Sonam Wangchuk: ದೆಹಲಿ ಪ್ರತಿಭಟನೆಯಿಂದ ಹಿಂದೆ ಸರಿದ ಸೋನಮ್! ‘ಕಾಕ್ರೋಚ್’ ಪ್ರೊಟೆಸ್ಟ್ ಬಗ್ಗೆ ವಾಂಗ್ಚುಕ್ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

Image: PTI


Last Updated:

ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ನನಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಎಕ್ಸ್ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.

Image: PTI
Image: PTI

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ, ಶೈಕ್ಷಣಿಕ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ವಿರೋಧಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಸೋನಮ್​ ವಾಂಗ್ಚುಕ್​ (Sonam Wangchuk), ಸಿಜೆಪಿಯ (CJP) ದೆಹಲಿ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ. ದೆಹಲಿಯ ಜಂತರ್-ಮಂತರ್‌ನಲ್ಲಿ ಅಕ್ಟೋಬರ್ 10 ರಂದು ನಡೆಯಲಿರುವ ಸಿಜೆಪಿಯ ಪ್ರತಿಭಟನೆಯಲ್ಲಿ ಸೋನಮ್ ವಾಂಗ್ಚುಕ್​ ಭಾಗವಹಿಸುತ್ತಿಲ್ಲ. ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ನನಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಎಕ್ಸ್​ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಸೋನಮ್​ ವಾಂಗ್ಚುಕ್​ ಹೇಳಿದ್ದೇನು?

ನೀವು ಎಲ್ಲಿದ್ದೀರಾ ಎಂದು ಬಹಳಷ್ಟು ಜನರು ಕೇಳಿದ್ದಾರೆ. ದೆಹಲಿಯ ಹೋರಾಟದಲ್ಲಿ ನೀವು ಏಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲಿ ಒಟ್ಟುಗೂಡಿರುವ ಪ್ರತಿಯೊಬ್ಬರ ಧೈರ್ಯವನ್ನು ನಾನು ಮೆಚ್ಚುತ್ತೇನೆ. ಸಮಸ್ಯೆಗಳು ಕೇವಲ ರಾಜಕೀಯವಲ್ಲ, ಪ್ರಕೃತಿಗೆ ಸಂಬಂಧಿಸಿದ್ದೂ ಹೌದು. ನೈಸರ್ಗಿಕ ವಿಕೋಪಗಳನ್ನು ಎದುರಿಸಲು ನೆರವಿನ ಅಗತ್ಯವೂ ಇದೆ. ನನ್ನ ಪ್ರೀತಿಯೇ, ನನ್ನ ಬಳಿ ಹಿಂದಿನಂತಹ ಪ್ರೀತಿಯನ್ನು ಕೇಳಬೇಡಿ.  ಈ ಬಾರಿ ಬಹುಶಃ ನನಗೆ ಮೊದಲಿನಂತೆ ಬರಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಹಿಂದೆ ಒಲೆಗೆ ಬೆಂಕಿ ಹಚ್ಚಬೇಕಿದ್ದಾಗ ಬೆಂಕಿಪೆಟ್ಟಿಗೆಯ ಕಡ್ಡಿಯ ಅಗತ್ಯವಿತ್ತು, ಆದರೆ ಒಲೆ ಉರಿಯಲು ಆರಂಭಿಸಿದಾಗ ಅಡುಗೆಯೂ ತಯಾರಾಗುತ್ತದೆ. ನೀವೆಲ್ಲರೂ ರಾಜಕೀಯ ಸಮಸ್ಯೆಗಳ ವಿರುದ್ಧ ಹೋರಾಡುತ್ತೀರಿ ಮತ್ತು ನಾವು ಇಲ್ಲಿ ನೈಸರ್ಗಿಕ ವಿಕೋಪಗಳ ವಿರುದ್ಧ ಹೋರಾಡುತ್ತೇನೆ ಎಂದರು.

ಪ್ರತಿಭಟನೆಗೆ ಇಲ್ಲ ಅವಕಾಶ

ದೆಹಲಿಯ ಜಂತರ್‌ಮಂತರ್‌ನಲ್ಲಿ ಜ್ಞಾನೇಶ್‌ಕುಮಾರ್‌ ವಿರುದ್ಧ ಪ್ರತಿಭಟನೆಗೆ ಕಾಕ್ರೋಚ್‌ ಪಕ್ಷದವರು ಸಜ್ಜಾಗಿದ್ರು. 2 ದಿನದ ಹಿಂದೆ ಪ್ರತಿಭಟನೆಗೂ ಕರೆಕೊಟ್ಟಿದ್ರು. ಆದ್ರೆ ದೆಹಲಿ ಪೊಲೀಸರು ಜಂತರ್‌ಮಂತರ್‌ನಲ್ಲಿ ಪ್ರತಿಭಟನೆಗೆ ಅವಕಾಶ ಕೊಟ್ಟಿಲ್ಲ. ನಿಯಮಗಳ ಪ್ರಕಾರ ಪ್ರತಿಭಟನೆಗೂ 10 ದಿನದ ಮೊದಲು ಮನವಿ ಸಲ್ಲಿಸಬೇಕು. ಈ ಹಿಂದೆ ಕಾಕ್ರೋಚ್ ಜನತಾ ಪಾರ್ಟಿಗೆ ಪ್ರತಿಭಟನೆ ನಡೆಸಲು ಅನುಮತಿ ಕೊಟ್ಟಾಗ ಅವರು ಕಾನೂನುಗಳನ್ನ ಗಾಳಿಗೆ ತೂರಿದ್ದಾರೆ. ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾರೆ. ಕಾನೂನುಬದ್ಧ ನಿರ್ದೇಶನಗಳನ್ನು ಪಾಲಿಸಿಲ್ಲ. ಅವರೇ ಬರೆದುಕೊಟ್ಟಿದ್ದ ಮುಚ್ಚಳಿಕೆಗಳಿಗೂ ಬದ್ಧರಾಗಿರಲಿಲ್ಲ. ಇದ್ರಿಂದ ದೆಹಲಿಯಲ್ಲಿ ಸಮಸ್ಯೆಗಳಾಗಿವೆ. ಸಾರ್ವಜನಿಕ ಸುರಕ್ಷತೆ, ಕಾನೂನು-ಸುವ್ಯವಸ್ಥೆ ಮತ್ತು ಸಂಚಾರ ನಿಯಂತ್ರಣ ಕಾಪಾಡಬೇಕು. ಹೀಗಾಗಿ ಅನುಮತಿ ಕೊಡೋದಿಲ್ಲ ಅಂತ ಹೇಳಿದೆ. ಅಷ್ಟೇ ಅಲ್ಲ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163ರಡಿ ನಿಷೇಧಾಜ್ಞೆಯನ್ನೂ ಜಾರಿಗೊಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed