Simple Suni Movie: ಸಿಂಪಲ್ ಸುನಿ ಚಿತ್ರದ ಹೊಸ ಮ್ಯಾಟರ್ ಔಟ್! | | ACTPnews

ಸಿಂಪಲ್ ಸುನಿ ಚಿತ್ರದ ಹೊಸ ಮ್ಯಾಟರ್ ಔಟ್; ಅದು ಏನ್ ಗೊತ್ತಾ?


Last Updated:

ಡೈರೆಕ್ಟರ್ ಸಿಂಪಲ್ ಸುನಿ ಅವರ ಮೋಡ ಕವಿದ ವಾತಾವರಣ ಚಿತ್ರದ ಹೊಸ ಮ್ಯಾಟರ್ ಹೊರ ಬಂದಿದೆ. ಅಧಿಕೃತವಾಗಿಯೇ ಈ ಸುದ್ದಿ ರಿವೀಲ್ ಆಗಿದೆ. ಇದರ ವಿವರ ಇಲ್ಲಿದೆ ಓದಿ.

ಸಿಂಪಲ್ ಸುನಿ ಚಿತ್ರದ ಹೊಸ ಮ್ಯಾಟರ್ ಔಟ್; ಅದು ಏನ್ ಗೊತ್ತಾ?
ಸಿಂಪಲ್ ಸುನಿ ಚಿತ್ರದ ಹೊಸ ಮ್ಯಾಟರ್ ಔಟ್; ಅದು ಏನ್ ಗೊತ್ತಾ?

ಚಮಕ್ ಚಿತ್ರದ ಡೈರೆಕ್ಟರ್ ಸಿಂಪಲ್ ಸುನಿ (Simple Suni) ಮತ್ತೊಂದು ಚಿತ್ರ ತಯಾರು ಮಾಡಿದ್ದಾರೆ. ಮೋಡ ಕವಿದ ವಾತಾವರಣ (Moda Kavida Vaatavarana Movie) ಅನ್ನುವ ಈ ಚಿತ್ರದ ಚಿತ್ರೀಕರಣ (Shooting) ಆಗಿದೆ. ಇದಕ್ಕೆ ಸೆನ್ಸಾರ್ ಕೂಡ ಆಗಿದೆ. ಸಿನಿಮಾದ ಈ ವಿಚಾರವನ್ನ ಅಧಿಕೃತವಾಗಿಯೇ ಚಿತ್ರ ತಂಡ (Film Team) ಹಂಚಿಕೊಂಡಿದೆ. ಈ ಸಿನಿಮಾದ ಈ ವಿಷಯ ಸೇರಿದಂತೆ ಇತರ ಮಾಹಿತಿಯ ಒಂದು ಸ್ಟೋರಿ ಇಲ್ಲಿದೆ ಓದಿ.

ಸುನಿ ಸಿನಿಮಾ ಸೆನ್ಸಾರ್

ಸಿಂಪಲ್ ಸುನಿ ಡೈರೆಕ್ಷನ್ ಮಾಡಿರೋ ಈ ಚಿತ್ರಕ್ಕೆ ಸೆನ್ಸಾರ್ ಆಗಿದೆ. ಈ ಚಿತ್ರ ನೋಡಿದ ಸೆನ್ಸಾರ್ ಮಂಡಳಿ ಯಾವುದೆ ಕಟ್ಸ್ ಹೇಳಿಲ್ಲ. ಮ್ಯೂಟ್ ಮಾಡುವಂತೆನೂ ತಿಳಿಸಿಲ್ಲ.
simple suni moda kavida vaatavarana movie latest updates

ಶಿಷ್ಯನಿಗಾಗಿ ಡೈರೆಕ್ಷನ್

ಚಿತ್ರಕ್ಕೆ ಕ್ಲಿಯರ್ ಯು/ಎ ಪ್ರಮಾಣ ಪತ್ರ ಕೊಟ್ಟಿದೆ. ಅಂದ್ರೆ ಇದನ್ನ ಎಲ್ಲರೂ ನೋಡಬಹುದು ಅಂತಲೇ ಅರ್ಥ ಬರುತ್ತದೆ. ಆ ರೀತಿಯ ಈ ಚಿತ್ರ Gen -G ಲವ್ ಸ್ಟೋರಿ ಹೊಂದಿದೆ.

ಶಿಷ್ಯನಿಗಾಗಿ ಡೈರೆಕ್ಷನ್

ಈ ಮೋಡ ಕವಿದ ವಾತಾವರಣ ಚಿತ್ರದಲ್ಲಿ ಸಿಂಪಲ್ ಸುನಿ ಶಿಷ್ಯ ಹೀರೋ ಆಗಿದ್ದಾರೆ. ಶೀಲಮ್ ಈ ಚಿತ್ರದ ನಾಯಕರಾಗಿದ್ದಾರೆ. ಈ ಮೊದಲ ಸಣ್ಣಪುಟ್ಟ ರೋಲ್‌ಗಳನ್ನ ಇತರ ಚಿತ್ರಗಳಲ್ಲಿ ಮಾಡಿದ್ದಾರೆ.

ಆದರೆ, ಈ ಚಿತ್ರದ ಮೂಲಕವೇ ಹೀರೋ ಆಗಿದ್ದಾರೆ. ಈ ಸಿನಿಮಾದಲ್ಲಿ ಓಂ ಪ್ರಕಾಶ್ ರಾವ್ ಪುತ್ರಿ ಸಾತ್ವಿಕಾ ನಾಯಕಿ ಆಗಿದ್ದಾರೆ. ಮೋಕ್ಷಾ ಕುಶಾಲ್ ಅವರೂ ಈ ಚಿತ್ರದ ನಾಯಕಿ ಆಗಿದ್ದಾರೆ.

ಜೂಡಾ ಸ್ಯಾಂಡಿ

ಜೂಡಾ ಸ್ಯಾಂಡಿ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸಂತೋಷ ರೈ ಪಾತಾಜೆ ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಹಿಂದೆ ಸಿಂಪಲ್ ಸುನಿ ಅವರ ಒಂದು ಸರಳ ಪ್ರೇಮ ಕಥೆ ಚಿತ್ರ ನಿರ್ಮಿಸಿದ ಅದೇ ರಾಮ್ ಮೂವೀಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

simple suni moda kavida vaatavarana movie latest updates

ಸುನಿ ಸಿನಿಮಾ ಸೆನ್ಸಾರ್

ಚಿತ್ರದ ಎರಡು ಹಾಡು ಈಗಾಗಲೇ ಜನರ ಗಮನ ಸೆಳೆದಿವೆ. ಸಂಜಿತ್ ಹೆಗ್ಡೆ ಹಾಡಿರೋ “ನನ್ನೆದೆಯ ಹಾಡೊಂದನು” ಜನರಿಗೆ ಇಷ್ಟ ಆಗಿದೆ. ಇದೇ ಚಿತ್ರದ ಸಂಗೀತ ಹಾಡಿರುವ “ಯಯಾತಿ” ಜನಕ್ಕೆ ಇಷ್ಟ ಆಗಿದೆ.

ಚಿತ್ರ ರಿಲೀಸ್

ಮೋಡಕವಿದ ವಾತಾವರಣ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಇದೇ ವರ್ಷ ಜೂನ್-26 ರಂದು ಇದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಇಷ್ಟು ಮಾಹಿತಿ ಇದೆ.

ಸಂಗೀತಮಯ ಸಿನಿಮಾ

ಸಿಂಪಲ್ ಸುನಿ ತಮ್ಮ ಒಂದು ಸರಳ ಪ್ರೇಮ ಕಥೆ ಚಿತ್ರದಲ್ಲಿ ಲವ್ ಸ್ಟೋರಿನೂ ಹೇಳಿದ್ದರು. ಸಂಗೀತದ ಸುತ್ತವೂ ಈ ಸ್ಟೋರಿಯನ್ನ ಹೆಣೆದಿದ್ದರು.

ಹಾಗಾಗಿಯೇ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಒಳ್ಳೆ ಹಾಡುಗಳನ್ನ ಕೊಟ್ಟಿದ್ದರು. ಈ ಒಂದು ಸರಳ ಪ್ರೇಮ ಕಥೆ ಮ್ಯೂಸಿಕಲಿ ಕೂಡ ಎಲ್ಲ ಗಮನಸೆಳೆದಿತ್ತು ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports