Last Updated:
ಶಿವರಾಜ್ ಕುಮಾರ್ ತಮಿಳು ಚಿತ್ರ ಒಪ್ಪಿದ್ದಾರೆ. ಇದರಲ್ಲಿ ಅಪ್ಪನ ರೋಲ್ ಮಾಡುತ್ತಿದ್ದಾರೆ. ಆದರೆ, ಈ ಸೀರಿಯಸ್ ಪಾತ್ರದ ಶೂಟಿಂಗ್ ಸ್ಪಾಟ್‌ನ ವಿಡಿಯೋ ಹೊರ ಬಂದಿದೆ. ಇದು ಅಷ್ಟೆ ಮಜವಾಗಿಯೇ ಇದೆ. ಶಿವಣ್ಣ ಇಲ್ಲಿ ಹೇಗೆಲ್ಲೆ ಖುಷಿಪಟ್ಟಿದ್ದಾರೆ ಅನ್ನೋದು ಇಲ್ಲಿದೆ. ಇದರ ವಿವರ ಇಲ್ಲಿದೆ ಓದಿ.
ತಮಿಳು ಸಿನಿಮಾ (Tamil Movie) ರಂಗದಲ್ಲೂ ಶಿವಣ್ಣ (Shivanna) ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಜೈಲರ್ ಆದ್ಮೇಲೆ ಬ್ಯಾಕ್ ಟು ಬ್ಯಾಕ್ ಅನ್ನುವ ಹಾಗೆ ಸಿನಿಮಾಗಳು ಬಂದಿವೆ. ಈಗಾಗಲೇ ಮೂರು ಚಿತ್ರಗಳನ್ನ ಮಾಡಿದ್ದಾರೆ. ನಾಲ್ಕನೆಯ ಚಿತ್ರ ಸೆಟ್ಟೇರಿದೆ. ನಾಯಕನ ಜನ್ಮ ದಿನದ ದಿನವೇ ಇದು ಲಾಂಚ್ ಆಗಿದೆ. ಈ ಚಿತ್ರದಲ್ಲಿ ಶಿವಣ್ಣ (Shivanna) ಹೀರೋ ಅಲ್ಲ. ಆದರೆ, ಇವರ ಪಾತ್ರಕ್ಕೆ ವೇಟ್ ಇದೆ. ಅಪ್ಪನ ಪಾತ್ರದಲ್ಲಿಯೇ (Father Role) ಇಡೀ ಚಿತ್ರದಲ್ಲಿ ಆವರಿಸಿಕೊಳ್ಳಲಿದ್ದಾರೆ. ಅಪ್ಪ ಮಗನ ಈ ಬಾಂಧವ್ಯದ ಚಿತ್ರದಲ್ಲಿ ಎಮೋಷನ್ಸ್ ಹೆಚ್ಚು ಹೈಲೈಟ್ ಆಗಿದೆ. ಈ ಸಿನಿಮಾದ ಈಗೀನ ವಿಷಯ ಒಂದು ಇದೆ. ಇದು ಶಿವಣ್ಣನ ಜಾಲಿ ಜಾಲಿ ಕ್ಷಣದ ಮ್ಯಾಟರ್ ಆಗಿದೆ. ಇದನ್ನ ಎಲ್ಲರಿಗೂ ಹೇಳ್ಬೇಕು ಅಂತ ಚಿತ್ರ ತಂಡವೇ ಒಂದು ವಿಡಿಯೋ ಮಾಡಿದೆ. ಇದರಲ್ಲಿ ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.
ಸೆಟ್ ಅಲ್ಲಿ ಶಿವಣ್ಣ ಹೆಂಗೆ (ಚಿತ್ರ ಕೃಪೆ: ಡ್ರಾಮಾ ಕಂಪನಿ ಇನ್‌ಸ್ಟಾಗ್ರಾಮ್)
ಈ ಸಿನಿಮಾ ಶೂಟಿಂಗ್ ಜೂನ್-1 ರಿಂದಲೇ ಶುರು ಆಗಿದೆ. ಅಪ್ಪ ಮತ್ತು ಮಗನ ಬಾಂಧವ್ಯದ ಈ ಚಿತ್ರದಲ್ಲಿ ಎಮೋಷನ್ಸ್ ಬಹಳ ಇದೆ. ಚಿತ್ರದ ಹೈಲೈಟ್ ಅದೇ ಆಗಿದೆ.
ಶಿವರಾಜ್ ಕುಮಾರ್ ಸೆಟ್ ಅಲ್ಲಿ ಅಷ್ಟೆ ಜಾಲಿ ಆಗಿಯೇ ಇರ್ತಾರೆ. ಯುವಕರ ಜೊತೆಗೆ ಯುವರಾಗಿಯೇ ಇರ್ತಾರೆ. ಇಲ್ಲೂ ಹಾಗೆ ಇದ್ದಾರೆ. ಸೀನಿಯರ್ ಅನ್ನುವ ಯಾವುದೇ ಗತ್ತು ಇಟ್ಟುಕೊಂಡಿಲ್ಲ.
ಅವರಂತೆ ಇವರೂ ಇದ್ದಾರೆ. ಅವರೊಟ್ಟಿಗೆ ಹಾಡಿದ್ದಾರೆ. ಮಜಾಕ್ ಮಾಡಿದ್ದಾರೆ. ಕನ್ನಡದ ಜೊತೆ ಜೊತೆಯಲಿ ಹಾಡು ಹಾಡಿದ್ದಾರೆ. ಹಂಗೆ ಅದನ್ನ ಹೇಳಿಕೊಡುವ ಕೆಲಸವನ್ನು ಮಾಡಿದ್ದಾರೆ. ತಮಿಳು ಚಿತ್ರದ ಶೂಟಿಂಗ್ ಸ್ಪಾಟ್ ಅಲ್ಲಿ ಕನ್ನಡದ ಹಾಡು ಹೆಚ್ಚು ಇಂಟ್ರಸ್ಟಿಂಗ್ ಆಗಿಯೇ ಕೇಳುತ್ತಿದೆ.
ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರ ವಿವಾಹ ವಾರ್ಷಿಕೋತ್ಸವ ಆಚರಣೆ ಕೂಡ ಇಲ್ಲಿ ಆಗಿದೆ. ತಮಿಳು ಚಿತ್ರ ತಂಡವೇ ಈ ಒಂದು ಸೆಲೆಬ್ರೇಷನ್ ಮಾಡಿದೆ. ಕೇಕ್ ಕಟ್ ಮಾಡಿ ಈ ಒಂದು ಸೆಲೆಬ್ರೇಷನ್ ಮಾಡಲಾಗಿದೆ.
ಚಿತ್ರದ ವಿಚಾರಕ್ಕೆ ಬಂದ್ರೆ ಈ ಚಿತ್ರವನ್ನ ಗೌತಮ್ ಶಿವರಾಮನ್ ಡೈರೆಕ್ಷನ್ ಮಾಡಿದ್ದಾರೆ. ಇವರು ಬೇರೆ ಯಾರೋ ಅಲ್ಲ. ಅಬಿಶಾನ್ ಜೀವಿಂತ್ ಅವರ ಶಿಷ್ಯನೇ ಆಗಿದ್ದಾರೆ. ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.
ಚಿತ್ರದ ಟೈಟಲ್ ಏನು ಗೊತ್ತೇ (ಚಿತ್ರ ಕೃಪೆ: ಡ್ರಾಮಾ ಕಂಪನಿ ಇನ್‌ಸ್ಟಾಗ್ರಾಮ್)
ಚಿತ್ರಕ್ಕೆ ಇನ್ನು ಟೈಟಲ್ ಇಟ್ಟಿಲ್ಲ. ಏನ್ ಇಡ್ತಾರೆ ಅನ್ನುವ ಕುತೂಹಲ ಇದೆ. ಡ್ರಾಮಾ ಕಂಪನಿ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದೆ. ಶಿವಣ್ಣ ತಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅನ್ನುವ ಹೆಮ್ಮೆ ಇಡೀ ಚಿತ್ರ ತಂಡಕ್ಕೆ ಇದೆ.
ಶಿವರಾಜ್ ಕುಮಾರ್ ಅವರ ಒಳ್ಳೆ ಒಳ್ಳೆ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ತಮಿಳಿನಲ್ಲಿ ಜೈಲರ್-2 ಚಿತ್ರ ಮಾಡಿದ್ದಾರೆ. ಅಬಿಶಾಂತ್ ಜೊತೆಗಿನ ಈ ಚಿತ್ರದ ಬಗ್ಗೆ ಗೊತ್ತೇ ಇದೆ.
ಕನ್ನಡದಲ್ಲಿ 666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರ ಇದೆ. ಇದು ಬಾಂಡ್ ಸಿನಿಮಾನೇ ಆಗಿದೆ. ಬೇಲ್ ಚಿತ್ರದ ಶೂಟಿಂಗ್ ಕೆಲಸ ಪೂರ್ಣ ಆಗಿದೆ. ಪವನ್ ಒಡೆಯರ್ ಈ ಚಿತ್ರದಲ್ಲಿ ಶಿವಣ್ಣನಿಗೆ ಅದ್ಭುತ ರೋಲ್ ಕೊಟ್ಟಿದ್ದಾರೆ. ಈ ಎಲ್ಲ ಚಿತ್ರಗಳ ಮೂಲಕ ಶಿವಣ್ಣ ಪ್ರೇಕ್ಷಕರನ್ನ ರಂಜಿಸಲಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 17, 2026 10:53 AM IST













