Chiranjeevi Workout: ಮೆಗಾಸ್ಟಾರ್ ಮೆಗಾ ವರ್ಕೌಟ್! ಏನಿದು ಮೆಗಾ 158? | | ACTPnews

megastar Chiranjeevi megha158 movie latest updates


ಮೆಗಾಸ್ಟಾರ್ ವರ್ಕೌಟ್

ಮೆಗಾಸ್ಟಾರ್ ಚಿರಂಜೀವಿ ಅದೆಷ್ಟು ಯಂಗ್ ಆಗಿದ್ದಾರೆ. 1955 ಆಗಸ್ಟ್-22 ಇವರ ಡೇಟ್ ಆಫ್ ಬರ್ತ್ ನೋಡಿ. ಇದನ್ನ ಲೆಕ್ಕ ಹಾಕಿದೆ. ಈ ವರ್ಷಕ್ಕೆ 71 ವರ್ಷ ಆಗುತ್ತದೆ.

ಮೆಗಾಸ್ಟಾರ್ ಮೆಗಾ ವರ್ಕೌಟ್; ಏನಿದು ಮೆಗಾ 158..?

ಆದರೆ, ಚಿರಂಜೀವಿ ಅವರು ಹಾಗೆ ಅನಿಸೋದೇ ಇಲ್ಲ. ಇವರಿಗೆ ವಯಸ್ಸಾಗಿದೆ ಅನ್ನೋ ಫೀಲ್ ಕೂಡ ಇಲ್ಲ. ಆದರೆ, ಅಲ್ಲಲ್ಲಿ ತಲೆಯಲ್ಲಿ ಬಿಳಿ ಕೂದಲು ಕಾಣಿಸುತ್ತವೆ.

ಶಿವಣ್ಣನಿಗಿಂತಲೂ ದೊಡ್ಡವರು

ಚಿರಂಜೀವಿ ಅವರು ಶಿವರಾಜ್ ಕುಮಾರ್ ಅವರಿಗಿಂತಲೂ ದೊಡ್ಡವರು. ಶಿವಣ್ಣನಿಗೆ 64 ವರ್ಷ ಆಗಿದೆ. ಇವರು ಸಖತ್ ಬಿಡಿ. ಆದರೆ, ಇವರು ವಾಕ್ ಜಾಸ್ತಿ ಮಾಡ್ತಾರೆ.

ಮೆಗಾಸ್ಟಾರ್ ಚಿರಂಜೀವಿ ಜಿಮ್ ಅಲ್ಲಿ ಬೆವರಿಳಿಸ್ತಾರೆ. ಎಲ್ಲ ರೀತಿಯ ವರ್ಕೌಟ್ ಮಾಡ್ತಾರೆ. ಈ ಏಜ್ ಅಲ್ಲೂ ಅಷ್ಟೆ ಎನರ್ಜಿಯಲ್ಲಿಯೇ ವರ್ಕೌಟ್ ಮಾಡ್ತಾರೆ ನೋಡಿ.

ಯಾವ ಚಿತ್ರದ ತಯಾರಿ

ಚಿರಂಜೀವಿ ಅವರು ಕೆವಿಎನ್ ನಿರ್ಮಾಣದ ಚಿತ್ರ ಮಾಡ್ತಿದ್ದಾರೆ. ಡೈರೆಕ್ಟರ್ ಬಾಬಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಚಿರಂಜೀವಿ ಅವರ ಚಿತ್ರ ಜೀವನದ 158 ಚಿತ್ರ ಇದಾಗಿದೆ.

megastar Chiranjeevi megha158 movie latest updates

ಮೆಗಾಸ್ಟಾರ್ ವರ್ಕೌಟ್

(ಚಿತ್ರ ಕೃಪೆ: ಮೆಗಾಸ್ಟಾರ್ ಚಿರಂಜೀವಿ ಇನ್‌ಸ್ಟಾಗ್ರಾಮ್)

ಈ ಹಿನ್ನೆಲೆಯಲ್ಲಿ ಈ ಚಿತ್ರಕ್ಕೆ Mega158 ಅಂತ ಹೆಸರಿಟ್ಟಿದ್ದಾರೆ. ಈ ಸಿನಿಮಾ ಇನ್ನು ಲಾಂಚ್ ಆಗಿಲ್ಲ. ಆದರೆ, ಮುಹೂರ್ತದ ಡೇಟ್ ಅನ್ನು ಮೆಗಾಸ್ಟಾರ್ ಚಿರಂಜೀವಿ ರಿವೀಲ್ ಮಾಡಿದ್ದಾರೆ.

ಮೇ-21 ರಂದು ಶುರು

Mega158 ಸಿನಿಮಾ ಇದೇ ತಿಂಗಳು ಶುರು ಆಗುತ್ತಿದೆ. ಮೇ-21ರಂದು ಈ ಚಿತ್ರದ ಮುಹೂರ್ತ ಇದೆ. ಈ ವಿಷಯವನ್ನ ಸ್ವತಃ ಚಿರಂಜೀವಿ ಅವರು ತಮ್ಮ ವರ್ಕೌಟ್ ವಿಡಿಯೋದ ಕೊನೆಯಲ್ಲಿ ಹೇಳಿದ್ದಾರೆ.

ಸಖತ್ ವರ್ಕೌಟ್ ಮಾಡಿದ್ಮೇಲೆ ಕೊನೆಯಲ್ಲಿ ತಮ್ಮ ಚಿತ್ರದ ಮುಹೂರ್ತದ ವಿಷಯವನ್ನ ರಿವೀಲ್ ಮಾಡ್ತಾರೆ. ಇದರೊಟ್ಟಿಗೆ ಮೆಗಾಸ್ಟಾರ್ ಮತ್ತೊಂದು ಪ್ರಾಜೆಕ್ಟ್‌ಗೆ ರೆಡಿ ಆಗಿದ್ದಾರೆ ಅಂದ್ಹಾಗೆ ಆಯಿತು ನೋಡಿ.

megastar Chiranjeevi megha158 movie latest updates

ಮೇ-21 ರಂದು ಶುರು

(ಚಿತ್ರ ಕೃಪೆ: ಮೆಗಾಸ್ಟಾರ್ ಚಿರಂಜೀವಿ ಇನ್‌ಸ್ಟಾಗ್ರಾಮ್)

ಮೆಗಾಸ್ಟಾರ್ ಸಖತ್ ಫಿಟ್

ಮೆಗಾಸ್ಟಾರ್ ಜಿರಂಜೀವಿ ಅವರು ಒಳ್ಳೆ ಡ್ಯಾನ್ಸರ್ ಅನ್ನೋದು ಗೊತ್ತೇ ಇದೆ. ಸಖತ್ ಫ್ಲೆಕ್ಸಿಬಲ್ ಅನ್ನೋದು ತಿಳಿದಿದೆ. ಇವರ ಸಿನಿಮಾ ಮತ್ತು ಡ್ಯಾನ್ಸ್‌ ಇಷ್ಟಪಡೋ ಅದೆಷ್ಟೋ ಅಭಿಮಾನಿಗಳು ಇದ್ದಾರೆ.

ಚಿರಂಜೀವಿ ಅಂದ್ರೆ ಡ್ಯಾನ್ಸ್ ಅನ್ನುವ ಮಾತು ಇಂದಿಗೂ ಇದೆ. ಆ ರೀತಿಯ ಚಿರಂಜೀವಿ ಅವರು ತಮ್ಮ ಚಿತ್ರಗಳಲ್ಲಿ ಇಂದಿಗೂ ಡ್ಯಾನ್ಸ್ ಮಾಡ್ತಾರೆ. ಅದಕ್ಕೆ ಫಿಟ್ ಆಗಿದ್ದಾರೆ. ಇನ್ನು ಇವರ ಪುತ್ರ ಏನು ಕಡಿಮೇನಾ? ಇವರ ಬಗ್ಗೆ ಮುಂದೆ ಇದೆ ಓದಿ.

ಚಿರಂಜೀವಿ ಪುತ್ರ ರಾಮ್ ಚರಣ್ ಕೂಡ ಒಳ್ಳೆ ಡ್ಯಾನ್ಸ್ ಆಗಿದ್ದಾರೆ. ಪೆದ್ದಿ ಚಿತ್ರದಲ್ಲಿ ಎ.ಆರ್.ರೆಹಮಾನ್ ಸಂಗೀತದ ಹಾಡುಗಳಿಗೆ ಮಸ್ತ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ. ಬ್ಯಾಟ್ ಹಿಡಿದುಕೊಂಡು ಮಾಡಿರೋ ಡ್ಯಾನ್ಸ್ ಸೂಪರ್ ಆಗಿದೆ. ವೈರಲ್ ಕೂಡ ಆಗಿದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed