Last Updated:
ಗಂಡನನ್ನೇ ಕೊಲ್ಲಲು ಯತ್ನಿಸಿದ ಆರೋಪಿ ವಿಮಲಾ ಮಾಟ ಮಂತ್ರವನ್ನು ಅಭ್ಯಾಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಆಕೆ ತನ್ನ ಪತಿ ರಾಜೇಶ್ ಜೊತೆ ಆಗಾಗ್ಗೆ ಜಗಳವಾಡುತ್ತಿದ್ದಳು ಎಂದು ದಂಪತಿ ಇದ್ದ ಮನೆಯ ಮಾಲೀಕ ರಿಂಕು ಹೇಳಿದ್ದಾರೆ. ರಿಂಕು ಹೇಳಿಕೆ ಆಧರಿಸಿ ಪೊಲೀಸರು ತನಿಖೆಯನ್ನು ವಿಸ್ತರಿಸಿದ್ದಾರೆ.
ಹರಿಯಾಣ: ಮಾಟ ಮಂತ್ರವನ್ನು ಅಭ್ಯಾಸ ಮಾಡುತ್ತಿದ್ದ ಮಹಿಳೆಯೊಬ್ಬಳು ತನ್ನ ಗಂಡನ ಕರುಳು ಕಿತ್ತು ಚೀಲದಲ್ಲಿ ತುಂಬಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಈ ವೇಳೆ ಪರಾರಿಯಾಗಲು ಯತ್ನಿಸಿ ಟೆರೆಸ್ನಿಂದ ಹಾರಿ ಗಂಭೀರವಾಗಿ (Crime News) ಗಾಯಗೊಂಡಿರುವ ಘಟನೆ ವರದಿಯಾಗಿದೆ.














