Shivarajkumar: ಶಿವರಾಜ್‌ಕುಮಾರ್ ಇದ್ದ ಜಾಗದಲ್ಲೇ ಪಟಾಕಿ ಅವಘಡ! ಕೂದಲೆಳೆ ಅಂತರದಲ್ಲಿ ಪಾರಾದ ಶಿವಣ್ಣ! | | ACTPnews

News18


Last Updated:

ಚಿತ್ರದುರ್ಗದ ಖಾಸಗಿ ಶೋರೂಂವೊಂದರಲ್ಲಿ ಶಿವರಾಜ್‌ಕುಮಾರ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಫ್ಲವರ್ ಪಾಟ್ ಏಕಾಏಕಿ ಬ್ಲಾಸ್ಟ್ ಆಗಿದೆ.

News18
News18

ಬೇಲ್ ಸಿನಿಮಾ ಪ್ರಮೋಷನ್‌ಗಾಗಿ ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಶಿವರಾಜ್‌ಕುಮಾರ್ (Shivarajkumar) ಅವರಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದ್ದಾರೆ. ಆದರೆ, ಈ ವೇಳೆ ಪಟಾಕಿ ಸಿಡಿಸುವಾಗ ಸಂಭವಿಸಿದ ಅವಘಡದಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಶಿವರಾಜ್‌ಕುಮಾರ್ ಮೇಲೆ ಪವರ್ ಫ್ಲ್ಯಾಟ್ ಬ್ಲಾಸ್ಟ್ ಆಗಿದ್ದು, ಅದೃಷ್ಟವಶಾತ್ ಶಿವಣ್ಣ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಚಿತ್ರದುರ್ಗದ ಖಾಸಗಿ ಶೋರೂಂವೊಂದರಲ್ಲಿ ಶಿವರಾಜ್‌ಕುಮಾರ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಫ್ಲವರ್ ಪಾಟ್ ಏಕಾಏಕಿ ಬ್ಲಾಸ್ಟ್ ಆಗಿದೆ. ಬ್ಲಾಸ್ಟ್‌ನಿಂದ ಶಿವರಾಜ್‌ಕುಮಾರ್ ಅವರ ಮೇಲೆಯೇ ಸಿಡಿತದ ಪರಿಣಾಮ ಉಂಟಾಗಿದ್ದು, ಸ್ಥಳದಲ್ಲಿದ್ದ ಅಭಿಮಾನಿಗಳು ಹಾಗೂ ಸಿಬ್ಬಂದಿ ಕೆಲಕಾಲ ಆತಂಕಕ್ಕೊಳಗಾದರು.

ಶಿವಣ್ಣ ಜಸ್ಟ್ ಮಿಸ್

ಪವರ್ ಫ್ಲ್ಯಾಟ್ ಬ್ಲಾಸ್ಟ್‌ನಿಂದ ಶಿವರಾಜ್‌ಕುಮಾರ್ ಅವರಿಗೆ ಅಪಾಯವಾಗುವ ಸಾಧ್ಯತೆ ಇದ್ದರೂ, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ನಟ ಶಿವರಾಜ್‌ಕುಮಾರ್ ಸುರಕ್ಷಿತವಾಗಿದ್ದು, ಬಳಿಕ ಅಭಿಮಾನಿಗಳೊಂದಿಗೆ ಮಾತನಾಡಿದ್ದಾರೆ. ಘಟನೆ ನಡೆದ ಬಳಿಕ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಬೇಲ್ ಎಲ್ಲ ಕಡೆ ಚೆನ್ನಾಗಿ ಸಾಗುತ್ತಿದೆ. ಇದು ಕುಟುಂಬ ಸಮೇತ ಕುಳಿತು ನೋಡುವಂತಹ ಸಿನಿಮಾ ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ. ಸಿನಿಮಾ ಎಂದರೆ ಸಿನಿಮಾ ಅಷ್ಟೇ. ದೊಡ್ಡ ಬಜೆಟ್, ಸಣ್ಣ ಬಜೆಟ್ ಎಂಬುದೆಲ್ಲ ನಾವು ಕಲ್ಪನೆ ಮಾಡಿಕೊಳ್ಳುವ ವಿಚಾರ. ದೊಡ್ಡ ಬಜೆಟ್ ಸಿನಿಮಾ ಮಾಡಿದರೆ ಮಾತ್ರ ಅದು ಯಶಸ್ವಿಯಾಗುತ್ತದೆ ಎಂಬುದು ತಪ್ಪು ಕಲ್ಪನೆ ಎಂದು ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed