Shiva Rajkumar: 64ನೇ ಜನ್ಮ ದಿನ ತಯಾರಿ ಜೋರು; ಅಭಿಮಾನಿಗಳಿಗೆ ಶಿವಣ್ಣನ ಸ್ಪೆಷಲ್ ಗಿಫ್ಟ್! | | ACTPnews

64 ನೇ ಜನ್ಮ ದಿನ ತಯಾರಿ ಜೋರು; ಅಭಿಮಾನಿಗಳಿಗೆ ಶಿವಣ್ಣನ ಸ್ಪೆಷಲ್ ಗಿಫ್ಟ್!


Last Updated:

ಶಿವರಾಜ್ ಕುಮಾರ್ ಜನ್ಮ ದಿನದ ತಯಾರಿ ಶುರು ಆಗಿದೆ. ಜುಲೈ-12 ರಂದು ಮಧ್ಯ ರಾತ್ರಿನೇ ಸೆಲೆಬ್ರೇಷನ್ ಶುರು ಆಗುತ್ತಿದೆ. ಈ ದಿನ ಶಿವಣ್ಣ ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನು ಕೊಡುತ್ತಿದ್ದಾರೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.

64 ನೇ ಜನ್ಮ ದಿನ ತಯಾರಿ ಜೋರು; ಅಭಿಮಾನಿಗಳಿಗೆ ಶಿವಣ್ಣನ ಸ್ಪೆಷಲ್ ಗಿಫ್ಟ್!
64 ನೇ ಜನ್ಮ ದಿನ ತಯಾರಿ ಜೋರು; ಅಭಿಮಾನಿಗಳಿಗೆ ಶಿವಣ್ಣನ ಸ್ಪೆಷಲ್ ಗಿಫ್ಟ್!

ಶಿವರಾಜ್ ಕುಮಾರ್ (Shiva Rajkumar) ಜನ್ಮ ದಿನ ಆಚರಣೆಗೆ ಇನ್ನು ಮೂರು ದಿನ ಬಾಕಿ ಇದೆ. ಆಗಲೇ ಶಿವಣ್ಣನ ಫ್ಯಾನ್ಸ್ (Shivanna Fans) ರೆಡಿ ಆಗಿದ್ದಾರೆ. ಜುಲೈ-11 ರಂದು ರಾತ್ರಿನೇ ಸಂಭ್ರಮಿಸಲು ಸಜ್ಜಾಗಿದ್ದಾರೆ. ರಾತ್ರಿ 12 ಗಂಟೆಗೇನೆ ಪಟಾಕಿ ಸಿಡಿಸಿ ಜನ್ಮ ದಿನ ಆಚರಿಸೋಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನ ಶಿವಣ್ಣನ (Shivanna) ಅಭಿಮಾನಿಗಳ ಸಂಘವೇ ಹೇಳಿಕೊಂಡಿದೆ. ಇದರೊಟ್ಟಿಗೆ ಶಿವಣ್ಣ ಈ ದಿನ ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಕೊಡ್ತಿದ್ದಾರೆ. ಅದೇನು ಅನ್ನೋ ಕುತೂಹಲವು ಹೆಚ್ಚಾಗಿದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಶಿವಣ್ಣನ ಸ್ಪೆಷಲ್ ಗಿಫ್ಟ್

ಶಿವರಾಜ್ ಕುಮಾರ್ ಜುಲೈ-12 ರಂದು 64 ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನ ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ.
shiva rajkumar birthday celebration latest updates

ಅಭಿಮಾನಿಗಳಿಗೆ ಶಿವಣ್ಣನ ಸ್ಪೆಷಲ್ ಗಿಫ್ಟ್

ಆದರೆ, ಅದೇನು ಅನ್ನೋದು ರಿವೀಲ್ ಆಗಿಲ್ಲ.ಅಭಿಮಾನಿಗಳು ಈ ವಿಷಯವನ್ನು ಹೇಳಿಕೊಂಡಿವೆ. ಜುಲೈ-12 ರಂದು ಮಧ್ಯ ರಾತ್ರಿ 12 ಗಂಟೆಗೆ ಜನ್ಮ ದಿನದ ಆಚರಣೆ ಇರುತ್ತದೆ. ಈ ಸಮಯದಲ್ಲಿ ಪಟಾಕಿ ಸದ್ದು ಬಲು ಜೋರು ನೋಡಿ.

ಸಿಡಿಮದ್ದು ಸಿಡಿಸಿ ಆಚರಣೆ

ಶಿವರಾಜ್ ಕುಮಾರ್ ಅವರ ಜನ್ಮ ದಿನವನ್ನ ಈ ಸಲ ಜೋರಾಗಿಯೇ ಆಚರಿಸಲಾಗುತ್ತಿದೆ. ಕಳೆದ ವರ್ಷ ಶಿವಣ್ಣ ರೆಸ್ಟ್ ಅಲ್ಲಿಯೇ ಇದ್ದರು. ಈ ವರ್ಷ ಎಲ್ಲರನ್ನು ಮೀಟ್ ಆಗಲು ತೀರ್ಮಾನ ಮಾಡಿದ್ದಾರೆ.

ಅನ್ನಸಂತರ್ಪಣೆ

ಶಿವಣ್ಣನ ಜನ್ಮ ದಿನಕ್ಕೆ ಅಭಿಮಾನಿಗಳಿಗಾಗಿಯೇ ಅನ್ನಸಂತರ್ಪಣೆ ಪ್ಲಾನ್ ಮಾಡಿದ್ದಾರೆ. ಬೆಂಗಳೂರಿನ ಶಿವಣ್ಣನ ಮನೆಯಲ್ಲಿಯೇ ಈ ಎಲ್ಲ ತಯಾರಿ ನಡೆದಿದೆ.

ನಾಗರವಾರದ ಶ್ರೀಮುತ್ತು ಮನೆಯಲ್ಲಿಯೇ ಶಿವಣ್ಣನ ಜನ್ಮ ದಿನಾಚರಣೆ ಸಂಭ್ರಮ ಪ್ಲಾನ್ ಆಗಿದೆ. ಜುಲೈ-12 ಈ ವರ್ಷ ಭಾನುವಾರ ಬಂದಿದೆ. ಹಾಗಾಗಿಯೇ ಫ್ಯಾನ್ಸ್ ಇನ್ನು ಜಾಸ್ತಿ ಸೇರುವ ಸಾಧ್ಯತೆನೂ ಇದೆ.

shiva rajkumar birthday celebration latest updates

ಶಿವಣ್ಣನ ಸ್ಪೆಷಲ್ ಗಿಫ್ಟ್
ಎ ಫಾರ್ ಆನಂದ್ ಸಿನಿಮಾ

ಎ ಫಾರ್ ಆನಂದ್ ಚಿತ್ರದ ಒಂದು ವಿಶೇಷ ಪ್ರೋಮೋ ರಿಲೀಸ್ ಆಗುತ್ತಿದೆ. ಶಿವಣ್ಣನ ಜನ್ಮ ದಿನಕ್ಕೇನೆ ಇದನ್ನ ರಿಲೀಸ್ ಮಾಡಲಾಗುತ್ತಿದೆ. ಘೋಸ್ಟ್ ಚಿತ್ರದ ಡೈರೆಕ್ಟರ್ ಶ್ರೀನಿ ಇದನ್ನ ಪ್ಲಾನ್ ಮಾಡಿದ್ದಾರೆ.

ಇತ್ತೀಚಿಗೆ ಈ ಬಗ್ಗೆ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲೂ ಬರೆದುಕೊಂಡಿದ್ದಾರೆ. ಇನ್ನು ಈ ವರ್ಷದ ಜನ್ಮ ದಿನಕ್ಕೆ ಮತ್ಯಾವ ಸಿನಿಮಾ ಅನೌನ್ಸ್ ಆಗ್ತವೋ ನೋಡ್ಬೇಕು. ಡೈರೆಕ್ಟರ್ ಪವನ್ ಒಡೆಯರ್ ಅವರ ಬೇಲ್ ಚಿತ್ರ ರೆಡಿ ಆಗುತ್ತಿದೆ. ಈ ಚಿತ್ರದ ಟೀಸರ್ ಹೆಚ್ಚು ಗಮನ ಸೆಳೆದಿದೆ.

666 ಆಪರೇಷನ್ ಡ್ರೀಮ್ ಥಿಯೇಟರ್

ಡೈರೆಕ್ಟರ್ ಹೇಮಂತ್ ರಾವ್ ಅವರ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಲ್ಲೂ ಶಿವಣ್ಣ ಅಭಿನಯಿಸಿದ್ದಾರೆ. ಇವರು ಈ ಚಿತ್ರದಲ್ಲಿ ಅತಿಥಿ ಪಾತ್ರಧಾರಿ ಏನೂ ಅಲ್ಲ. ಬದಲಾಗಿ ಬಾಂಡ್ ಪ್ರಕಾಶ್ ರೋಲ್ ಅನ್ನೇ ಮಾಡಿದ್ದಾರೆ.

ನಟ ಡಾಲಿ ಧನಂಜಯ್ ಇಲ್ಲಿ ಏಜೆಂಟ್ ಶಂಕರ್ ಹೆಸರಿನ ರೋಲ್ ಮಾಡಿದ್ದಾರೆ. ಪ್ರಿಯಾಂಕಾ ಮೋಹನ್, ಅದಿತಿ ಬಾಲನ್ ಕೂಡ ಈ ಚಿತ್ರದಲ್ಲಿದ್ದಾರೆ.

ಈ ಚಿತ್ರ ಅಲ್ಲದೆ ಶಿವಣ್ಣ ಇತ್ತೀಚಿಗೆ ಡ್ಯಾಡ್ ಸಿನಿಮಾ ಶೂಟಿಂಗ್ ಕೂಡ ಕಂಪ್ಲೀಟ್ ಮಾಡಿದ್ದಾರೆ. ಜೈಲರ್-2 ಅಲ್ಲದೆ ಇನ್ನೂ ಒಂದು ತಮಿಳು ಚಿತ್ರ ಕೂಡ ಮಾಡುತ್ತಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports