Last Updated:
ಸಿಟಿ ಲೈಟ್ಸ್ ಚಿತ್ರ ಪಕ್ಕಾ ಹಿಟ್ ಆಗುತ್ತಿದೆ. ಸಿಟಿ ಲೈಟ್ಸ್ ಚಿತ್ರವನ್ನ ಜನ ಮೆಚ್ಚುತ್ತಾರೆ. ಲಾಂಗ್ ಅಂದ್ರೆ ಶಿವಣ್ಣ ಅಂತಾರೆ. ಆದರೆ, ಇನ್ಮುಂದೆ ವಿನಯ್ ಹೆಸರೂ ಹೇಳ್ತಾರೆ. ಆ ರೀತಿನೆ ವಿನಯ್ ಕೆಲಸ ಮಾಡಿದ್ದಾರೆ ಅಂತ ಶಿವಣ್ಣ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಲಾಂಗ್ ಅಂದ್ರೆ ಶಿವಣ್ಣ (Shivanna) ಅನ್ನೋದು ಗೊತ್ತೇ ಇದೆ. ಯಾರೇ ಇದನ್ನ ಹಿಡಿದರು ಹೋಲಿಕೆ ಅಲ್ಲಿಗೆ ಹೋಗುತ್ತದೆ. ಆದರೆ, ವಿನಯ್ ರಾಜ್ಕುಮಾರ್ ಇದೀಗ ಸಿಟಿ ಲೈಟ್ಸ್ ಚಿತ್ರದಲ್ಲಿ (City Lights) ಲಾಂಗ್ ಹಿಡಿದಿದ್ದಾರೆ. ಅಷ್ಟೆ ತೀವ್ರವಾಗಿಯೇ ಗುರಾಯಿಸಿದ್ದಾರೆ. ಈ ಎಲ್ಲವನ್ನು ನೋಡಿರೋ ಶಿವಣ್ಣ ಒಂದು ಮಾತು ಹೇಳಿದ್ದಾರೆ. “ಲಾಂಗ್ ಅಂದ್ರೆ ಇನ್ಮುಂದೆ ಶಿವಣ್ಣ (Shivanna) ಜೊತೆ ವಿನಯ್ (Vinay) ಹೆಸರು ಹೇಳ್ಬೇಕು” ಆ ರೀತಿನೇ ವಿನಯ್ ಇಲ್ಲಿ ಕೆಲಸ ಮಾಡಿದ್ದಾರೆ ಅನ್ನೋದನ್ನ ಶಿವಣ್ಣ ಹೇಳಿದ್ದಾರೆ. ಇವರ ಮಾತುಗಳ ಒಟ್ಟು ಚಿತ್ರಣ ಇಲ್ಲಿದೆ ಓದಿ.














