ಜುಲೈ-12 ರಂದು ನನ್ನ ಜನ್ಮ ದಿನ ಇದೆ. ಇದು ಎಲ್ಲಗೂ ಗೊತ್ತೇ ಇದೆ. ಈ ದಿನ ಎಲ್ಲರೂ ಬನ್ನಿ, ಮಜಾ ಮಾಡೋಣ. ಖುಷಿ ಪಡೋಣ.
64 ನೇ ಜನ್ಮ ದಿನ ಆಚರಣೆ
(ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್)
ಆದರೆ, ಒಂದು ಮನವಿ ಇದೆ. ಯಾರೂ ಕೇಕ್ ತರಬೇಡಿ, ಉಡುಗೊರೆನೂ ತರಬೇಡಿ. ಆ ದಿನ ನಾನೇ ಒಂದು ಕೇಕ್ ಅನ್ನ ನಿಮ್ಮ ಪರವಾಗಿ ಕಟ್ ಮಾಡುತ್ತೇನೆ ಅಂತಲೇ ಶಿವಣ್ಣ ಹೇಳಿಕೊಂಡಿದ್ದಾರೆ.
ಹಾಗಾಗಿಯೇ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿರಲಿಲ್ಲ. ಆದರೆ, ಈ ಸಲ ಅಭಿಮಾನಿಗಳನ್ನ ಮೀಟ್ ಆಗಲು ತೀರ್ಮಾನಿಸಿದ್ದಾರೆ ಅಂತಲೇ ಹೇಳಬಹುದು.
ಶಿವರಾಜ್ ಕುಮಾರ್ ಅವರು ಈ ವರ್ಷ 64 ನೇ ಜನ್ಮ ದಿನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಯಾರಿನೂ ಶುರು ಆಗಿದೆ. ಅಭಿಮಾನಿಗಳು ರೆಡಿ ಆಗುತ್ತಿದ್ದಾರೆ.
ಜುಲೈ-12 ರಂದು ಪ್ರೋಮೋ
(ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್)
ಈ ವರ್ಷ ಜನ್ಮ ದಿನಕ್ಕೆ ಅದೆಷ್ಟು ಚಿತ್ರಗಳು ಅನೌನ್ಸ್ ಆಗುತ್ತಿವೆಯೋ ಏನೋ? ಆದರೆ, ಈಗಾಗಲೇ ಒಪ್ಪಿರೋ ಚಿತ್ರಗಳಿಂದ ವಿಶೇಷ ವಿಶ್ ಅಂತೂ ಇದ್ದೇ ಇರುತ್ತದೆ ನೋಡಿ.
ಶಿವಣ್ಣನ ಜನ್ಮದಿನದ ಹಿನ್ನೆಲೆಯಲ್ಲಿ ಘೋಸ್ಟ್ ಡೈರೆಕ್ಟರ್ ಶ್ರೀನಿ ಒಂದು ಪ್ಲಾನ್ ಮಾಡಿದ್ದಾರೆ. ಎ ಫಾರ್ ಆನಂದ್ ಚಿತ್ರದೊಂದು ವಿಶೇಷ ಪ್ರೋಮೋ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.
ಶಿವರಾಜ್ ಕುಮಾರ್ ಅವರು ಬೇಲ್ ಚಿತ್ರದಲ್ಲಿ ಪೊಲೀಸ್ ಪಾತ್ರವನ್ನೆ ಮಾಡಿದ್ದಾರೆ. ಆದರೆ, ಈ ವಿಷಯವನ್ನ ಡೈರೆಕ್ಟರ್ ಪವನ್ ಒಡೆಯರ್ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೂ ಸುದ್ದಿ ಹಾಗೇನೆ ಇದೆ. ಈ ಚಿತ್ರದ ಮೊದಲ ಟೀಸರ್ ಈಗಾಗಲೇ ಜನರಲ್ಲಿ ಕುತೂಹಲ ಮೂಡಿಸಿದೆ.
666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದಲ್ಲೂ ಶಿವಣ್ಣ ಇದ್ದಾರೆ. ಬಾಂಡ್ ಪ್ರಕಾಶ್ ಪಾತ್ರವನ್ನ ಮಾಡಿದ್ದಾರೆ. ಇದರಲ್ಲಿ ಡಾಲಿ ಧನಂಜಯ್ ಕೂಡ ಇದ್ದಾರೆ. ಇವರು ಈ ಸಿನಿಮಾದಲ್ಲಿ ಏಜೆಂಟ್ ಶಂಕರ್ ಅನ್ನುವ ರೋಲ್ ಮಾಡಿದ್ದಾರೆ.
ಹೇಮಂತ್ ರಾವ್ ಈ ಸಿನಿಮಾವನ್ನ ಡೈರೆಕ್ಷನ್ ಮಾಡಿದ್ದಾರೆ. ಡ್ಯಾಡ್ ಚಿತ್ರದ ಶೂಟಿಂಗ್ ಕಂಪ್ಲಿಟ್ ಮಾಡಿದ್ದಾರೆ. ತೆಲುಗು ಮತ್ತು ತಮಿಳು ಚಿತ್ರವನ್ನು ಇವರು ಮಾಡುತ್ತಿದ್ದಾರೆ ಅಂತಲೂ ಹೇಳಬಹುದು.












