Last Updated:
Sheikh Abubakar: ‘ಭಾರತದ ಗ್ರ್ಯಾಂಡ್ ಮುಫ್ತಿ’ ಎಂಬ ಬಿರುದನ್ನು ಹೊಂದಿರುವ ಕೇರಳದ ಇಸ್ಲಾಮಿಕ್ ಧರ್ಮಗುರು ಶೇಖ್ ಅಬುಬಕರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಹಿಳೆಯರು ಅಮೂಲ್ಯವಾದ ಆಭರಣಗಳನ್ನು ಪೆಟ್ಟಿಗೆಯೊಳಗೆ ಸಂಗ್ರಹಿಸುವಂತೆ ತಮ್ಮ ಮನೆಗಳಿಗೆ ಸೀಮಿತವಾಗಿರಬೇಕು ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.
ಕೇರಳಂ: ‘ಭಾರತದ ಗ್ರ್ಯಾಂಡ್ ಮುಫ್ತಿ’ (Grand Mufti of India) ಎಂಬ ಬಿರುದನ್ನು ಹೊಂದಿರುವ ಕೇರಳದ ಇಸ್ಲಾಮಿಕ್ ಧರ್ಮಗುರು (Kerala Islamic cleric) ಶೇಖ್ ಅಬುಬಕರ್ ಅಹ್ಮದ್ (Sheikh Abubakar Ahmed) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಮಹಿಳೆಯರು ಅಮೂಲ್ಯವಾದ ಆಭರಣಗಳನ್ನು ಪೆಟ್ಟಿಗೆಯೊಳಗೆ ಸಂಗ್ರಹಿಸುವಂತೆ ತಮ್ಮ ಮನೆಗಳಿಗೆ ಸೀಮಿತವಾಗಿರಬೇಕು” ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. “ಸಾರ್ವಜನಿಕ ಕ್ಷೇತ್ರಕ್ಕೆ ಮಹಿಳೆಯರನ್ನು ಕರೆತರುವುದು ವಿನಾಶಕ್ಕೆ ಕಾರಣವಾಗಬಹುದು” ಎಂದು ಇಸ್ಲಾಮಿಕ್ ಧರ್ಮಗುರು ಹೇಳಿದ್ದು, ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.














