Last Updated:
ಟಾಕ್ಸಿಕ್ ಚಿತ್ರವನ್ನ ಶಿವಣ್ಣ ಇಷ್ಟಪಟ್ಟಿದ್ದಾರೆ. ಒಂದು ಒಳ್ಳೆ ಪ್ರಯತ್ನ ಅಂತಲೂ ಹೇಳಿದ್ದಾರೆ ಯಶ್ ಯಂಗ್ ಲುಕ್ ತುಂಬಾನೆ ಇಷ್ಟ ಆಯಿತು ಅಂತಲೂ ಹೇಳಿದ್ದಾರೆ ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ
“ಟಾಕ್ಸಿಕ್ ಚಿತ್ರವನ್ನ (Toxic Movie) ನಾನು ಶಿವರಾಜ್ ಕುಮಾರ್ (Shiva Rajkumar) ಆಗಿ ನೋಡಿಯೇ ಇಲ್ಲ. ಒಬ್ಬ ಪ್ರೇಕ್ಷಕನಾಗಿಯೇ ಚಿತ್ರ ನೋಡಿದ್ದೇನೆ”. ಇದು ತುಂಬಾನೆ ಇಷ್ಟ ಆಗಿದೆ. ಸೆಕೆಂಡ್ ಹಾಫ್ ಅಲ್ಲಿ ಬರುವ ಆ 20 ನಿಮಿಷ ನನಗೆ ತುಂಬಾನೆ ಇಷ್ಟ ಆಯಿತು. ಇದೊಂದು ಒಳ್ಳೆಯ ಪ್ರಯತ್ನದ ಚಿತ್ರವೇ ಆಗಿದೆ. ಪಾಪ್‌ಕಾರ್ನ್ ತಿನ್ನುತ್ತಾ ಚಿತ್ರ ನೋಡುವ ಖುಷಿನೇ ಬೇರೆ ಇರುತ್ತದೆ. ಈ ಚಿತ್ರವನ್ನ ರಿಲೀಸ್ ಆದ ದಿನ ಬುಧವಾರವೇ ನೋಡ್ಬೇಕಿತ್ತು. ಆ ದಿನ ನೋಡೋಕೆ ಆಗ್ಲಿಲ್ಲ. ಮೊನ್ನೆ ಮುಂಬೈಗೆ ಹೋಗಿದ್ದೇವೆ. ಆ ದಿನವೇ ನಾನು ಈ ಚಿತ್ರ ನೋಡ್ತೀನಿ ಅಂತ ಹೇಳಿದ್ದೆ. ಈಗ ನೋಡಿದ್ದೇನೆ. ಹೀಗೆ ಶಿವರಾಜ್ ಕುಮಾರ್ (Shiva Rajkumar) ಟಾಕ್ಸಿಕ್ ಚಿತ್ರ (Toxic Movie) ನೋಡಿದ್ಮೇಲೆ ಮಾಧ್ಯಮಗಳ ಮುಂದೆ ಹೀಗೆ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.














