Simple suni movie: ವಿಭಿನ್ನವಾಗಿ ‘ಮೋಡ ಕವಿದ ವಾತಾವರಣ’ ಸಿನಿಮಾದ ಪ್ರಚಾರ ಮಾಡಿದ ಸಿಂಪಲ್ ಸುನಿ; ಇಂಟ್ರಸ್ಟಿಂಗ್ ವಿಡಿಯೋ ಔಟ್! | | ACTPnews

ಮೋಡ ಕವಿದ ವಾತಾವರಣ; ಸಿಂಪಲ್ ಸುನಿ ಡಿಫರಂಟ್ ಪ್ರಮೋಷನ್!


Last Updated:

ಸಿಂಪಲ್ ಸುನಿ ತಮ್ಮ ಚಿತ್ರವನ್ನ ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದಾರೆ. ಕಾಮಿಡಿ ಕಿಕ್ ಕೊಡ್ತಾನೆ ಸುಮಾರು ವಿಚಾರವನ್ನು ಪ್ರಮೋಷನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಮೋಡ ಕವಿದ ವಾತಾವರಣ; ಸಿಂಪಲ್ ಸುನಿ ಡಿಫರಂಟ್ ಪ್ರಮೋಷನ್!
ಮೋಡ ಕವಿದ ವಾತಾವರಣ; ಸಿಂಪಲ್ ಸುನಿ ಡಿಫರಂಟ್ ಪ್ರಮೋಷನ್!

ಸಿಂಪಲ್ ಸುನಿ (Simple Suni) ಮತ್ತೊಂದು ಸಿನಿಮಾ ರೆಡಿ ಆಗಿದೆ. ಲಂಬೋದರ 2.0 ಚಿತ್ರದ ರೇಂಜ್ ಬೇರೆ ಇದೆ. ಆದರೆ, ನವ ನಟ ಶೀಲಂ (Sheelam) ಹಾಕಿಕೊಂಡು ಚಿತ್ರ ಮಾಡಿದ್ದಾರೆ. ಇದಕ್ಕೆ ಮೋಡ ಕವಿದ ವಾತಾವರಣ (Moda Kavida Vatavarana) ಅಂತ ಹೆಸರಿಟ್ಟಿದ್ದಾರೆ. ಕಂಟೆಂಟ್‌ ಇರೋ ಚಿತ್ರಗಳನ್ನ ಸಿಂಪಲ್ ಸುನಿ (Simple Suni) ಮಾಡಿಕೊಂಡು ಬಂದಿದ್ದಾರೆ. ಇಲ್ಲೂ ಆ ನಿರೀಕ್ಷೆ ಇದೆ. ಇದರ ಪ್ರಚಾರವನ್ನು ವಿಭಿನ್ನವಾಗಿ ಮಾಡುತ್ತಿದ್ದಾರೆ. ಹಾಸ್ಯ ಸ್ಪರ್ಶ ಇರೋ ಒಂದು ವಿಡಿಯೋ ಬಿಟ್ಟಿದ್ದಾರೆ. ಇದು ರಾಜಕಾರಣಿಗಳು ಪ್ರಮಾನವಚನ ಸ್ವೀಕರಿಸುವ ರೀತಿನೇ ಇದೆ. ಆದರೆ, ಇದರಲ್ಲಿರೋ ಕಾಮಿಡಿ ಕಿಕ್ ಮಜಾ ಕೊಡುತ್ತದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಮೋಡ ಕವಿದ ವಾತಾವರಣ…

ಸಿಂಪಲ್ ಸುನಿ ಡೈರೆಕ್ಷನ್ ಮಾಡಿರೋ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಶೀಲಂ ಎಂ ಸ್ವಾಮಿ ಅನ್ನುವ ಹೊಸ ನಾಯಕನ ಪರಿಚಯ ಮಾಡಿಸುತ್ತಿದ್ದಾರೆ. ಡೈರೆಕ್ಟರ್ ಓಂ ಪ್ರಕಾಶ್ ಮಗಳು ಸಾತ್ವಿಕಾ ಕೂಡ ನಟಿಸಿದ್ದಾರೆ.
simple suni moda kavida vaatha varana movie promotion video got viral

ವಿಭಿನ್ನವಾದ ಪ್ರಚಾರ

(ಚಿತ್ರ ಕೃಪೆ: ಸಿಂಪಲ್ ಸುನಿ ಇನ್‌ಸ್ಟಾಗ್ರಾಮ್)

ಮೋಕ್ಷಾ ಕುಶಾಲ್ ಈ ಚಿತ್ರದ ಮತ್ತೊಬ್ಬ ನಾಯಕಿ ಆಗಿದ್ದಾರೆ. ಇಬ್ಬರು ನಾಯಕಿಯರ ಈ ಚಿತ್ರದಲ್ಲಿ ಶೀಲಂ ಇಂಡ್ಟ್ರಿಗೆ ಪರಿಚಯ ಆಗುತ್ತಿದ್ದಾರೆ. ಮೊದಲ ಚಿತ್ರದಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ ಅನಿಸುತ್ತಿದೆ.

ವಿಭಿನ್ನವಾದ ಪ್ರಚಾರ

ಮೋಡ ಕವಿದ ವಾತಾವರಣ ಚಿತ್ರ ರೆಡಿ ಆಗಿದೆ. ಈ ಚಿತ್ರದ ಪ್ರಚಾರವು ಶುರು ಆಗಿದೆ. ಇದನ್ನ ವಿಭಿನ್ನವಾಗಿಯೇ ಮಾಡುತ್ತಿದ್ದಾರೆ. ಈ ಚಿತ್ರದ ನಾಯಕ ಸೀಲಂ ಎಂ.ಸ್ವಾಮಿ ಹಾಗೂ ಸಿಂಪಲ್ ಒಂದು ವಿಡಿಯೋ ಮಾಡಿದ್ದಾರೆ.

ಇದರಲ್ಲಿ ಸುನಿ ಒಂದು ಕ್ಯಾರೆಕ್ಟರ್ ಇದೆ. ಶೀಲಂ ಎಂ.ಸ್ವಾಮಿ ಒಂದು ಪಾತ್ರ ಇದೆ. ಇಡೀ ಸೀನ್ ಏನಂದ್ರೆ, ಪ್ರಮಾಣ ವಚನ ತೆಗೆದುಕೊಳ್ತಿರೋ ನವ ನಾಯಕನಿಗೆ ಏನೆಲ್ಲ ಪ್ರಮಾಣ ಮಾಡ್ಬೇಕು ಅಂತೆಲ್ಲ ಹೇಳುವ ಕೆಲಸವನ್ನ ಸಿಂಪಲ್ ಸುನಿ ಇಲ್ಲಿ ಮಾಡ್ತಾರೆ.

ನಾಯಕ ಮತ್ತು ನಿರ್ಮಾಪಕ

ಈ ಒಂದು ಪ್ರಚಾರದ ವಿಡಿಯೋದಲ್ಲಿ ಸುಮಾರು ವಿಚಾರಗಳಿವೆ. ನಿರ್ಮಾಪಕರಿಗೆ ದುಡ್ಡಿನ ವಿಚಾರದಲ್ಲಿ ನಾಯಕ ಕಾಟ ಕೊಡುವಂತೆ ಇಲ್ಲ. ಯಾವುದೇ ಆಫೇರ್ ಇಟ್ಟುಕೊಳ್ಳುವಂತೆ ಇಲ್ಲ.

simple suni moda kavida vaatha varana movie promotion video got viral

ಜೂನ್-26 ರಂದು ಚಿತ್ರ ರಿಲೀಸ್ (ಚಿತ್ರ ಕೃಪೆ: ಸಿಂಪಲ್ ಸುನಿ ಇನ್‌ಸ್ಟಾಗ್ರಾಮ್)

ಚಿತ್ರದ ಪ್ರಚಾರಕ್ಕೆ ಎಲ್ಲೆಡೆ ಬರುವಂತೆ ಪ್ರಮಾಣ ಮಾಡುವೆ ಅನ್ನೋದು. ಪ್ರತಿ ದಿನ ಶೂಟಿಂಗ್‌ಗೆ ಸರಿಯಾದ ಸಮಯಕ್ಕೆ ಬರಬೇಕು ಅನ್ನೋದು. ಹೀಗೆ ಸುಮಾರು ವಿಚಾರಗಳನ್ನ ಇಲ್ಲಿ ಅಷ್ಟೆ ಕಾಮಿಡಿ ಕಾಮಿಡಿ ಆಗಿಯೇ ಹೇಳಲಾಗಿದೆ. ಇದು ನೋಡುಗರಿಗೆ ಸಖತ್ ಮಜಾ ಕೊಡುತ್ತದೆ.

ಹೀರೋ ಟೀಸರ್ ರಿಲೀಸ್

ಚಿತ್ರದ ನಾಯಕ ನಟ ಶೀಲಂ ಎಂ.ಸ್ವಾಮಿ ಅವರ ಟೀಸರ್ ರಿಲೀಸ್ ಆಗುತ್ತಿದೆ. ಜೂನ್-16 ರಂದು ಸಂಜೆ 5.30 ಕ್ಕೆ ಈ ಟೀಸರ್ ರಿಲೀಸ್ ಆಗುತ್ತಿದೆ.

ಜೂನ್-26 ರಂದು ಚಿತ್ರ ರಿಲೀಸ್

ಮೋಡ ಕವಿದ ವಾತಾವರಣ ಜೂನ್-26 ರಂದು ರಿಲೀಸ್ ಆಗುತ್ತಿದೆ. ರಾಜ್ಯದೆಲ್ಲೆಡೆ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಮೂಲಕ ಹೊಸ ಕತೆಯೊಂದಿಗೆ ಸಿಂಪಲ್ ಸುನಿ ಬರ್ತಿದ್ದಾರೆ.

ಇವರ ಕತೆಗಳಲ್ಲಿ ವಿಷಯ ಇರುತ್ತದೆ. ಪ್ರೀತಿ ತುಂಬಿದ ಮ್ಯಾಟರು ಇರುತ್ತದೆ. ಎಲ್ಲವನ್ನು ಹೃದಯಕ್ಕೆ ಮುಟ್ಟಿಸುವ ಕೆಲಸ ಮಾಡ್ತಾನೇ ಬಂದಿದ್ದಾರೆ. ಇವರ ಚಿತ್ರಗಳಲ್ಲಿ ಸಂಗೀತವು ಚೆನ್ನಾಗಿರುತ್ತವೆ. ಜುಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed