Shiva Rajkumar: ‘ನಿಮ್ಮ ಧ್ವನಿ, ನಿಮ್ಮ ನಟನೆ ನೆನಪಿನಂಗಳದಲ್ಲಿ ಜೀವಂತ’; ನಾನಾ ಪಾಟೇಕರ್‌ಗೆ ಶಿವಣ್ಣ ಭಾವುಕ ನಮನ! | | ACTPnews

Shivarajkumar says Nana Patekars realistic acting is our inspiration on social media r


ಅದ್ಭುತ ಕಲಾವಿದನಿಗೆ ನಮನ

ನಾನಾ ಪಾಟೇಕರ್ ಸಿಂಪಲ್ ಆಗಿಯೇ ಇದ್ದರು. ರೈತನನ್ನ ನೋಡಿದಂತೆ ಆಗುತ್ತಿತ್ತು. ಸಮಾಜದ ಬಗ್ಗೆ ಸುಮ್ನೆ ಮಾತ್ ಆಡ್ತಾ ಇರಲಿಲ್ಲ. ಅದನ್ನ ನಿಜವಾಗಿಯೂ ಮಾಡ್ತಾ ಇದ್ದರು.

ನಿಮ್ಮ ನೈಜ ನಟನೆ ನಮ್ಮಂತಹ ಕಲಾವಿದರಿಗೆ ಸ್ಪೂರ್ತಿ
(ಚಿತ್ರ ಕೃಪೆ: ಶಿವರಾಜ್‌ ಕುಮಾರ್ ಎಕ್ಸ್‌ ಖಾತೆ)

ಸಿನಿಮಾದಲ್ಲಿ ದುಡಿದ ಹಣದಲ್ಲಿ ಸಮಾಜದ ಒಳಿತಿಗಾಗಿ, ರೈತರ ಒಳಿತಿಗಾಗಿ ಖರ್ಚು ಮಾಡ್ತಾ ಇದ್ದರು. ಆ ರೀತಿಯ ಸರಳ ಮತ್ತು ಈ ವಿಶೇಷ ವ್ಯಕ್ತಿ ಎಲ್ಲರನ್ನೂ ಬಿಟ್ಟು ಹೋಗಿದ್ದಾರೆ.

ಶಿವಣ್ಣನ ಸಂತಾಪದ ಮಾತು

ಶಿವಣ್ಣ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ಆದರೆ,ಇದು ಸಂತಾಪದ ರೀತಿ ಕಾಣೋದಿಲ್ಲ. ಸ್ಪೂರ್ತಿಯ ಮಾತುಗಳಂತೇನೆ ಇದೆ.

ಕೊನೆಯ ಮಾತು

ಶಿವಣ್ಣ ಈ ಒಂದು ಪೋಸ್ಟ್ ಅಲ್ಲಿ ಕೊನೆಗೆ ಒಂದು ಮಾತು ಬರೆದಿದ್ದಾರೆ. “ಅದ್ಭುತ ಕಲವಿದನಿಗೆ ಹೃದಯಪೂರ್ವಕ ನಮನ. ಓಂ ಶಾಂತಿ” ಅಂತಲೇ ಕೊನೆ ಮಾಡಿದ್ದಾರೆ.

ನಾನಾ ಪಾಟೇಕರ್ ಬಗ್ಗೆ ಶಿವಣ್ಣ ತಮ್ಮ ಎಕ್ಸ್ ಖಾತೆಯಲ್ಲಿಯೇ ಇದನ್ನ ಬರೆದುಕೊಂಡಿದ್ದಾರೆ. ಇನ್ನು ನಾನಾ ಪಾಟೇಕರ್ ಕನ್ನಡದ ಒಂದೇ ಒಂದು ಚಿತ್ರ ಮಾಡಿದ್ದಾರೆ.

ಯಕ್ಷ ಚಿತ್ರದಲ್ಲಿ ನಟನೆ

ನಾನಾ ಪಾಟೇಕರ್ ಅವರು ಯಕ್ಷ ಚಿತ್ರದಲ್ಲಿ ತಂದೆ ಪಾತ್ರ ಮಾಡಿದ್ದಾರೆ. ಲೂಸ್ ಮಾದ ಯೋಗಿ ಅವರ ತಂದೆಯ ಪಾತ್ರದಲ್ಲಿಯೇ ನಾನಾ ಪಾಟೇಕರ್ ಅಭಿನಯಿಸಿದ್ದಾರೆ.

Shivarajkumar says Nana Patekars realistic acting is our inspiration on social media r

ನಿಮ್ಮ ಧ್ವನಿ, ನಿಮ್ಮ ನಟನೆ ನೆನಪಿನಂಗಳದಲ್ಲಿ ಜೀವಂತ
(ಚಿತ್ರ ಕೃಪೆ: ಶಿವರಾಜ್‌ ಕುಮಾರ್ ಇನ್​ಸ್ಟಾಗ್ರಾಮ್)

ನಾನಾ ಪಾಟೇಕರ್ ಅವರ ಬಗ್ಗೆ ಚಿತ್ರದ ನಿರ್ಮಾಪಕ ಹಾಗೂ ಯೋಗಿ ಅವರ ತಂದೆ ಸಿದ್ದರಾಜು ಮಾತನಾಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದಲ್ಲಿಯೇ ವಿಶೇಷ ವಿಚಾರ ಹೇಳಿಕೊಂಡಿದ್ದಾರೆ.

25 ರಿಂದ 30 ದಿನ ಶೂಟಿಂಗ್

ನಾನಾ ಪಾಟೇಕರ್ ಅವರು ನಮ್ಮ ಚಿತ್ರಕ್ಕೆ 25 ರಿಂದ 30 ದಿನ ಶೂಟಿಂಗ್ ಮಾಡಿದ್ದರು. ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಇವರ ಪಾತ್ರದ ಚಿತ್ರೀಕರಣ ಮಾಡಿದೇವು.

ಕನ್ನಡದ ಹಲವರು ಇವರನ್ನ ಅಪ್ರೋಚ್ ಮಾಡಿದ್ದರು. ಆದರೆ, ನಾನಾ ಪಾಟೇಕರ್ ಅವರು ನಮ್ಮ ಚಿತ್ರವನ್ನೆ ಒಪ್ಪಿಕೊಂಡರು. ಈ ಮೂಲಕ ಕನ್ನಡಕ್ಕೆ ಇವರು ಕಾಲಿಟ್ಟರು ಅನ್ನೋದನ್ನು ಲೂಸ್ ಮಾದ ಯೋಗಿ ತಂದೆ ಸಿದ್ದರಾಜು ಹೇಳಿಕೊಂಡಿದ್ದಾರೆ.

ನಾನಾ ತುಂಬಾ ಸರಳ

ನಾನಾ ಪಾಟೇಕರ್ ಅವರು ತುಂಬಾನೆ ಸರಳವಾಗಿದ್ದರು. ನಮ್ಮ ಮಕ್ಕಳಾದ ಯೋಗಿ ಮತ್ತು ಮಹೇಶ್ ಅವರ ಜೊತೆಗೂ ಆತ್ಮೀಯರವಾಗಿದ್ದರು.

ನಮ್ಮ ಮನೆಗೆಲ್ಲ ಬಂದಿದ್ದರು. ಸುಮಾರು ಹೊತ್ತು ಇದ್ದರು. ಹಾಗೆ ಆ ಒಂದು ಸೋಮವಾರ ಒಂದು ವಿಶೇಷ ಕೆಲಸವನ್ನು ಇವರು ಮಾಡಿದ್ದರು ನೋಡಿ.

ನಮಗೆ ಬಿರಿಯಾನಿ ಮಾಡಿಕೊಟ್ರು

ನಮ್ಮ ಮನೆಗೆ ಸೋಮವಾರದ ದಿನ ಬಂದಿದ್ದರು. ಬಂದ್ಮೇಲೆ ನಮಗಾಗಿಯೇ ಬಿರಿಯಾನಿ ಮಾಡಿಕೊಟ್ಟರು. ಬಿರಿಯಾನಿಯನ್ನ ತಾವೇ ಸ್ವತಃ ಮಾಡಿದ್ದರು.

ನಮ್ಮಿಂದ ಒಂದೇ ಒಂದು ಇರುಳಿ ಕೂಡ ಕಟ್ ಮಾಡೋಕೆ ಕೊಡಲಿಲ್ಲ. ತಾವೇ ಬಿರಿಯಾನಿ ರೆಡಿ ಮಾಡಿದರು. ಹಾಗೆ ಎಲ್ಲರೂ ಕುಳಿತು ಬಿರಿಯಾನಿ ಸವಿದೇವು ಅನ್ನೋದನ್ನು ಸಿದ್ದರಾಜು ಅವರು ನೆನಪು ಮಾಡಿಕೊಂಡಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports