Last Updated:
ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಜೋಡಿಯು ಮೊದಲ ವಿಕೆಟ್ಗೆ ಕೇವಲ 12.5 ಓವರ್ಗಳಲ್ಲಿ 129 ರನ್ಗಳ ಬೃಹತ್ ಹಾಗೂ ಸ್ಮರಣೀಯ ಆರಂಭಿಕ ಜೊತೆಯಾಟವನ್ನು ನೀಡುವ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಶೆಫಾಲಿ ವರ್ಮಾ 39 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಿತ 68 ರನ್ರನ್ಗಳಿಸಿ ಔಟ್ ಆದರು.
ಭಾರತದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (Shafali Verma) ಭಾನುವಾರ ನಡೆದ ಶ್ರೀಲಂಕಾ ವಿರುದ್ಧದ 2026ರ ಫೈನಲ್ ಪಂದ್ಯದಲ್ಲಿ ಮಹಿಳಾ ಏಷ್ಯಾ ಕಪ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಅವರು ಕೇವಲ 24 ಎಸೆತಗಳಲ್ಲಿ ಈ ಮೈಲಿಗಲ್ಲನ್ನು ತಲುಪಿ ವಿಶೇಷ ಮೈಲುಗಲ್ಲು ತಲುಪಿದರು. ಈ ಮೂಲಕ 2022ರಲ್ಲಿ ಇದೇ ಶ್ರೀಲಂಕಾ ವಿರುದ್ಧ 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದ ತಮ್ಮದೇ ತಂಡದ ಆರಂಭಿಕ ಜೊತೆಗಾರ್ತಿ ಸ್ಮೃತಿ ಮಂಧಾನ ಅವರ ದಾಖಲೆಯನ್ನು ಶಫಾಲಿ ಹಿಂದಿಕ್ಕಿದ್ದಾರೆ. ಇದು ಪ್ರಸಕ್ತ ಟೂರ್ನಿಯಲ್ಲಿ ಶಫಾಲಿ ವರ್ಮಾ ಅವರ ಮೂರನೇ ಅರ್ಧಶತಕವಾಗಿದ್ದು, ಮಹಿಳಾ ಟಿ20 ಏಷ್ಯಾ ಕಪ್ ಆವೃತ್ತಿಯೊಂದರಲ್ಲಿ ಜಂಟಿ-ಅತಿ ಹೆಚ್ಚು (Joint-most) ಅರ್ಧಶತಕ ಬಾರಿಸಿದ ಶ್ರೀಲಂಕಾದ ಚಾಮರಿ ಅಟಪಟ್ಟು ಅವರ ದಾಖಲೆಯನ್ನು ಸಮಗಟ್ಟಿದ್ದಾರೆ.














