Last Updated:
BJP MLA: ಇಲ್ಲಿನ ಬಿಜೆಪಿ ಶಾಸಕರ ಪುತ್ರಿಯೊಬ್ಬರಿಗೆ ಮೋಸ ಆಗಿದ್ಯಂತೆ. ಮದುವೆ ಹೆಸರಲ್ಲಿ ಆಕೆಯನ್ನು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವ್ಯಕ್ತಿಯೊಬ್ಬ ತನ್ನ ಮಗಳನ್ನು ಮದುವೆಯಾಗಿದ್ದು, ಈಗಾಗಲೇ ಆತನಿಗೆ 25 ಮದುವೆ ಆಗಿತ್ತು ಎಂಬ ಸ್ಫೋಟಕ ವಿಚಾರವನ್ನು ಬಿಜೆಪಿ ಶಾಸಕರೇ ಹೇಳಿದ್ದಾರೆ.
ಉತ್ತರ ಪ್ರದೇಶ: ಇಲ್ಲಿನ ಬಿಜೆಪಿ ಶಾಸಕರ (BJP MLA) ಪುತ್ರಿಯೊಬ್ಬರಿಗೆ ಮೋಸ ಆಗಿದ್ಯಂತೆ. ಮದುವೆ ಹೆಸರಲ್ಲಿ ಆಕೆಯನ್ನು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸೆವತಾ ವಿಧಾನಸಭಾ ಕ್ಷೇತ್ರದಿಂದ (Sevata assembly constituency) ಬಿಜೆಪಿ ಶಾಸಕರಾಗಿರುವ ಜ್ಞಾನ ತಿವಾರಿ (Gyan Tiwari) ಅವರು ತಮ್ಮ ಮಗಳ ಮದುವೆ ವಿಚಾರದಲ್ಲಿ ದೊಡ್ಡ ಮೋಸಕ್ಕೆ ಒಳಗಾಗಿದ್ದಾರೆ ಅಂತ ಆರೋಪಿಸಿದ್ದಾರೆ. ವ್ಯಕ್ತಿಯೊಬ್ಬ ತನ್ನ ಮಗಳನ್ನು ಮದುವೆಯಾಗಿದ್ದು, ಈಗಾಗಲೇ ಆತನಿಗೆ 25 ಮದುವೆ ಆಗಿತ್ತು ಎಂಬ ಸ್ಫೋಟಕ ವಿಚಾರವನ್ನು ಬಿಜೆಪಿ ಶಾಸಕರೇ ಹೇಳಿದ್ದಾರೆ. ಈ ಬಗ್ಗೆ ತಮ್ಮ ಪುತ್ರಿಯೊಂದಿಗೆ ಜ್ಞಾನ ತಿವಾರಿ ವಿಡಿಯೋ ಮಾಡಿದ್ದು, ಗಂಭೀರ ಆರೋಪ ಮಾಡಿದ್ದಾರೆ.














