US Iran War: ಇರಾನ್​ ಜೊತೆಗಿನ ಅಮೆರಿಕಾ ಕದನ ವಿರಾಮ ಅಂತ್ಯ, ಟ್ರಂಪ್​ ಮಹತ್ವದ ಘೋಷಣೆ! ಯುದ್ಧ 2.0 ಪ್ರಾರಂಭ? / US-Iran Conflict: Truce Ends, Donald Trump’s Big Annou | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಟ್ರಂಪ್​ ಮಹತ್ವದ ಘೋಷಣೆ!


Last Updated:

ಅಮೆರಿಕ ಮತ್ತು ಇರಾನ್​ ಮಧ್ಯೆ ಸದ್ಯ ಕದನ ವಿರಾಮ ಘೋಷಣೆಯಾಗಿದೆ. ಆದರೆ ಈ ಮಧ್ಯೆ ಮತ್ತೆ ದಾಳಿಗಳು ಮುಂದುವರೆದಿದ್ದು, ಇರಾನ್ ಜೊತೆಗಿನ ಪ್ರಸ್ತುತ ನಡೆಯುತ್ತಿರುವ ಕದನ ವಿರಾಮವನ್ನು ಕೊನೆಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಟ್ರಂಪ್​ ಮಹತ್ವದ ಘೋಷಣೆ!
ಟ್ರಂಪ್​ ಮಹತ್ವದ ಘೋಷಣೆ!

ಅಮೆರಿಕಾ ಮತ್ತು ಇರಾನ್ ನಡುವಿನ (America Iran War) ಸಂಘರ್ಷ ಮತ್ತೊಮ್ಮೆ ಅಪಾಯಕಾರಿ ಹಂತಕ್ಕೆ ತಲುಪಿದೆ. ಈಗ ಇರುವ ಅಮೆರಿಕ ಮತ್ತು ಇರಾನ್​ ಮಧ್ಯದ ಕದನ ವಿರಾಮ (Ceasefire) ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ ಮುಗಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನ್ಯಾಟೋ ಶೃಂಗಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಒಪ್ಪಂದದ ನಿಯಮಗಳನ್ನು ಗೌರವಿಸಿಲ್ಲ ಎಂದು ಆರೋಪಿಸಿದ್ದಾರೆ.

‘ಇರಾನ್ ಜೊತೆಗಿನ ಒಪ್ಪಂದ ಈಗ ಮುಗಿದಿದೆ ಎಂದು ನಾನು ಭಾವಿಸುತ್ತೇನೆ. ಅವರೊಂದಿಗೆ ಮಾತುಕತೆ ನಡೆಸುವುದು ಕೇವಲ ಸಮಯ ವ್ಯರ್ಥ’ ಎಂದು ಟ್ರಂಪ್ ಹೇಳಿದ್ದಾರೆ. ಈ ಹೇಳಿಕೆಯಿಂದ ಸದ್ಯ ಮತ್ತೆ ವಿಶ್ವದಲ್ಲಿ ಆತಂಕ ಹೆಚ್ಚಾಗಿದೆ.

ಇರಾನ್​ ಜೊತೆಗಿನ ಅಮೆರಿಕಾದ ಕದನ ವಿರಾಮ ಅಂತ್ಯ!

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇರಾನ್ ಜೊತೆಗಿನ ಅಮೆರಿಕದ ಕದನ ವಿರಾಮ ಅಂತ್ಯ ಎಂದಿದ್ದು, ಇರಾನ್ ನಾಯಕರನ್ನು ಸುಳ್ಳುಗಾರರು ಮತ್ತು ಹುಚ್ಚರು ಎಂದು ಕರೆದಿದ್ದಾರೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದರೂ ಅದನ್ನು ಗೌರವಿಸಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಕದನ ವಿರಾಮ ಅಂತ್ಯ ಮಾಡಿ ಮತ್ತೆ ದಾಳಿಗಳು ಮುಮದುವರೆಯುವ ಸಾಧ್ಯತೆ ಇದೆ. ಇದರಿಂದ ಮತ್ತೆ ಜಗತ್ತಿನ ಇತರೆ ದೇಶಗಳಿಗೆ ಆತಂಕ ಹೆಚ್ಚಾಗಿದೆ.

ಗಲ್ಫ್ ಪ್ರದೇಶದಲ್ಲಿ ಉದ್ವಿಗ್ನತೆ!

ಟ್ರಂಪ್​ ಈ ಹೇಳಿಕೆ ಗಲ್ಫ್ ಪ್ರದೇಶದಲ್ಲಿ ಈಗಾಗಲೇ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇರಾನ್ ತನ್ನ ಹಾರ್ಮುಜ್​​ ಪ್ರಾಂತ್ಯ ಮತ್ತು ಮಹ್ಶಹರ್ ಬಂದರಿನ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ 85 ಅಮೆರಿಕದ ಸೈನಿಕ ನೆಲೆಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿಕೊಂಡಿದೆ. ಇರಾನಿನ ಈ ಬೆದರಿಕೆಯ ನಂತರ ಬಹ್ರೇನ್ ಮತ್ತು ಕುವೈತ್‌ನಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್‌ಗಳು ಮೊಳಗಿವೆ. ಎರಡೂ ದೇಶಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ. ಗಲ್ಫ್ ಪ್ರದೇಶವನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ.

ತಾತ್ಕಾಲಿಕ ಒಪ್ಪಂದ ಮುಗಿದಿದ್ಯಾ?

ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ಪರಮಾಣು ಕಾರ್ಯಕ್ರಮ ಸೇರಿದಂತಹ ವಿವಾದಗಳ ಬಗ್ಗೆ ಮಾತುಕತೆ ನಡೆಸಲು ತಾತ್ಕಾಲಿಕ ಒಪ್ಪಂದಕ್ಕೆ ಬಂದಿದ್ದವು. ಆದರೆ ಟ್ರಂಪ್ ಅವರ ಇತ್ತೀಚಿನ ಹೇಳಿಕೆಯು ಈ ಒಪ್ಪಂದವನ್ನು ಅಮೆರಿಕ ಕೊನೆಗೊಳಿಸಿದೆ ಎಂದು ಸ್ಪಷ್ಟಪಡಿಸುತ್ತದೆ. ಟ್ರಂಪ್ ‘ನಮಗೆ ಒಂದು ಒಪ್ಪಂದವಿತ್ತು. ಎಲ್ಲರೂ ಅದನ್ನು ಒಪ್ಪಿಕೊಂಡರು. ಆದರೆ ಇರಾನ್ ಅದನ್ನು ಉಲ್ಲಂಘಿಸಿದೆ’ ಎಂದು ಆರೋಪಿಸಿದ್ದಾರೆ.

ವಿಶ್ಲೇಷಕರ ಆತಂಕ

ವಿಶ್ಲೇಷಕರು ಟ್ರಂಪ್ ಘೋಷಣೆಯು ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು ಎಂದು ಹೇಳುತ್ತಿದ್ದಾರೆ. ಈಗಾಗಲೇ ಕ್ಷಿಪಣಿ ದಾಳಿಗಳು, ಡ್ರೋನ್ ದಾಳಿಗಳು ಮತ್ತು ಕಡಲ ಭದ್ರತೆಗೆ ಸಂಬಂಧಿಸಿದ ಉದ್ವಿಗ್ನತೆ ಹೆಚ್ಚಾಗಿದೆ. ಎರಡೂ ದೇಶಗಳ ನಡುವೆ ಮಿಲಿಟರಿ ಕ್ರಮಗಳು ಹೆಚ್ಚಾದರೆ ಅದು ಜಾಗತಿಕ ಇಂಧನ ಪೂರೈಕೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರಕ್ಕೆ ದೊಡ್ಡ ಹೊಡೆತ ನೀಡಬಹುದು. ಗಲ್ಫ್ ಪ್ರದೇಶವು ವಿಶ್ವದ ಪ್ರಮುಖ ತೈಲ ಪೂರೈಕೆ ಕೇಂದ್ರವಾಗಿದೆ. ಇಲ್ಲಿ ಸಂಘರ್ಷ ಹೆಚ್ಚಾದರೆ ತೈಲ ಬೆಲೆಗಳು ಏರಿಕೆಯಾಗಿ ವಿಶ್ವ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು.

ಕದನ ವಿರಾಮ ಅಂತ್ಯ, ಮುಂದೆ ಏನು?

ಟ್ರಂಪ್ ಈ ಘೋಷಣೆಯು ಅಮೆರಿಕ-ಇರಾನ್ ನಡುವಿನ ಯುದ್ಧ ಮತ್ತೆ ಹೆಚ್ಚಾಗುವ ಲಕ್ಷಣಗಳನ್ನು ಗೋಚರಿಸುತ್ತಿದೆ. ಎರಡೂ ದೇಶಗಳ ನಡುವೆ ಮಿಲಿಟರಿ ಮುಖಾಮುಖಿ ಹೆಚ್ಚಾದರೆ ಅದು ದೊಡ್ಡ ಯುದ್ಧಕ್ಕೆ ಕಾರಣವಾಗಬಹುದು ಎಂಬ ಆತಂಕ ಹೆಚ್ಚಿದೆ. ಪ್ರಸ್ತುತ ಜಗತ್ತು ಎರಡೂ ದೇಶಗಳ ನಡುವಿನ ಮುಂದಿನ ಕ್ರಮಗಳತ್ತ ಕಣ್ಣು ಹಾಕಿದೆ. ರಾಜತಾಂತ್ರಿಕ ಪ್ರಯತ್ನಗಳು ಮುಂದುವರಿಯುತ್ತವೆಯೇ ಅಥವಾ ಪಶ್ಚಿಮ ಏಷ್ಯಾ ಮತ್ತೊಮ್ಮೆ ಯುದ್ಧದ ಅಂಚಿಗೆ ತಲುಪುತ್ತದೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಈ ಸಂಘರ್ಷದ ಪರಿಣಾಮಗಳು ಭಾರತ ಸೇರಿದಂತಹ ಅನೇಕ ದೇಶಗಳ ಆರ್ಥಿಕತೆ ಮತ್ತು ಇಂಧನ ಬೆಲೆಗಳ ಮೇಲೂ ಪ್ರಭಾವ ಬೀರುವ ಸಾಧ್ಯತೆ ದಟ್ಟವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed