Darshan Case: ದರ್ಶನ್ ಕೇಸ್​​ಗೆ ಬಿಗ್​ ಟ್ವಿಸ್ಟ್​ ಕೊಡುತ್ತಾ ರೇಣುಕಾಸ್ವಾಮಿ ತಾಯಿಯ ಈ ಒಂದು ಹೇಳಿಕೆ? ಕ್ರಾಸ್ ಎಕ್ಸಾಮಿನೇಷನ್​ಗೆ ಮನವಿ | | ACTPnews

News18


Last Updated:

ದರ್ಶನ್​​ ಕೇಸ್​​ಗೆ ಬಿಗ್ ಟ್ವಿಸ್ಟ್ ಕೊಡುತ್ತಾ ಮೃತ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಹೇಳಿಕೆ? ಕೊಲೆ ಕೇಸ್​​ ಸಂಬಂಧ ಕೋರ್ಟ್​​ನಲ್ಲಿ ಸಾಕ್ಷ್ಯ ವಿಚಾರಣೆ ನಡೆದಿದ್ದು, ಆರೋಪಿ ದರ್ಶನ್ ಹಾಗೂ ಪವಿತ್ರಾ ಗೌಡಗೂ ಢವಢವ ಶುರುವಾಗಿದೆ.

News18
News18

ಬೆಂಗಳೂರು (ಜೂ.17): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder) ಕೇಸ್​ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಬರ್ಬರ ಕೊಲೆ ಹಿಂದಿನ ಆರೋಪಿಯಾಗಿ ಸ್ಯಾಂಡಲ್​ವುಡ್​ ನಟ ದರ್ಶನ್ (Actor Darshan) ಕೂಡ ಜೈಲು ಸೇರಿದ್ದಾರೆ. ಸುಪ್ರೀಂ ಕೋರ್ಟ್ (Supreme Court) ಖಡಕ್ ಆದೇಶದ ಮೇರೆಗೆ ಸೆಷನ್ಸ್ ಕೋರ್ಟ್​ನಲ್ಲಿ (Sessions Court) ಸಾಕ್ಷಿಗಳ ವಿಚಾರಣೆ ನಡೆದಿದೆ. ಮತ್ತೊಂದೆಡೆ ಮೃತ ರೇಣುಕಾಸ್ವಾಮಿ ತಾಯಿ ಪ್ರತಿಕೂಲದ ಹೇಳಿಕೆ ನೀಡಿದ್ದು, ಈ ಹಿನ್ನೆಲೆ ಕ್ರಾಸ್​ ಎಕ್ಸಾಮಿನೇಷನ್​​ಗೆ ಮನವಿ ಮಾಡಲಾಗಿದ್ದು, ದರ್ಶನ್​​ ಕೇಸ್​​ಗೆ ಬಿಗ್ ಟ್ವಿಸ್ಟ್ ಕೊಡುತ್ತಾ ರತ್ನಪ್ರಭಾ ಹೇಳಿಕೆ?

ಕೋರ್ಟ್ ಕಟಕಟೆಯಲ್ಲಿ ರತ್ನಪ್ರಭ ಪ್ರತಿಕೂಲ ಹೇಳಿಕೆ

ಕೊಲೆಯಾದ ರೇಣುಕಾಸ್ವಾಮಿ ಕೇಸ್​ನಲ್ಲಿ ತಾಯಿ ರತ್ನಪ್ರಭಾ ಅವರು ವಿಚಾರಣೆ ನಡೆದಿತ್ತು. ಈ ಸಂದರ್ಭದಲ್ಲಿ ನೀಡಿದ ಹೇಳಿಕೆಗಳಲ್ಲಿ ವ್ಯತಿರಿಕ್ತತೆಗಳು ಕಂಡು ಬಂದಿದ್ದವು. ಆರಂಭದಲ್ಲಿ ಪೊಲೀಸರ ಮುಂದೆ ನೀಡಿದ ಹೇಳಿಕೆಗಳಿಗಿಂತ ನ್ಯಾಯಾಲಯದ ವಿಚಾರಣೆಯ ವೇಳೆ ಕೆಲ ಗೊಂದಲದ ಹೇಳಿಕೆಗಳನ್ನು ರತ್ನಪ್ರಭಾ  ನೀಡಿದ್ದಾರೆ ಎಂದು ವರದಿ ಆಗಿದೆ.

ಕ್ರಾಸ್ ಎಕ್ಸಾಮಿನೇಷನ್​ಗೆ ಮನವಿ  

ರತ್ನಪ್ರಭ ಅವರ ಪ್ರತಿಕೂಲ ಹೇಳಿಕೆ ಹಿನ್ನೆಲೆ ಪ್ರಾಸಿಕ್ಯೂಷನ್ ವತಿಯಿಂದ ರತ್ನಪ್ರಭಾ ಕ್ರಾಸ್ ಎಕ್ಸಾಮಿನೇಷನ್​ಗೆ ಮನವಿ ಮಾಡಲಾಗಿದೆ. ಸೆಷನ್ಸ್ ಕೋರ್ಟ್ ನಲ್ಲಿ ಪ್ರಾಸಿಕ್ಯೂಷನ್ ಅರ್ಜಿ ವಜಾ ಹಿನ್ನೆಲೆ. ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿಲಾಗಿದೆ. ಪ್ರಾಸಿಕ್ಯೂಷನ್ ಅರ್ಜಿ ಸಂಬಂಧ ಹೈಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಆರೋಪಿಗಳ ಪರ ವಕೀಲರಿಗೆ ಹೈಕೋರ್ಟ್ ನೋಟಿಸ್​ ನೀಡಿದೆ.

ರೇಣುಕಾಸ್ವಾಮಿ ತಾಯಿ ಹೇಳಿದ್ದೇನು?

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ವೇಳೆ ತಾಯಿ ರತ್ನಪ್ರಭಾ ಮಗನ ಮೃತದೇಹದ ಮೇಲಿನ ಗಾಯಗಳು, ಅವರ ಬಟ್ಟೆಗಳು ಮತ್ತು ಉಂಗುರವನ್ನು ನ್ಯಾಯಾಲಯದಲ್ಲಿ ಗುರುತಿಸಿದ್ದರು.

ಗೊಂದಲದ ಹೇಳಿಕೆ

ಮಗನಿಗೆ ಕೊನೆಯದಾಗಿ ಕರೆ ಮಾಡಿದ ವಿಷಯ ಹಾಗೂ ಇತರ ಮೊಬೈಲ್ ಸಂಖ್ಯೆಗಳ ವಿಚಾರದಲ್ಲಿ ತನಿಖಾಧಿಕಾರಿಗಳ ಮುಂದೆ ನೀಡಿದ್ದ ಹೇಳಿಕೆ ಮತ್ತು ಕೋರ್ಟ್‌ನಲ್ಲಿ ನೀಡಿದ್ದ ಹೇಳಿಕೆಗಳ ನಡುವೆ ವ್ಯತ್ಯಾಸಗಳಿದ್ದವು.

ಜೂನ್ 18ಕ್ಕೆ ವಿಚಾರಣೆ ಮುಂದೂಡಿಕೆ

ಆರೋಪಿಗಳ ಪರ ವಕೀಲರಿಗೆ ನೋಟಿಸ್​ ನೀಡಿದ ಹೈಕೋರ್ಟ್​, ಮುಂದಿನ ವಿಚಾರಣೆಯನ್ನ ಜೂನ್ 18ಕ್ಕೆ ಮುಂದೂಡಿದೆ. ಈ ಹಿಂದೆ ರತ್ನಪ್ರಭಾ  ಆರಂಭದಲ್ಲಿ ಪೊಲೀಸರ ಮುಂದೆ ನೀಡಿದ ಹೇಳಿಕೆಗಳಿಗಿಂತ ನ್ಯಾಯಾಲಯದ ವಿಚಾರಣೆಯ ವೇಳೆ ಕೆಲ ಗೊಂದಲದ ಹೇಳಿಕೆಗಳನ್ನ ನೀಡಿದ್ದರು. ಈ ಕಾರಣಕ್ಕೆ ಅವರನ್ನು ಪ್ರಾಸಿಕ್ಯೂಷನ್ ‘ಪ್ರತಿಕೂಲ ಸಾಕ್ಷಿ’ (Hostile Witness) ಎಂದು ಪರಿಗಣಿಸುವಂತೆ ಮನವಿ ಮಾಡಲಾಗಿತ್ತು.

(ವರದಿ: ಮುನಿರಾಜು, ನ್ಯೂಸ್​18 ಕನ್ನಡ, ಬೆಂಗಳೂರು)

ಕನ್ನಡ ಸುದ್ದಿ/ ನ್ಯೂಸ್/ರಾಜ್ಯ/

Darshan Case: ದರ್ಶನ್ ಕೇಸ್​​ಗೆ ಬಿಗ್​ ಟ್ವಿಸ್ಟ್​ ಕೊಡುತ್ತಾ ರೇಣುಕಾಸ್ವಾಮಿ ತಾಯಿಯ ಈ ಒಂದು ಹೇಳಿಕೆ? ಕ್ರಾಸ್ ಎಕ್ಸಾಮಿನೇಷನ್​ಗೆ ಮನವಿ



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports