Pramod Panju: ಕನ್ನಡ ಸಿನಿಮಾರಂಗ ಮತ್ತೆ ಗೆಲ್ಲಬೇಕು ಅಂದ್ರೆ ಏನು ಮಾಡ್ಬೇಕು; ಲೆನಿನ್ ನಟ ಪ್ರಮೋದ್ ಪಂಜು ಏನು ಹೇಳ್ತಾರೆ ಗೊತ್ತಾ? | | ACTPnews

ಲೆನಿನ್ ನಟ ಪ್ರಮೋದ್ ಪಂಜು ಏನ್ ಹೇಳ್ತಾರೆ ಗೊತ್ತಾ?


Last Updated:

ತೆಲುಗು ಲೆನಿನ್ ಚಿತ್ರದಲ್ಲಿ ಕನ್ನಡದ ನಟ ಪ್ರಮೋದ್ ಪಂಜು ಸಖತ್ ಪಾತ್ರ ಮಾಡಿದ್ದಾರೆ. ಸದ್ಯ ಅಲ್ಲಿ ಇದೇ ಪಾತ್ರದ ಸದ್ದು ಇದೆ. ಇದರ ನಡುವೆ ಪ್ರಮೋದ್ ಪಂಜು ಕನ್ನಡ ಸಿನಿಮಾರಂಗದ ಬಗ್ಗೆನೂ ಮಾತನಾಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಲೆನಿನ್ ನಟ ಪ್ರಮೋದ್ ಪಂಜು ಏನ್ ಹೇಳ್ತಾರೆ ಗೊತ್ತಾ?
ಲೆನಿನ್ ನಟ ಪ್ರಮೋದ್ ಪಂಜು ಏನ್ ಹೇಳ್ತಾರೆ ಗೊತ್ತಾ?

ಪ್ರಮೋದ್ ಪಂಜು (Pramod Panju) ಸದ್ಯ ಸುದ್ದಿಯಲ್ಲಿದ್ದಾರೆ. ತೆಲುಗು ಭಾಷೆಯ ಲೆನಿನ್ ಚಿತ್ರದಲ್ಲಿ (Lenin Movie) ಇವರು ಒಳ್ಳೆ ಪಾತ್ರ ಮಾಡಿದ್ದಾರೆ. ವಸಂತ ಅನ್ನುವ ಈ ರೋಲ್ ಮೂಲಕ ಅಲ್ಲೂ ಫುಲ್ ಸೌಂಡ್ ಮಾಡಿದ್ದಾರೆ. ಟಾಲಿವುಡ್‌ನ ಹೆಸರಾಂತ ನಟ ನಾಗಾರ್ಜುನ್ ಅಕ್ಕಿನೇನಿ (Nagarjun Akkineni) ಕೂಡ ಇವರನ್ನ ಕೊಂಡಾಡಿದ್ದಾರೆ. ಇಷ್ಟೊಂದು ಸದ್ದು ಮಾಡಿರೋ ನಟ ಪ್ರಮೋದ್ ಪಂಜು (Pramod Panju) ಕನ್ನಡ ಚಿತ್ರರಂಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆ ಚಿತ್ರಗಳು ಬರ್ತಿಲ್ಲ. ಡೌನ್ ಆಗ್ತಿದೆ ಅಂತ ಎಲ್ಲರೂ ಮಾತನಾಡ್ತಿದ್ದಾರೆ. ಅದನ್ನ ಸರಿ ಮಾಡೋಕೆ ಏನ್ ಮಾಡ್ತಿದ್ದಾರೆ? ಆ ದಿಕ್ಕಿನಲ್ಲಿ ಏನು ಕೆಲಸಗಳು ಆಗುತ್ತಿವೆ.? ಇದರ ಬಗ್ಗೆ ಇನ್ನು ಏನೆಲ್ಲ ಆಗ್ಬೇಕು? ಈ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ಇವರು ಹೇಳಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಮುಂದೆ ಇದೆ.

ಒಳ್ಳೆ ಚಿತ್ರಕ್ಕಾಗಿ ಏನ್ ಮಾಡ್ಬೇಕು?

ಪ್ರಮೋದ್ ಪಂಜು ಈ ವಿಚಾರವಾಗಿ ಮಾತನಾಡಿದ್ದಾರೆ. ತಮ್ಮ ಅಭಿಪ್ರಾಯವನ್ನು ಅಷ್ಟೆ ಬೇಸರದಲ್ಲೂ ಹೇಳಿಕೊಂಡಿದ್ದಾರೆ. ಚಿತ್ರರಂಗ ಡೌನ್ ಆಗಿದೆ. ಒಳ್ಳೆ ಚಿತ್ರಗಳು ಬರಬೇಕಿದೆ.
how kannada cinema can win again what lenin actor pramod panju says

ಒಳ್ಳೆ ಚಿತ್ರಕ್ಕಾಗಿ ಏನ್ ಮಾಡ್ಬೇಕು?

(ಚಿತ್ರ ಕೃಪೆ: ಕಡಕ್ ಟಾಕ್ಸ್ ಯುಟ್ಯೂಬ್ ಚಾನೆಲ್)

ಎಲ್ಲರೂ ಈ ಕುರಿತು ಮಾತನಾಡುತ್ತಿದ್ದಾರೆ. ಆದರೆ, ಈ ಹಿನ್ನೆಲೆಯಲ್ಲಿ ಏನ್ ಆಗ್ತಿದೆ. ಒಳ್ಳೆ ಚಿತ್ರಗಳನ್ನ ಮಾಡೋ ನಿಟ್ಟಿನಲ್ಲಿ ಏನು ಪ್ರಯತ್ನ ಆಗುತ್ತಿದೆ? ನಿಜಕ್ಕೂ ಇಲ್ಲಿ ಏನು ಆಗ್ತಾನೇ ಇಲ್ಲ ಅಂತಲೇ ಪ್ರಮೋದ್ ಪಂಜು ಹೇಳಿಕೊಂಡಿದ್ದಾರೆ.

ಹೀಗೆ ಮಾಡಿದ್ರೆ ಒಳ್ಳೆ ಚಿತ್ರ ಬರಬಹುದು

ನಮ್ಮಲ್ಲಿ ಒಂದು ಸಮಸ್ಯೆ ಇದೆ. ಹಿಟ್ ಚಿತ್ರ ಕೊಟ್ಟ ಡೈರೆಕ್ಟರ್ ಸೂಪರ್ ಸ್ಟಾರ್ ಚಿತ್ರ ಮಾಡೋಕೆ ಕಾಯ್ತಾ ಇದ್ದಾರೆ. ಸ್ಟಾರ್ ಚಿತ್ರವನ್ನೆ ಮಾಡ್ಬೇಕು ಅಂತ ಐದಾರು ವರ್ಷ ಕಾಯ್ತಾನೇ ಇರ್ತಾರೆ.

ನಮ್ಮಂತಹ ಹೊಸಬರ ಕತೆ ಏನು? ಮತ್ತೆ ಹೊಸಬರ ಜೊತೆಗೇನೆ ಕೆಲಸ ಮಾಡುತ್ತೇವೆ. ಇದರಿಂದ ಚಿತ್ರಗಳನ್ನ ರೀಚ್ ಮಾಡಿಸೋದು ಹೇಗೆ? ಹೀರೋನು ಹೊಸಬೇನೆ ಇರ್ತಾನೆ.

ಇಡೀ ತಂಡವೂ ಹೊಸಬರಿಂದಲೇ ಕೂಡಿರುತ್ತವೆ. ನಾನು ಕನ್ನಡದಲ್ಲಿ 7 ಸಿನಿಮಾಗಳನ್ನ ಮಾಡಿದ್ದೇನೆ. ಇಂದಿಗೂ ಕಷ್ಟಪಡ್ತಾ ಇದ್ದೇನೆ ಅಂತಲೇ ಪ್ರಮೋದ್ ಪಂಜು ಹೇಳಿಕೊಂಡಿದ್ದಾರೆ.

ಹೊಸಬರ ಜೊತೆಗೆ ಕೆಲಸ ಮಾಡ್ಬೇಕು

ಹಿಟ್ ಕೊಟ್ಟ ಡೈರೆಕ್ಟರ್‌ಗಳು ಹೊಸಬರ ಜೊತೆಗೆ ಕೆಲಸ ಮಾಡ್ಬೇಕು. ಇದರಿಂದ ಹೊಸಬರಿಗೆ ಬೂಸ್ಟ್ ಸಿಗುತ್ತದೆ. ಹಿಟ್ ಡೈರೆಕ್ಟರ್ ಇದ್ದಾರೆ ಅಂತಲೂ ಒಳ್ಳೆ ಚಿತ್ರಗಳು ಹೈಲೈಟ್ ಕೂಡ ಆಗುತ್ತವೆ.

how kannada cinema can win again what lenin actor pramod panju says

ಹೊಸ ನಾಯಕರು ಹುಟ್ಟುತ್ತಾರೆ

(ಚಿತ್ರ ಕೃಪೆ: ಕಡಕ್ ಟಾಕ್ಸ್ ಯುಟ್ಯೂಬ್ ಚಾನೆಲ್)

ಸ್ಟಾರ್ ನಟರು ಹೊಸ ಡೈರೆಕ್ಟರ್ ಜೊತೆಗೆ ಕೆಲಸ ಮಾಡ್ಬೇಕಿದೆ. ಆಗ ಒಳ್ಳೆ ಕಂಟೆಂಟ್ ಇರೋ ಚಿತ್ರಗಳು ಬರುತ್ತವೆ. ಹಾಗಾಗಿ ನಮ್ಮಲ್ಲಿಈ ಒಂದು ಕೆಲಸ ಆಗಬೇಕಿದೆ. ಇದು ಆದರೆ ಕನ್ನಡದಲ್ಲಿ ಒಳ್ಳೆ ಚಿತ್ರಗಳೂ ಬರುತ್ತವೆ.

ಹೊಸ ನಾಯಕರು ಹುಟ್ಟುತ್ತಾರೆ

ಸ್ಟಾರ್ ಡೈರೆಕ್ಟರ್‌ಗಳು ಹೊಸಬರ ಜೊತೆಗೆ ಕೆಲಸ ಮಾಡಿದರೆ ಆಯಿತು. ನವ ನಾಯಕರು ಹುಟ್ಟಿಕೊಳ್ಳುತ್ತಾರೆ. ಇದರಿಂದ ತಿಂಗಳಿಗೊಂದು ಹಿಟ್ ಕೊಡಬಹುದು. ಒಳ್ಳೆ ಕಂಟೆಂಟ್ ಇರೋ ಚಿತ್ರಗಳು ಕನ್ನಡ ಇಂಡಸ್ಟ್ರಿಯಿಂದ ಪ್ರೇಕ್ಷಕರಿಗೆ ಸಿಗುತ್ತವೆ ಅಂತಲೂ ಪ್ರಮೋದ್ ಪಂಜು ಹೇಳಿಕೊಂಡಿದ್ದಾರೆ.

Kadakk Talks ಯುಟ್ಯೂಬ್ ಚಾನೆಲ್ ಅಲ್ಲಿ ಪ್ರಮೋದ್ ಪಂಜು ಈ ಎಲ್ಲ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ತೆಲುಗು ಲೆನಿನ್ ಚಿತ್ರದ ಅವಕಾಶ ಹಾಗೂ ವಸಂತ್ ಪಾತ್ರಕ್ಕೆ ಸಿಗ್ತಿರೋ ರೆಸ್ಪಾನ್ಸ್ ಬಗ್ಗೆನೂ ಪ್ರಮೋದ್ ಪಂಜು ಇಲ್ಲಿ ಮಾತನಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports