Shiva Rajkumar: ಜುಲೈ 12ಕ್ಕೆ ನನ್ನ ಜನ್ಮ ದಿನ, ಬನ್ನಿ ಸಿಗೋಣ! ಒಂದು ಮನವಿ ಇದೆ ಎಂದಿದ್ಯಾಕೆ ಶಿವಣ್ಣ? | | ACTPnews

Shiva Rajkumar Special Request Video on his Birthday to Fans


ನನ್ನ ಜನ್ಮ ದಿನಕ್ಕೆ ಬನ್ನಿ…

ಜುಲೈ-12 ರಂದು ನನ್ನ ಜನ್ಮ ದಿನ ಇದೆ. ಇದು ಎಲ್ಲಗೂ ಗೊತ್ತೇ ಇದೆ. ಈ ದಿನ ಎಲ್ಲರೂ ಬನ್ನಿ, ಮಜಾ ಮಾಡೋಣ. ಖುಷಿ ಪಡೋಣ.

64 ನೇ ಜನ್ಮ ದಿನ ಆಚರಣೆ

(ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್)

ಆದರೆ, ಒಂದು ಮನವಿ ಇದೆ. ಯಾರೂ ಕೇಕ್ ತರಬೇಡಿ, ಉಡುಗೊರೆನೂ ತರಬೇಡಿ. ಆ ದಿನ ನಾನೇ ಒಂದು ಕೇಕ್ ಅನ್ನ ನಿಮ್ಮ ಪರವಾಗಿ ಕಟ್ ಮಾಡುತ್ತೇನೆ ಅಂತಲೇ ಶಿವಣ್ಣ ಹೇಳಿಕೊಂಡಿದ್ದಾರೆ.

ಮನವಿ ಮಾಡಿರೊ ವಿಡಿಯೋ

ಶಿವಣ್ಣ ಮನವಿ ಮಾಡಿರೋ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ. ಮೀಡಿಯಾಗಳಿಗೂ ಹಂಚಿಕೊಂಡಿದ್ದಾರೆ.

ಹಾಗಾಗಿಯೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿರಲಿಲ್ಲ. ಆದರೆ, ಈ ಸಲ ಅಭಿಮಾನಿಗಳನ್ನ ಮೀಟ್ ಆಗಲು ತೀರ್ಮಾನಿಸಿದ್ದಾರೆ ಅಂತಲೇ ಹೇಳಬಹುದು.

64 ನೇ ಜನ್ಮ ದಿನ ಆಚರಣೆ

ಶಿವರಾಜ್ ಕುಮಾರ್ ಅವರು ಈ ವರ್ಷ 64 ನೇ ಜನ್ಮ ದಿನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಯಾರಿನೂ ಶುರು ಆಗಿದೆ. ಅಭಿಮಾನಿಗಳು ರೆಡಿ ಆಗುತ್ತಿದ್ದಾರೆ.

Shiva Rajkumar Special Request Video on his Birthday to Fans

ಜುಲೈ-12 ರಂದು ಪ್ರೋಮೋ

(ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್)

ಈ ವರ್ಷ ಜನ್ಮ ದಿನಕ್ಕೆ ಅದೆಷ್ಟು ಚಿತ್ರಗಳು ಅನೌನ್ಸ್ ಆಗುತ್ತಿವೆಯೋ ಏನೋ? ಆದರೆ, ಈಗಾಗಲೇ ಒಪ್ಪಿರೋ ಚಿತ್ರಗಳಿಂದ ವಿಶೇಷ ವಿಶ್ ಅಂತೂ ಇದ್ದೇ ಇರುತ್ತದೆ ನೋಡಿ.

ಜುಲೈ-12 ರಂದು ಪ್ರೋಮೋ

ಶಿವಣ್ಣನ ಜನ್ಮದಿನದ ಹಿನ್ನೆಲೆಯಲ್ಲಿ ಘೋಸ್ಟ್ ಡೈರೆಕ್ಟರ್ ಶ್ರೀನಿ ಒಂದು ಪ್ಲಾನ್ ಮಾಡಿದ್ದಾರೆ. ಎ ಫಾರ್ ಆನಂದ್ ಚಿತ್ರದೊಂದು ವಿಶೇಷ ಪ್ರೋಮೋ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.

ಶಿವಣ್ಣನ ಇತರ ಸಿನಿಮಾಗಳು

ಶಿವರಾಜ್ ಕುಮಾರ್ ಅವರು ಬೇಲ್ ಚಿತ್ರದಲ್ಲಿ ಪೊಲೀಸ್ ಪಾತ್ರವನ್ನೆ ಮಾಡಿದ್ದಾರೆ. ಆದರೆ, ಈ ವಿಷಯವನ್ನ ಡೈರೆಕ್ಟರ್ ಪವನ್ ಒಡೆಯರ್ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೂ ಸುದ್ದಿ ಹಾಗೇನೆ ಇದೆ. ಈ ಚಿತ್ರದ ಮೊದಲ ಟೀಸರ್ ಈಗಾಗಲೇ ಜನರಲ್ಲಿ ಕುತೂಹಲ ಮೂಡಿಸಿದೆ.

666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಲ್ಲೂ ಶಿವಣ್ಣ ಇದ್ದಾರೆ. ಬಾಂಡ್ ಪ್ರಕಾಶ್ ಪಾತ್ರವನ್ನ ಮಾಡಿದ್ದಾರೆ. ಇದರಲ್ಲಿ ಡಾಲಿ ಧನಂಜಯ್ ಕೂಡ ಇದ್ದಾರೆ. ಇವರು ಈ ಸಿನಿಮಾದಲ್ಲಿ ಏಜೆಂಟ್ ಶಂಕರ್ ಅನ್ನುವ ರೋಲ್ ಮಾಡಿದ್ದಾರೆ.

ಹೇಮಂತ್ ರಾವ್ ಈ ಸಿನಿಮಾವನ್ನ ಡೈರೆಕ್ಷನ್ ಮಾಡಿದ್ದಾರೆ. ಡ್ಯಾಡ್ ಚಿತ್ರದ ಶೂಟಿಂಗ್ ಕಂಪ್ಲಿಟ್ ಮಾಡಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರವನ್ನು ಇವರು ಮಾಡುತ್ತಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed