IND vs ENG ODI: 22 ವರ್ಷದ ಆರ್​​ಸಿಬಿ ಸ್ಟಾರ್ ಓಪನರ್!​ ಭಾರತ ವಿರುದ್ಧದ ODI ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್! | ಕ್ರೀಡಾ ಸುದ್ದಿ | ACTPnews

IND vs ENG ODI: 22 ವರ್ಷದ ಆರ್​​ಸಿಬಿ ಸ್ಟಾರ್ ಓಪನರ್!​ ಭಾರತ ವಿರುದ್ಧದ ODI ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್! | ಕ್ರೀಡಾ ಸುದ್ದಿ


ಏಕದಿನ ತಂಡದಿಂದ ಜಾಕ್ ಕ್ರಾಲೆ, ಲ್ಯೂಕ್ ವುಡ್ ಏಕದಿನ ತಂಡದಿಂದ ಅವಕಾಶ ಕಳೆದುಕೊಂಡಿದ್ದಾರೆ. ಜೇಮಿ ಓವರ್ಟನ್ ಹಾಗೂ ಬ್ರೈಡನ್ ಕಾರ್ಸ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ತಂಡಕ್ಕೆ ಆಯ್ಕೆಯಾಗಿಲ್ಲ.

ಆರ್​ಸಿಬಿ ಸ್ಟಾರ್​​ಗೆ ಆರಂಭಿಕ ಸ್ಥಾನ

ಆರ್​ಸಿಬಿ ಯಂಗ್ ಗನ್ ಜೇಕಬ್ ಬೆಥೆಲ್ ಏಕದಿನ ತಂಡದಲ್ಲಿ ಅವಕಾಶ ಪಡೆದಿದ್ದು, ಅವರು ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಇಎಸ್​ಪಿಎನ್ ಕ್ರಿಕ್​​ಇನ್ಫೊ ವರದಿ ಮಾಡಿದೆ. ಬೆನ್ ಡಕೆಟ್​ ಜೊತೆಗೆ ಅವರು ಇನ್ನಿಂಗ್ಸ್ ಆರಂಭಿಸಲಿದ್​ದಾರೆ. ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್​ 3ರಿಂದ 5ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ವಿಲ್ ಜಾಕ್ಸ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಲಿದ್ದಾರೆ. ಹೆಚ್ಚುವರಿಗೆ ಬ್ಯಾಟರ್ ಅಗತ್ಯಬಿದ್ದರೆ ಟಾಮ್ ಬ್ಯಾಂಟನ್ ಕೂಡ ಲಭ್ಯರಿರಲಿದ್ದಾರೆ.

ಕಳೆದ ತಿಂಗಳೇ ಭಾರತೀಯ ತಂಡ ಪ್ರಕಟ

ಬಿಸಿಸಿಐ ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತೀಯ ತಂಡವನ್ನು ಘೋಷಿಸಿತ್ತು. ಇದರಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಕೂಡ ಇದ್ದಾರೆ.. ಕೊಹ್ಲಿಯ ಆಯ್ಕೆಯು ಫಿಟ್ನೆಸ್‌ ಮೇಲೆ ಆಧಾರಿತವಾಗಿರುತ್ತದೆ. ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರೆ ಮಾತ್ರ ಸರಣಿಯಲ್ಲಿ ಭಾಗವಹಿಸುತ್ತಾರೆ. ಆದರೆ, ರವೀಂದ್ರ ಜಡೇಜಾ ಇನ್ನೂ ತಂಡಕ್ಕೆ ಮರಳಿಲ್ಲ. ತಂಡದಲ್ಲಿ ಆಲ್‌ರೌಂಡರ್‌ಗಳಾಗಿ ವಾಷಿಂಗ್ಟನ್ ಸುಂದರ್, ಅಕ್ಷರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಆಯ್ಕೆಗಳಿವೆ. ವೇಗದ ಬೌಲಿಂಗ್ ದಾಳಿಯನ್ನು ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್ ಮತ್ತು ಗುರ್ನೂರ್ ಬ್ರಾರ್ ಮುನ್ನಡೆಸಲಿದ್ದಾರೆ.

ಭಾರತ-ಇಂಗ್ಲೆಂಡ್ ಏಕದಿನ ವೇಳಾಪಟ್ಟಿ

ಸರಣಿಯ ಮೊದಲ ಪಂದ್ಯ ಜುಲೈ 14 ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗುತ್ತದೆ. ಎರಡನೇ ಏಕದಿನ ಪಂದ್ಯ ಜುಲೈ 16 ರಂದು ಸಂಜೆ 5:30ಕ್ಕೆ ಸೋಫಿಯಾ ಗಾರ್ಡನ್ಸ್‌ನಲ್ಲಿ ಆರಂಭವಾಗಲಿದ್ದು, ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಜುಲೈ 19ರಂದು ಮಧ್ಯಾಹ್ನ 3:30ಕ್ಕೆ ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ.

ಭಾರತ ವಿರುದ್ಧ ಇಂಗ್ಲೆಂಡ್‌ನ ಏಕದಿನ ತಂಡ:

ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್, ಸಾಕಿಬ್ ಮಹ್ಮೂದ್, ರೆಹಾನ್ ಅಹ್ಮದ್, ಜೇಮ್ಸ್ ಕೋಲ್ಸ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಸ್ಯಾಮ್ ಕರನ್, ಜೋ ರೂಟ್, ಗಸ್ ಅಟ್ಕಿನ್ಸನ್, ಲಿಯಾಮ್ ಡಾಸನ್, ಜೋಶ್ ಟಂಗ್, ಟಾಮ್ ಬ್ಯಾಂಟನ್, ಬೆನ್ ಡಕೆಟ್, ಜೇಕಬ್ ಬೆಥೆಲ್, ವಿಲ್ ಜ್ಯಾಕ್ಸ್.

ಭಾರತದ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ*, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್.

ಭಾರತ ವಿರುದ್ಧ ಇಂಗ್ಲೆಂಡ್ ಏಕದಿನ ಸರಣಿಯ ವೇಳಾಪಟ್ಟಿ

ಮೊದಲ ಏಕದಿನ: ಮಂಗಳವಾರ, ಜುಲೈ 14, ಎಡ್ಜ್‌ಬಾಸ್ಟನ್, ಬರ್ಮಿಂಗ್ಹ್ಯಾಮ್. 3.30 PM

ಎರಡನೇ ಏಕದಿನ: ಗುರುವಾರ, ಜುಲೈ 16, ಸೋಫಿಯಾ ಗಾರ್ಡನ್ಸ್, ಕಾರ್ಡಿಫ್. 5.30 PM

ಮೂರನೇ ಏಕದಿನ: ಭಾನುವಾರ, ಜುಲೈ 19, ಲಾರ್ಡ್ಸ್, ಲಂಡನ್, 5.30 PM



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed