Shiva Rajkumar: ಎ ಫಾರ್ ಆನಂದ್ ಡೈರೆಕ್ಟರ್‌ಗೆ ಬಿ ಫಾರ್ ಬರ್ತ್ ಡೇ ವಿಶ್ ಮಾಡಿದ ಶಿವಣ್ಣ! | | ACTPnews

ಎ ಫಾರ್ ಆನಂದ್ ಡೈರೆಕ್ಟರ್‌ಗೆ ಬಿ ಫಾರ್ ಬರ್ತ್ ಡೇ ವಿಶ್ ಮಾಡಿದ ಶಿವಣ್ಣ!


Last Updated:

ಘೋಸ್ಟ್ ಚಿತ್ರದ ಡೈರೆಕ್ಟರ್ ಶ್ರೀನಿ ಜನ್ಮ ದಿನಕ್ಕೆ ಶಿವಣ್ಣನ ಗೀತಾ ಪಿಕ್ಚರ್ಸ್ ಸ್ಪೆಷಲ್ ಆಗಿಯೇ ವಿಶ್ ಮಾಡಿದೆ. ನಮ್ಮ ಕ್ಲಾಸ್ ಲೀಡರ್ ಜನ್ಮ ದಿನ ಇವತ್ತು ಅಂತಲೂ ಹೇಳಿದೆ. ಇನ್ನು ವಿಶೇಷವಾಗಿಯೇ ವಿಶ್ ಮಾಡಲಾಗಿದೆ. ಅದರ ವಿವರ ಇಲ್ಲಿದೆ ಓದಿ.

ಎ ಫಾರ್ ಆನಂದ್ ಡೈರೆಕ್ಟರ್‌ಗೆ ಬಿ ಫಾರ್ ಬರ್ತ್ ಡೇ ವಿಶ್ ಮಾಡಿದ ಶಿವಣ್ಣ!
ಎ ಫಾರ್ ಆನಂದ್ ಡೈರೆಕ್ಟರ್‌ಗೆ ಬಿ ಫಾರ್ ಬರ್ತ್ ಡೇ ವಿಶ್ ಮಾಡಿದ ಶಿವಣ್ಣ!

ಘೋಸ್ಟ್ ಡೈರಕ್ಟರ್ (Ghost Director) ಎಂ.ಜಿ.ಶ್ರೀನಿವಾಸ್ (M.G. Srinivas) ಜನ್ಮ ದಿನದ (Birthday) ಸಂಭ್ರಮದಲಿದ್ದಾರೆ. ಇವರಿಗೆ ಶಿವರಾಜ್ ಕುಮಾರ್ (Shiva Rajkumar) ತಮ್ಮ ಬ್ಯಾನ್ ಮೂಲಕವೇ ವಿಶೇಷವಾಗಿಯೆ ವಿಶ್ ಮಾಡಿದ್ದಾರೆ. ಈ ವಿಶ್ ಅಷ್ಟೆ ವಿಶೇಷವಾಗಿದೆ. ಎ ಫಾರ್ ಆನಂದ್ , ಬಿ ಫಾರ್ ಬರ್ತ್ ಡೇ, ಸಿ ಫಾರ್ ಕೇಕ್ ಕಟ್ಟಿಂಗ್, ಡಿ ಫಾರ್ ಡಿನ್ನರ್ ನಿಮ್ಮ ಕಡೆಯಿಂದ ಅಂತಲೇ ಬರೆದು ವಿಶ್ ಮಾಡಿದ್ದಾರೆ. ಇನ್ನು ಸುಮಾರು ಇಂಟ್ರಸ್ಟಿಂಗ್ ವಿಷಯ ಇದೆ. ಅದರ ಸುತ್ತ ಇಲ್ಲೊಂದು ಸ್ಟೋರಿ ಇದೆ ಓದಿ.

ಎ ಫಾರ್ ಆನಂದ್

ಎ ಫಾರ್ ಆನಂದ್ ಚಿತ್ರದ ಡೈರೆಕ್ಟರ್ ಶ್ರೀನಿ ಜನ್ಮ ದಿನದ ಸಂಭ್ರಮದಲ್ಲಿಯೇ ಇದ್ದಾರೆ. ಜುಲೈ-9 ರಂದು ಇವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಈ ಸಲವೂ ಬರ್ತ್ ಡೇ ಸಂಭ್ರಮದಲ್ಲಿಯೇ ಇದ್ದಾರೆ.

Ghost Movie Director Srini Birthday Special Wish from Shiva Rajkumar Geetha Pictures

ಜುಲೈ-12 ಸ್ಪೆಷಲ್ ಪ್ರೋಮೋ

(ಚಿತ್ರ ಕೃಪೆ: ಶ್ರೀನಿ ಇನ್‌ಸ್ಟಾಗ್ರಾಮ್)

ಈ ಒಂದು ಜನ್ಮ ದಿನಕ್ಕೆ ಗೀತಾ ಪಿಕ್ಚರ್ಸ್ ವಿಶ್ ಮಾಡಿದೆ. ಶಿವರಾಜ್ ಕುಮಾರ್ ಅವರ ಈ ಬ್ಯಾನರ್ ಅಲ್ಲಿಯೇ ಶ್ರೀನಿ ಹೊಸದೊಂದು ಚಿತ್ರ ಮಾಡುತ್ತಿದ್ದಾರೆ. ಎ ಫಾರ್ ಆನಂದ್ ಅನ್ನೋದು ಈ ಚಿತ್ರದ ಟೈಟಲ್ ಆಗಿದೆ. ಈ ಚಿತ್ರದ ಅನೌನ್ಸ್‌ಮೆಂಟ್ ಕೂಡ ಆಗಿದೆ.
ಸ್ಪೆಷಲ್ ವಿಶ್

ಡೈರೆಕ್ಟರ್ ಶ್ರೀನಿ ಅವರ ಜನ್ಮ ದಿನದ ಹಿನ್ನೆಲೆಯಲ್ಲಯೇ ಈಗೊಂದು ಪೋಸ್ಟರ್ ಹೊರ ಬಂದಿದೆ. ಎ ಫಾರ್ ಆನಂದ್ ಚಿತ್ರದ ಈ ಪೋಸ್ಟರ್ ಅಲ್ಲಿ ಶ್ರೀನಿಯನ್ನ ಕ್ಲಾಸ್ ಲೀಡರ್ ಅಂತಲೂ ಕರೆದಿದ್ದಾರೆ.

ಇದರೊಟ್ಟಿಗೆ ಚೆಂದದ ಎರಡು ಲೈನ್ ಕೂಡ ಬರೆದಿದ್ದಾರೆ. ಅದು ಈ ರೀತಿ ಇದೆ ಓದಿ; A for ಆನಂದ್‌ದು B for ಬರ್ತ್‌ಡೇ, C for ಕೇಕ್‌ ಕಟ್‌ ನಮ್ ಕಡೆಯಿಂದ, D for ಡಿನ್ನರ್‌ ನಿಮ್ ಕಡೆಯಿಂದ! ಹುಟ್ಟು ಹಬ್ಬದ ಶುಭಾಶಯಗಳು ಕ್ಲಾಸ್‌ ಲೀಡರ್‌! ಎಂ.ಜಿ.ಶ್ರೀನಿವಾಸ್ ಅಂತಲೇ ಬರೆಯಲಾಗಿದೆ.

ಘೋಸ್ಟ್ ಆದ್ಮೇಲೆ..

ಡೈರೆಕ್ಟರ್ ಶ್ರೀನಿ ಈ ಹಿಂದೆ ಶಿವಣ್ಣನ ಜೊತೆಗೆ ಘೋಸ್ಟ್ ಚಿತ್ರದ ಮಾಡಿದ್ದರು. ಈ ಚಿತ್ರ ಒಳ್ಳೆ ಹೆಸರು ತಂದು ಕೊಟ್ಟಿದೆ. ಚಿತ್ರ ನಿರ್ಮಾಣ ಸಂಸ್ಥೆಗೂ ಒಳ್ಳೆ ಕಲೆಕ್ಷನ್ ಮಾಡಿಕೊಟ್ಟಿದೆ.

Ghost Movie Director Srini Birthday Special Wish from Shiva Rajkumar Geetha Pictures

ಸ್ಪೆಷಲ್ ವಿಶ್

(ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್)

ಈ ಚಿತ್ರದ ಬಳಿಕ ಡೈರೆಕ್ಟರ್ ಶ್ರೀನಿ ಮತ್ತೊಂದು ಚಿತ್ರ ಅನೌನ್ಸ್ ಮಾಡಿದರು. ಈ ಚಿತ್ರಕ್ಕೆ ಎ ಫಾರ್ ಆನಂದ್ ಅಂತಲೇ ಹೆಸರಿಟ್ಟಿರು. ಈ ಸಿನಿಮಾವನ್ನ ಶಿವಣ್ಣ ಅವರೇ ತಮ್ಮ ಗೀತಾ ಪಿಕ್ಚರ್ಸ್ ಮೂಲಕವೇ ಪ್ರೊಡ್ಯೂಸ್ ಮಾಡುತ್ತಿದ್ದಾರೆ. ಈ ಚಿತ್ರದ ಕೆಲಸವು ನಡೀತಾ ಇದೆ.

ಜುಲೈ-12 ಸ್ಪೆಷಲ್ ಪ್ರೋಮೋ

ಜುಲೈ-12 ರಂದು ಶಿವಣ್ಣನ 64 ನೇ ಜನ್ಮ ದಿನ ಇದೆ. ಈ ಹಿನ್ನೆಲೆಯಲ್ಲಿಯೇ ಡೈರೆಕ್ಟರ್ ಶ್ರೀನಿ ಒಂದು ಪ್ಲಾನ್ ಮಾಡಿದ್ದಾರೆ. ಶಿವಣ್ಣನ ಜನ್ಮ ದಿನದಂದು ಒಂದು ಟೀಸರ್ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.

ಮೊನ್ನೆ ಈ ವಿಷಯವನ್ನ ಹೇಳಿಕೊಂಡಿದ್ದಾರೆ. ಶಿವಣ್ಣನ ಜೊತೆಗಿನ ತಮ್ಮ ಒಂದೆರಡು ಫೋಟೋ ಶೇರ್ ಮಾಡಿದ್ದಾರೆ. ಹಾಗೆ ಜುಲೈ-12 ರಂದು ಶಿವಣ್ಣನ ಜನ್ಮ ದಿನಕ್ಕೆ ಎ ಫಾರ್ ಆನಂದ್ ಚಿತ್ರದ ಒಂದು ಪ್ರೋಮೋ ರಿಲೀಸ್ ಮಾಡ್ತೀವಿ ಅಂತ ಹೇಳಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed