AUS vs BAN: W,W,W 55 ವರ್ಷಗಳ ಏಕದಿನ ಇತಿಹಾಸದಲ್ಲಿ ಇದೇ ಮೊದಲು! ಬಾಂಗ್ಲಾ ವಿರುದ್ಧ ಅತ್ಯಂತ ಕೆಟ್ಟ ದಾಖಲೆ ಬರೆದ ಆಸ್ಟ್ರೇಲಿಯಾ | ಕ್ರೀಡಾ ಸುದ್ದಿ | ACTPnews

ಬಾಂಗ್ಲಾದೇಶ vs ಆಸ್ಟ್ರೇಲಿಯಾ


Last Updated:

ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಘೋರವಾಗಿ ವಿಫಲರಾಗಿದ್ದಾರೆ. ಬಾಂಗ್ಲಾದೇಶದ ವೇಗಿಗಳಿಂದ ದಾಳಿಯನ್ನು ಎದುರಿಸಲಾಗದೆ ತನ್ನ 55 ವರ್ಷಗಳ ಏಕದಿನ ಇತಿಹಾಸದಲ್ಲೇ ಕಳಪೆ ದಾಖಲೆಗೆ ಪಾತ್ರವಾಗಿದೆ.

ಬಾಂಗ್ಲಾದೇಶ vs ಆಸ್ಟ್ರೇಲಿಯಾ
ಬಾಂಗ್ಲಾದೇಶ vs ಆಸ್ಟ್ರೇಲಿಯಾ

ವಿಶ್ವಚಾಂಪಿಯನ್​ ಆಸ್ಟ್ರೇಲಿಯಾಕ್ಕೆ (Australia) ಹೊಸ ಮುಜುಗರದ ದಾಖಲೆಗೆ ಒಳಗಾಗಿದೆ. ಬಾಂಗ್ಲಾದೇಶ (Bangladesh vs Australia) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿನ ಹೀನಾಯ ಸೋಲಿನ ನಂತರ ಆಸ್ಟ್ರೇಲಿಯಾದ ಪ್ರದರ್ಶನದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಢಾಕಾದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ, ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಘೋರವಾಗಿ ವಿಫಲರಾಗಿದ್ದಾರೆ. ಬಾಂಗ್ಲಾದೇಶದ ವೇಗಿಗಳಿಂದ ದಾಳಿಯನ್ನು ಎದುರಿಸಲು ಕಾಂಗರೂ ಪಡೆ ಹೆಣಗಾಡುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಖಾತೆ ತೆರೆಯುವ ಮುನ್ನವೇ 3 ವಿಕೆಟ್ ಕಳೆದುಕೊಂಡು ಏಕದಿನ ಇತಿಹಾಸದಲ್ಲಿ ನಾಚಿಕೆಗೇಡಿನ ದಾಖಲೆಗೆ ಪಾತ್ರವಾಯಿತು.

ಖಾತೆ ತೆರೆಯುವ ಮುನ್ನವೇ 3 ವಿಕೆಟ್

ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಸ್ಕಿನ್ ಅಹ್ಮದ್ ಎಸೆದ ಮೊದಲ ಓವರ್‌ನಲ್ಲಿ, ಮ್ಯಾಥ್ಯೂ ಶಾರ್ಟ್ ವಿಕೆಟ್ ಕಳೆದುಕೊಂಡಿತು. ತಸ್ಕಿನ್​ ನಾಲ್ಕನೇ ಎಸೆತದಲ್ಲಿ ಖಾತೆ ತೆರೆಯದೆಯೇ ಕ್ಲೀನ್ ಬೌಲ್ಡ್ ಆದರು. ಮೊದಲ ಏಕದಿನ ಪಂದ್ಯದಲ್ಲೂ ಶಾರ್ಟ್ ಇದೇ ರೀತಿ ಔಟಾಗಿದ್ದರು. ನಂತರ ಎರಡನೇ ಓವರ್ ಎಸೆದ ಮುಸ್ತಾಫಿಜುರ್, ಪ್ರವಾಸಿ ತಂಡಕ್ಕೆ ಭಾರೀ ಹೊಡೆತ ನೀಡಿದರು. ಮೊದಲ ಎಸೆತದಲ್ಲಿ ಕೂಪರ್ ಕಾನೊಲಿ (0) ಮತ್ತು 3ನೇ ಕ್ರಮಾಂಕದಲ್ಲಿ ಬಂದ ರೆನ್‌ಶಾ (0) ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ ಲಿಟನ್ ದಾಸ್​​ ಕೈಗೆ ಕ್ಯಾಚ್ ನೀಡಿ ಔಟ್ ಆದರು.

55 ವರ್ಷಗಳಲ್ಲೇ ಇದೇ ಮೊದಲು

ತಸ್ಕಿನ್ ಹಾಗೂ ಮುಸ್ತಾಫಿಜುರ್ ಮಾರಕ ಬೌಲಿಂಗ್ ಪರಿಣಾಮವಾಗಿ, ಆಸ್ಟ್ರೇಲಿಯಾ ತಂಡವು ಒಂದೇ ಒಂದು ರನ್ ಗಳಿಸದೆ ಮೂರು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಈ ಮೂಲಕ ಆಸ್ಟ್ರೇಲಿಯಾ ಬೇಡದ ದಾಖಲೆಯನ್ನು ಸ್ಥಾಪಿಸಿತು. ಆಸೀಸ್ ತಂಡ 55 ವರ್ಷಗಳ ಏಕದಿನ ಇತಿಹಾಸದಲ್ಲಿ ಒಂದೇ ಒಂದು ರನ್ ಗಳಿಸದೆ ಮೂರು ವಿಕೆಟ್ ಕಳೆದುಕೊಂಡಿರುವುದು ಇದೇ ಮೊದಲು. ಇದಲ್ಲದೆ, ಈ ಕಳಪೆ ದಾಖಲೆಯನ್ನು ಸ್ಥಾಪಿಸಿದ ಮೊದಲ ಏಷ್ಯನ್ ಅಲ್ಲದ ತಂಡ ಎಂಬ ಕುಖ್ಯಾತಿಗೆ ಆಸ್ಟ್ರೇಲಿಯಾ ಪಾತ್ರವಾಯಿತು.

ಸಂಕಷ್ಟದಲ್ಲಿ ಆಸ್ಟ್ರೇಲಿಯಾ

ಈ ಹಿಂದೆ, ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಈ ಬೇಡದ ಸಾಧನೆಯನ್ನು ದಾಖಲಿಸಿತ್ತು. ಬಾಂಗ್ಲಾದೇಶ 2003ರಲ್ಲಿ ಶ್ರೀಲಂಕಾ ವಿರುದ್ಧ ಇದೇ ರೀತಿಯ ಕುಸಿತ ಅನುಭವಿಸಿತ್ತು. ಈಗ, ವಿಶ್ವಚಾಂಪಿಯನ್​ ಕೂಡ ಈ ಪಟ್ಟಿಗೆ ಸೇರಿದೆ. ಪಂದ್ಯದ ವಿಷಯಕ್ಕೆ ಬಂದರೆ, ಆಸ್ಟ್ರೇಲಿಯಾ 42 ಓವರ್‌ಗಳ ಅಂತ್ಯದ ವೇಳೆಗೆ 8 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಿದೆ. ಮೊದಲ ಮೂವರು ಸೊನ್ನೆ ಸುತ್ತಿದರೆ, ಅಲೆಕ್ಸ್ ಕ್ಯಾರಿ 13, ಕ್ಯಾಮರೂನ್ ಗ್ರೀನ್ 25 ರನ್​ಗಳಿಸಿ ನಿರ್ಗಮಿಸಿದರು. ನಾಯಕ ಜೋಶ್ ಇಂಗ್ಲಿಸ್ 34 ರನ್​ಗಳಿಸಿದರು.

ಲಾಬುಶೇನ್ ಆಸರೆ

ಆಸ್ಟ್ರೇಲಿಯಾ ತಂಡ 81ಕ್ಕೆ6 ವಿಕೆಟ್ ಕಳೆದುಕೊಂಡಿದ್ದ ಕಠಿಣ ಸಂದರ್ಭದಲ್ಲಿ ಒಂದಾದ ಮಾರ್ನಸ್ ಲಾಬುಶೇನ್ ಹಾಗೂ ಝೇವಿಯರ್ ಬಾರ್ಟ್ಲಿಟ್

ಬಾಂಗ್ಲಾದೇಶಿ ಬೌಲರ್‌ಗಳ ವಿರುದ್ಧ ಸ್ವಲ್ಪ ಸಮಯದವರೆಗೆ ಉತ್ಸಾಹಭರಿತ ಹೋರಾಟ ನಡೆಸಿದರು. ಈ ಜೋಡಿ 7ನೇ ವಿಕೆಟ್ ಜೊತೆಯಾಟದಲ್ಲಿ 103 ರನ್​ ಸೇರಿಸಿದರು. ಬಾರ್ಟ್ಲಿಟ್ 48 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​​​ಗಳ ಸಹಿತ 52 ರನ್​ಗಳಿಸಿ ಔಟ್ ಆದರು. ಇವರ ಬೆನ್ನಲ್ಲೇ ಜಂಪಾ ಕೂಡ ಮುಂದಿನ ಎಸೆತದಲ್ಲೇ ಖಾತೆ ತೆರೆಯದೇ ತಸ್ಕಿನ್​ ಅಹ್ಮದ್​ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು.

ಪಂದ್ಯಕ್ಕೆ ಮಳೆ ಅಡ್ಡಿ

ಪ್ರಸ್ತುತ ಪಂದ್ಯ ಮಳೆಯಿಂದ ಸ್ಥಗಿತವಾಗಿದೆ. ಮಾರ್ನಸ್ ಲಾಬುಶೇನ್ 85 ಎಸೆತಗಳಲ್ಲಿ 3 ಬೌಂಡರಿಗಳ ಸಹಿತ ಅಜೇಯ 55 ರನ್​ಗಳಿಸಿ ಕ್ರೀಸ್​​​​ನಲ್ಲಿದ್ದಾರೆ. ಬಾಂಗ್ಲಾದೇಶದ ಪರ ಮುಸ್ತಾಫಿಜುರ್ ರೆಹಮಾನ್ 27ಕ್ಕೆ3, ತಸ್ಕಿನ್ ಅಹ್ಮದ್ 33ಕ್ಕೆ3, ತನ್ವಿರ್ ಅಹ್ಮದ್​ 45ಕ್ಕೆ2 ವಿಕೆಟ್ ಪಡೆದಿದ್ದಾರೆ.

ಬಾಂಗ್ಲಾದೇಶ ಪ್ರವಾಸಕ್ಕೂ ಮೊದಲು, ಆಸ್ಟ್ರೇಲಿಯಾ ಪಾಕಿಸ್ತಾನ ವಿರುದ್ಧದ ODI ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತ್ತು. ಇದೀಗ ಬಾಂಗ್ಲಾದೇಶದ ವಿರುದ್ಧವೂ ಸೋಲಿನ ಭೀತಿಯಲ್ಲಿದೆ. ತಂಡದಲ್ಲಿ ಮಿಚೆಲ್ ಮಾರ್ಷ್, ಟ್ರಾವಿಸ್ ಹೆಡ್ ಮತ್ತು ಕಮ್ಮಿನ್ಸ್ ಅನುಪಸ್ಥಿತಿಯು ಸ್ಪಷ್ಟವಾಗಿ ಗೋಚರಿಸುತ್ತದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports