Last Updated:
ನಟ ಅರ್ಜುನ್ ಸರ್ಜಾ , ಸೌಂದರ್ಯ ಅವರನ್ನು ನೆನಪಿಸಿಕೊಂಡು ಮಾತನಾಡಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ. ತಮ್ಮ ಸುದೀರ್ಘ ಸಿನಿಪಯಣದಲ್ಲಿ ತಾವು ಸಂಪಾದಿಸಿದ ಆತ್ಮೀಯ ಸ್ನೇಹಿತರ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಸೌಂದರ್ಯ ಅವರೊಂದಿಗಿನ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಪಾಲಿಗೆ ಸೌಂದರ್ಯ (Soundarya) ಎಂದಿಗೂ ಮರೆಯಲಾಗದ ಹೆಸರು. ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ನಟಿ ಸೌಂದರ್ಯ, ತಮ್ಮ ಸಹಜ ಅಭಿನಯ, ಸರಳತೆ ಮತ್ತು ಸೌಂದರ್ಯದ ಮೂಲಕವೇ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದರು. ಆದರೆ, ಕೇವಲ 27ನೇ ವಯಸ್ಸಿನಲ್ಲೇ ಅವರು ವಿಧಿವಶರಾದದ್ದು ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿತ್ತು. ಅವರು ಅಗಲಿ ಹಲವು ವರ್ಷಗಳಾದರೂ ಅವರ ನೆನಪು ಮಾತ್ರ ಇಂದಿಗೂ ಮಾಸಿಲ್ಲ.














