದಾಖಲಿಸಿದ್ದಾರೆ.














