Last Updated:
ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಸೋನಂ ವಾಂಗ್ಚುಕ್ ರಿಯಾಕ್ಟ್ ಮಾಡಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ನೀಡಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ (NEET Exam Paper Leak) ಖಂಡಿಸಿ ವಿದ್ಯಾರ್ಥಿಗಳ ನಿರಂತರ ಪ್ರತಿಭಟನೆಗೆ ಕೇಂದ್ರ ಸರ್ಕಾರ ಕೊನೆಗೂ ಮಣಿದಿದ್ದು, ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ (PM Modi) ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. CJP ಜೊತೆಗಿನ 3ನೇ ಸುತ್ತಿನ ಮಾತುಕತೆಗೂ ಮುನ್ನವೇ ರಾಜೀನಾಮೆ ನೀಡಿದ್ದಾರೆ.
ಇನ್ನು, ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಸೋನಮ್ ವಾಂಗ್ಚುಕ್ ರಿಯಾಕ್ಟ್ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ 26 ದಿನಗಳ ಉಪವಾಸ ಸತ್ಯಾಗ್ರಹವನ್ನು ಮುರಿದಿದ್ದ ಸೋನಮ್ ವಾಂಗ್ಚುಕ್, ಯುವಜನತೆ ಹೋರಾಟವನ್ನು ಶ್ಲಾಘಿಸಿದ್ದಾರೆ. ಇದು ಬೀದಿಗಳಿಂದ ನೇರವಾಗಿ ಧ್ವನಿಸಿದ ಪ್ರಜಾಪ್ರಭುತ್ವದ ವಿಜಯ. ಶಾಂತಿ, ಸಮಾಧಾನ ಮತ್ತು ನಿರಂತರ ಶ್ರಮಕ್ಕೆ ಸಿಕ್ಕ ಪ್ರತಿಫಲ ಅಂತ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ದೇಶದ ಪ್ರಜೆಗಳನ್ನು ಹಾಗೂ ಯುವಜನತೆಯನ್ನು ಶ್ಲಾಘಿಸಿದ್ದಾರೆ. ಭಯವನ್ನು ಬದಿಗೊತ್ತಿ ದೇಶದ ಮೂಲೆ ಮೂಲೆಯಿಂದ ಎದ್ದುನಿಂತು ಹೋರಾಡಿದ ಸಿಜೆಪಿ ಹಾಗೂ ನಾಗರಿಕರಿಗೆ ಅಭಿನಂದನೆಗಳು. ಪಾರದರ್ಶಕತೆಗಾಗಿ ನಡೆದ ಈ ಹೋರಾಟವು ಸಫಲವಾಗಿದ್ದು, ಇನ್ಮುಂದೆ ವ್ಯವಸ್ಥೆಯ ಸಮಗ್ರ ಸುಧಾರಣೆಗಳತ್ತ ಗಮನಹರಿಸಬೇಕಿದೆ ಎಂದು ಕರೆ ಕೊಟ್ಟಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕವೂ ಇನ್ನೂ 3 ಬೇಡಿಕೆಗಳ ಈಡೇರಿಕೆಗೆ ಸಿಜೆಪಿ ಪಟ್ಟು ಹಿಡಿದಿದೆ. ಕೇಂದ್ರ ಸರ್ಕಾರದ ಮುಂದೆ ಬೇಡಿಕೆಗಳನ್ನ ಇಟ್ಟಿದೆ. ಪ್ರತಿಭಟನೆ ವೇಳೆ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡಬೇಕು. ನೀಟ್ ಹಗರಣಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ಕೊಡಬೇಕು. ವಿದ್ಯಾರ್ಥಿಗಳ ಮೇಲಿನ ಹಲ್ಲೆಗೆ ಸರ್ಕಾರ ಹಾಗೂ ಪೊಲೀಸರು ಕ್ಷಮೆ ಕೇಳಬೇಕು. ಇದರ ಜೊತೆಗೆ ವಿದ್ಯಾರ್ಥಿಗಳ ಮೇಲಿನ ಕೇಸ್ನ್ನ ವಾಪಾಸ್ ಪಡೀಬೇಕೆಂದು ಸಿಜೆಪಿ ಒತ್ತಾಯಿಸಿದೆ.
ಕೆಲವೇ ಕ್ಷಣಗಳಲ್ಲಿ ಕೇಂದ್ರ ಸರ್ಕಾರದ ಜೊತೆ ಸಿಜೆಪಿ ಮಾತುಕತೆ ನಡೆಸಲಿದೆ. ಬಾಕಿ ಇರುವ 3 ಬೇಡಿಕೆಗಳ ಬಗ್ಗೆ ಗಂಭೀರ ಸಮಾಲೋಚನೆ ನಡೆಯಲಿದೆ. ಕೇಂದ್ರ ಸರ್ಕಾರ ಒಪ್ಪಿದ್ರೆ ಪ್ರತಿಭಟನೆ ಕೈಬಿಡಲು ಸಿಜೆಪಿ ತೀರ್ಮಾನಿಸಿದೆ.
ಧಮೇಂದ್ರ ಪ್ರಧಾನ್ ರಾಜೀನಾಮೆಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಮತ್ತೆ ಪ್ರಧಾನ್‌ರನ್ನ ಕ್ಯಾಬಿನೆಟ್‌ಗೆ ಸೇರಿಸಿಕೊಳ್ಳಬಾರದು, ಬೇರೆ ಯಾವುದೇ ಖಾತೆ ನೀಡಿ ಸಂಪುಟಕ್ಕೆ ಸೇರಿಸಿಕೊಳ್ಳಬೇಡಿ ಕೇಂದ್ರ ಸರ್ಕಾರದ ಮೇಲೆ ರಾಹುಲ್ ಗಾಂಧಿ ಒತ್ತಡ ಹೆರಿದ್ದಾರೆ. ಪ್ರಧಾನ್ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿದರೆ ಮತ್ತೆ ಹೋರಾಟ ಮಾಡುವುದಾಗಿ ರಾಹುಲ್ ಗಾಂಧಿ ಆಗ್ರಹಿಸಿದ್ರು.














