Last Updated:
ನಟಿಯ ಕೊನೆಯ ಸಾಮಾಜಿಕ ಜಾಲತಾಣ ಪೋಸ್ಟ್ (Social Media Post) ಈಗ ಭಾರೀ ವೈರಲ್ ಆಗ್ತಿದೆ. ಕೆಲವೇ ಗಂಟೆಗಳ ಹಿಂದೆ ಸಂತೋಷದಿಂದ ಕಾಣಿಸಿಕೊಂಡಿದ್ದ ನಟಿ, ಬಳಿಕ ಮೃತಪಟ್ಟಿದ್ದಾರೆ ಎಂಬ ಸುದ್ದಿ ಎಲ್ಲರನ್ನು ತಲ್ಲಣಗೊಳಿಸಿದೆ.
ಮನರಂಜನಾ ಕ್ಷೇತ್ರವನ್ನು ಬೆಚ್ಚಿಬೀಳಿಸಿದ ನಟಿ ಸಂಚಿತಾ ಉಗ್ಲೆ (Actress Sanchita Ugle) ಅವರ ನಿಧನದ ಸುದ್ದಿ ಇದೀಗ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೇ ವೇಳೆ ನಟಿಯ ಕೊನೆಯ ಸಾಮಾಜಿಕ ಜಾಲತಾಣ ಪೋಸ್ಟ್ (Social Media Post) ಈಗ ಭಾರೀ ವೈರಲ್ ಆಗ್ತಿದೆ. ಕೆಲವೇ ಗಂಟೆಗಳ ಹಿಂದೆ ಸಂತೋಷದಿಂದ ಕಾಣಿಸಿಕೊಂಡಿದ್ದ ನಟಿ, ಬಳಿಕ ಮೃತಪಟ್ಟಿದ್ದಾರೆ ಎಂಬ ಸುದ್ದಿ ಸಿನಿ ಲೋಕಕ್ಕೆ ಭಾರಿ ಆಘಾತವನ್ನು ನೀಡಿದೆ.
ವಾಗ್ಲೆ ಕಿ ದುನಿಯಾ, ಕುಂಕುಮ್ ಭಾಗ್ಯ ಮತ್ತು ಇತ್ತೀಚಿನ ಛಾವಾ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ಸಂಚಿತಾ ಉಗ್ಲೆ ಅವರ ಕೊನೆಯ ಇನ್‌ಸ್ಟಾಗ್ರಾಮ್ ರೀಲ್ಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ನಟಿಯ ಅಭಿಮಾನಿಗಳು ಈ ವಿಡಿಯೋವನ್ನು ಹಂಚಿಕೊಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಂಚಿತಾ ಉಗ್ಲೆ ಅವರು ನಿಧನದ ಸುದ್ದಿ ಹೊರಬೀಳುವ ಕೆಲವೇ ಗಂಟೆಗಳ ಮೊದಲು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ರೀಲ್ಸ್ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋಗೆ ‘ಮೇ ನಾಚು ತು ನಾಚಾ’ ಎಂಬ ಶೀರ್ಷಿಕೆ ನೀಡಲಾಗಿತ್ತು.
ಇದೇ ಕಾರಣಕ್ಕೆ ಅವರ ನಿಧನದ ಸುದ್ದಿ ಹೊರಬಂದ ನಂತರ ಅನೇಕ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಖುಷಿ ಖುಷಿಯಾಗಿದ್ದ ವ್ಯಕ್ತಿಯ ಬಗ್ಗೆ ಇಂತಹ ಸುದ್ದಿ ಕೇಳಿಬರುವುದು ಹಲವರಿಗೆ ಅಚ್ಚರಿ ಮೂಡಿಸಿದೆ.
ಅನೇಕರು ನಟಿಯ ನಗುಮುಖದ ವಿಡಿಯೋ ನೋಡಿ ಭಾವುಕರಾಗಿದ್ದು, ಪ್ರತಿಭಾವಂತ ಕಲಾವಿದೆಯ ಅಗಲಿಕೆ ಮನರಂಜನಾ ಕ್ಷೇತ್ರಕ್ಕೆ ದೊಡ್ಡ ನಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಅವರ ಹಳೆಯ ಪಾತ್ರಗಳು ಹಾಗೂ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಸಂಚಿತಾ ಉಗ್ಲೆ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ವಾಗ್ಲೆ ಕಿ ದುನಿಯಾ ಧಾರಾವಾಹಿಯ ಮೂಲಕ ಅವರು ಹೆಚ್ಚು ಜನಪ್ರಿಯತೆ ಗಳಿಸಿದ್ದರು. ನಂತರ ಕುಂಕುಮ್ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು.
ಇತ್ತೀಚೆಗೆ ಬಿಡುಗಡೆಯಾದ ಛಾವಾ ಚಿತ್ರದಲ್ಲಿ ಮಹಾರಾಣಿ ತಾರಾ ರಾಣಿ ಪಾತ್ರದ ಮೂಲಕ ಅವರು ಸಿನಿಪ್ರಿಯರ ಗಮನ ಸೆಳೆದಿದ್ದರು. ತಮ್ಮ ಸಹಜ ಅಭಿನಯದ ಅಭಿಮಾನಿಗಳು ಮನ ಗೆದ್ದಿದ್ದರು.
ಸಂಚಿತಾ ಉಗ್ಲೆ ಅವರ ಸಾವಿನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನೆಯ ಹಿಂದಿನ ನಿಖರ ಕಾರಣದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ವಿವರಗಳು ಲಭ್ಯವಾಗುವ ಸಾಧ್ಯತೆ ಇದೆ.
Bangalore [Bangalore],Bangalore,Karnataka













