Last Updated:
ವಿದ್ಯಾರ್ಥಿನಿಯ ಕೋಣೆ ಮಧ್ಯಾಹ್ನ 2:00 ಗಂಟೆಯಿಂದ ಒಳಗಿನಿಂದ ಲಾಕ್ ಆಗಿತ್ತು. ಸಂಜೆ ಸುಮಾರು 4:30 ಕ್ಕೆ ಬಾಗಿಲು ತೆರೆದಾಗ, ಅವಳು ಒಳಗೆ ಮೃತಪಟ್ಟಿರುವುದು ಕಂಡುಬಂದಿತು. ಘಟನೆಯ ನಂತರ, ಈ ಘಟನೆಯಿಂದ ಬೆಚ್ಚಿಬಿದ್ದ ಇಬ್ಬರು ರೂಮ್ಮೇಟ್ಗಳು ತಮ್ಮ ವಸ್ತುಗಳನ್ನು ತೆಗೆದು ಮತ್ತೊಂದು ಕೋಣೆಗೆ ಸ್ಥಳಾಂತರಗೊಂಡರು.
ನಳಂದ: ಬಿಹಾರದ ನಳಂದದಲ್ಲಿರುವ ಕೆಕೆ ವಿಶ್ವವಿದ್ಯಾಲಯದ ಹಾಸ್ಟೆಲ್ ಕೋಣೆಯಲ್ಲಿ 18 ವರ್ಷದ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. ಪೊಲೀಸರು ಸಾವಿಗೆ ಆತ್ಮಹತ್ಯೆ ಕಾರಣ (Sad News) ಎಂದು ಶಂಕಿಸಿದ್ದಾರೆ.














