Last Updated:
666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಚಿತ್ರದ ಬಾಂಡ್ ಶಿವಣ್ಣನ ಪಾತ್ರದ ಪರಿಚಯವೂ ಇಲ್ಲಿ ಆಗುತ್ತದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ (666 Operation Dream Theatre movie) ಫಸ್ಟ್ ಟೀಸರ್ ರಿಲೀಸ್ (First Teaser) ಆಗಿದೆ. ಇದರಲ್ಲಿ ಚಿತ್ರದ ಒಂದಷ್ಟು ಝಲಕ್ ಮಾತ್ರ ಇದೆ. ಶಿವಣ್ಣನ (Shivanna) ಪಾತ್ರದ ಖದರ್ ಹೇಗಿದೆ ಅನ್ನೋದು ತಿಳಿಯುತ್ತದೆ. ಸಿನಿಮಾದಲ್ಲಿ ಬರುವ ಇತರ ಪಾತ್ರಗಳ ಪರಿಚಯ ಕೂಡ ಇಲ್ಲಿ ಆಗುತ್ತದೆ. ಈ ಟೀಸರ್‌ನ ಕಂಪ್ಲೀಟ್ ವಿಶ್ಲೇಷಣೆ (Teaser Review) ಇಲ್ಲಿದೆ ಓದಿ.
ಬಾಂಡ್ ಪ್ರಕಾಶ್ ಶಿವಣ್ಣನ ಹೊಸ ಆಪರೇಷನ್ ಶುರು
ಸಿಐಡಿ 999 ಚಿತ್ರ ಪ್ರಕಾಶ್ ಇಲ್ಲಿ ಮತ್ತೆ ಬಂದಂತೆ ಇದೆ. “ಏಜೆಂಟ್ ಪ್ರಕಾಶ” ಅಂತಲೇ ಹೇಳುವ ವಿಲನ್ ಕೂಡ ಇಲ್ಲಿದ್ದಾರೆ. ಗನ್ ಹಿಡಿಯುವ ಸ್ಟೈಲ್, ಹೊಡೆದಾಟದ ಶೈಲಿ ಎಲ್ಲವೂ ಆ ದಿನಗಳದ್ದೇ ಆಗಿದೆ. ಈ ಚಿತ್ರಕ್ಕೆ ಕೊಟ್ಟಿರೋ ಮ್ಯೂಸಿಕ್ ಕೂಡ ಅಷ್ಟೆ ಇಂಟ್ರಸ್ಟಿಂಗ್ ಆಗಿದೆ.
ಶಿವಣ್ಣ ಇಲ್ಲಿ ಏಜೆಂಟ್ ಪ್ರಕಾಶ್ ಆಗಿಯೆ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಗನ್ ಇದೆ. ಅಷ್ಟೆ ಯಾಕೆ ಸೂಟ್ ಕೇಸ್ ಅಲ್ಲೂ ಗನ್ ಇದೆ. ಅದರಿಂದ ಎದುರು ಇರೋ ವಿಲನ್‌ಗಳನ್ನ ಶೂಟ್ ಮಾಡೋ ದೃಶ್ಯವು ಇದೆ.
ಏಜೆಂಟ್ ಪ್ರಕಾಶ್ ಇಲ್ಲಿ ಒಂದು ಸೀಕ್ರೆಟ್ ಮಿಷನ್ ಮೇಲೆ ಹೋಗುತ್ತಿದ್ದಾರೆ. ಅದರ ಹೆಸರು 666 ಆಪರೇಷನ್ ಡ್ರೀಮ್ ಥಿಯೇಟರ್ ಅಂತಲೇ ಇದೆ. ಅದನ್ನ ಇಲ್ಲಿ ಶಿವಣ್ಣ ರಿವೀಲ್ ಮಾಡ್ತಾರೆ.
ಡಾಲಿ ಧನಂಜಯ್ ಪಾತ್ರದ ಪರಿಚಯ ಕೂಡ ಇಲ್ಲಿ ಆಗುತ್ತದೆ. ಡಾಲಿ ಇಲ್ಲಿ ಏಜೆಂಟ್ ಶಂಕರ್ ಆಗಿಯೇ ನಟಿಸಿದ್ದಾರೆ. ಎಷ್ಟೆ ಕಷ್ಟ ಬಂದರು ಸರಿಯೇ ? ನಾನು ನಿಮ್ಮ ಜೊತೆಗೆ ಇರ್ತೀನಿ ಅಂತಲೇ ಶಂಕರ್ ಇಲ್ಲಿ ಶಿವಣ್ಣ ಜೊತೆಗೆ ಸೇರಿಕೊಳ್ಳುತ್ತಾರೆ.
ಈ ದಿನಗಳಲ್ಲಿ ಆ ದಿನಗಳ ಬಾಂಡ್
ಆದರೆ, ಶಿವಣ್ಣ ಹೇಳಿದಂತೆ ಇಲ್ಲಿ ಕಷ್ಟಗಳು ಎದುರಾಗುತ್ತವೆ. ದೈತ್ಯ ವ್ಯಕ್ತಿ ಬಾಗಿಲು ಮುರಿದು ರೂಮ್ ಒಳಗೆ ನುಗ್ಗುತ್ತಾನೆ. ಡಾಲಿಯನ್ನ ಒಂದೇ ಕೈಯಲ್ಲಿ ಎತ್ತಿ ಬಿಸಾಕುತ್ತಾನೆ ನೋಡಿ.
ಈ ಚಿತ್ರದ ಟೀಸರ್ ಆರಂಭದಲ್ಲಿಯೇ ಅದಿತಿ ಬಾಲನ್ ಪಾತ್ರದ ಪರಿಚಯ ಆಗುತ್ತದೆ. ಅಮ್ಮನ ಪಾತ್ರದಲ್ಲಿಯೇ ಅದಿತಿ ಇಲ್ಲಿ ಕಾಣಿಸುತ್ತಾರೆ. ಪ್ರತಿ ಚಿತ್ರಕ್ಕೂ ಒಬ್ಬ ಬೇಕು ಅಂತ ಅಪ್ಪ ಹೇಳ್ತಾರೆ ಅಲ್ವೇ? ಅದ್ಯಾರು ಅಂತಲೇ ಆ ಮಗುವನ್ನ ಕೇಳ್ತಾರೆ.
ಈ ಒಂದು ಟೀಸರ್ ನೋಡಿದರೆ ಇಲ್ಲಿ ಪ್ರಿಯಾಂಕಾ ಮೋಹನ್ ಹಾಗೂ ಡಾಲಿ ಧನಂಜಯ್ ಜೋಡಿ ಅನಿಸುತ್ತಾರೆ. ಡಾಲಿಯನ್ನ ಹುಡುಕಿಕೊಂಡು ಮೇಲೆ ಹೋಗುವ ಪ್ರಿಯಾಂಕಾಗೆ ಇಲ್ಲಿ ಶಂಕರ್‌ನ ವರ್ತನೆ ಶಾಕ್ ಕೊಡುತ್ತದೆ.
ಹೀಗೆ ಚಿತ್ರದ ಪ್ರತಿ ಪ್ರಮುಖ ಪಾತ್ರದ ಪರಿಚಯ ಈ ಒಂದು ಟೀಸರ್ ಅಲ್ಲಿ ಆಗಿದೆ. ಇದರೊಟ್ಟಿಗೆ ಚರಣ್ ರಾಜ್ ಸಂಗೀತ, ಅದ್ವೈತ್ ಗುರುಮೂರ್ತಿ ಕ್ಯಾಮರಾವರ್ಕ್ ಹೆಚ್ಚು ಗಮನ ಸೆಳೆಯುತ್ತದೆ. ಇನ್ನು ಹೇಮಂತ್ ರಾವ್ ಡೈರೆಕ್ಷನ್ ಅಂತೂ ಸೂಪರ್ ಅನ್ನುವ ಫೀಲ್ ಈಗಲೇ ಬರುತ್ತದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka













