Shamita Shetty: ’47 ವರ್ಷ, ಇನ್ಯಾವಾಗ ಮದುವೆ?’ ಎಂದವರಿಗೆ ಖಡಕ್ ಉತ್ತರ ಕೊಟ್ಟ ಶಿಲ್ಪಾ ಶೆಟ್ಟಿ ತಂಗಿ! | Bollywood Actress Shamita Shetty shuts troll | | ACTPnews

ಶಮಿತಾ ಶೆಟ್ಟಿ


Last Updated:

Shamita Shetty: ಬಾಲಿವುಡ್ ನಟಿ ಹಾಗೂ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ 47 ವರ್ಷವಾದರೂ ಮದುವೆಯಾಗದೆ ಇರುವುದನ್ನು ಟ್ರೋಲ್ ಮಾಡಿದ ನೆಟ್ಟಿಗರಿಗೆ ನೀರಿಳಿಸಿದ್ದಾರೆ. ಟ್ರೋಲ್​ ಮಾಡೋರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಏನಿದು ವಿಷಯ? ಇಲ್ಲಿ ಓದಿ.

ಶಮಿತಾ ಶೆಟ್ಟಿ
ಶಮಿತಾ ಶೆಟ್ಟಿ

ಸೋಷಿಯಲ್ ಮೀಡಿಯಾದಲ್ಲಿ (Social Media) ಸೆಲೆಬ್ರೆಟಿಗಳನ್ನು (Celebrities) ಅದರಲ್ಲೂ ವಿಶೇಷವಾಗಿ ನಟಿಯರನ್ನು (Actress) ಅವರ ವಯಸ್ಸು ಮತ್ತು ಮದುವೆಯ ವಿಚಾರವಾಗಿ ಟ್ರೋಲ್‌ (Troll) ಮಾಡುವುದು ಇತ್ತೀಚಿಗೆ ಹೆಚ್ಚಾಗುತ್ತಿದೆ. ಇದೇ ರೀತಿ ಬಾಲಿವುಡ್‌ (Bollywood) ಪ್ರಸಿದ್ದ ನಟಿ ಹಾಗೂ ಶಿಲ್ಪಾ ಶೆಟ್ಟಿ (Shilpa Shetty) ಅವರ ಸಹೋದರಿ ಶಮಿತಾ ಶೆಟ್ಟಿ (Shamita Shetty) ಅವರು ಇನ್ನೂ ಮದುವೆಯಾಗದೆ (Marriage) ಸಿಂಗಲ್ ಆಗಿ ಉಳಿದಿರುವ ಬಗ್ಗೆ ನೆಗೆಟಿವ್‌ ಕಾಮೆಂಟ್‌ (Comments) ಮಾಡಿದ ಟ್ರೋಲರ್‌ಗಳಿಗೆ ಸೋಶಿಯಲ್‌ ಮೀಡಿಯಾದಲ್ಲೆ ತಕ್ಕ ಶಾಸ್ತಿ ಮಾಡಿದ್ದಾರೆ.

ಶಮಿತಾ ಶೆಟ್ಟಿ ತಮಗೆ 47 ವರ್ಷವಾಗಿದ್ದರೂ ಇನ್ನೂ ಸಿಂಗಲ್‌ ಆಗಿರುವುದನ್ನು ಪ್ರಶ್ನಿಸಿದ ಟ್ರೋಲರ್‌ ಒಬ್ಬನಿಗೆ ತಕ್ಕ ಉತ್ತರ ನೀಡಿದ್ದಾರೆ. ಆ ಟ್ರೋಲರ್‌ನ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್ ಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ಅವನ ಮುಖವಾಡ ಕಳಚಿದ್ದಾರೆ. ಅಷ್ಟೆ ಅಲ್ಲದೆ, ತಮ್ಮನ್ನು ಅನ್ ಫಾಲೋ ಮಾಡುವಂತೆಯೂ ಆತನಿಗೆ ಹೇಳಿದ್ದಾರೆ.
ಸಮಯ ಕಳೆದಂತೆ ಜನ ಬದಲಾಗ್ತಾರೆ

“ನಿಮಗೆ ಈಗ ವಯಸ್ಸಾಗಿದೆ, ನೀವು ಮೊದಲಿನಂತೆ ಕಾಣಿಸುತ್ತಿಲ್ಲ” ಎಂಬ ನೆಟ್ಟಿಗರೊಬ್ಬರ ಕಾಮೆಂಟ್‌ಗೆ ನಟಿ ಸೂಕ್ತ ಉತ್ತರ ನೀಡಿದ್ದಾರೆ. “ಹೌದು, ಸಮಯ ಕಳೆದಂತೆ ಮನುಷ್ಯರು ಬೇರೆಯದೇ ತರಹ ಕಾಣುತ್ತಾರೆ. ಅದು ಪ್ರಕೃತಿಯ ನಿಯಮ” ಎಂದು ಹೇಳಿದ್ದಾರೆ.

“ಹೌದು, ನಾನು ವಿಭಿನ್ನವಾಗಿ ಕಾಣಿಸುತ್ತೇನೆ. ಸಮಯದೊಂದಿಗೆ ಎಲ್ಲವೂ ಬದಲಾಗುತ್ತದೆ. ಇದು ಜೀವನದ ಸ್ವಭಾವಿಕ ಗುಣ. ದೈಹಿಕ ರೂಪ ಸೇರಿದಂತೆ ಯಾವುದು ಕೂಡಾ ಶಾಶ್ವತವಾಗಿ ಉಳಿಯುವುದ್ದಿಲ್ಲ. ಆದರೆ ನನ್ನ ವಯಸ್ಸಿಗೆ ನಾನು ಆರೋಗ್ಯವಾಗಿ, ಫಿಟ್‌ ಆಗಿ ಮತ್ತು ಸಂತೋಷವಾಗಿದ್ದೇನೆ. ನನಗೆ ಎಲ್ಲದನ್ನೂ ಕೊಟ್ಟಿರುವುದಕ್ಕೆ ದೇವರಿಗೆ ನನ್ನ ಕೃತಜ್ಙತೆ ಸಲ್ಲಿಸುತ್ತೇನೆ. ನನಗೆ ಅಷ್ಟೇ ಸಾಕು.” ಎಂದು ಉತ್ತರಿಸಿದ್ದಾರೆ.

ಮದುವೆಯಾಗಿ ನೀವೇನ್ ಸಾಧಿಸಿದ್ರಿ?

ʻನೀವು ಸರಿಯಾದ ಸಮಯಕ್ಕೆ ಮದುವೆ ಆಗಿರುತಿದ್ದರೆ, ಈಗಾಗಲೇ ನಿಮ್ಮ ಮಕ್ಕಳು ದೊಡ್ಡವರಾಗಿರುತ್ತಿದ್ದರುʼ ಎಂಬ ಮತ್ತೊಂದು ಕಮೆಂಟ್​ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಮಿತಾ, ʻಮದುವೆ ಆಗಿ ನೀವೇನು ಸಾಧಿಸಿದ್ದೀರಿʼ ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

“ಅಣ್ಣಾ ಮದುವೆ ಆಗಿ ನೀವೇನು ಸಾಧಿಸಿದ್ದೀರಿ? ಎಲ್ಲಕಿಂತ ಮುಖ್ಯವಾಗಿ ನಮಂತಹ ಸಿಂಗಲ್‌ ಮಹಿಳೆಯರನ್ನು ವಯಸ್ಸಿನ ಹೆಸರಿನಲ್ಲಿ ಅವಮಾನಿಸುತ್ತೀರಿ. ನಿಮ್ಮ ಪಿತೃಪ್ರಧಾನ, ಹಳೆಯ ಕಾಲದ ಪುರುಷ ಪ್ರಾಧಾನ್ಯ ಆಲೋಚನೆಗಳನ್ನು ನಮ್ಮ ಮೇಲೆ ಹೇರುವುದಕ್ಕಾಗಿ ನಮ್ಮನ್ನು ಯಾಕೆ ಫಾಲೋ ಮಾಡುತ್ತೀರಿ? ನನ್ನನ್ನು ಈಗಲೇ ಅನ್‌ಫಾಲೊ ಮಾಡಿ ಎಂದು ಹೇಳಿದ್ದಾರೆ.

47 ವರ್ಷವಾದರೂ ಯಾಕೆ ಸಿಂಗಲ್?

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಂಗಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಶಮಿತಾ ಶೆಟ್ಟಿ ಅವರಿಗೆ ಈಗ 47 ವರ್ಷ. ನಟಿ ಈಗಲೂ ಸಿಂಗಲ್ ಆಗಿದ್ದಾರೆ. ಬಾಯ್​ಫ್ರೆಂಡ್ ಕಾರು ಅಪಘಾತದಲ್ಲಿ ಮೃತಪಟ್ಟ ನಂತರ ಅವರು ಸಿಂಗಲ್ ಆಗಿಯೇ ಇದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಅವರು ರಾಕೇಶ್ ಬಪತ್ ಜೊತೆ ಆಪ್ತರಾದರೂ ಕೂಡಾ ನಂತರ ಈ ಜೋಡಿ ಬ್ರೇಕಪ್ ಮಾಡಿಕೊಂಡರು. ಸದ್ಯ ಶಮಿತಾ ಸಿಂಗಲ್ ಆಗಿದ್ದಾರೆ.

ಈ ಹಿಂದೆ ಶಮಿತಾ ಶೆಟ್ಟಿ ಅವರು ಮೊಹಬ್ಬತೇನ್‌, ಜೆಹೆರ್‌, ಬೇವಫಾ ಮತ್ತು ಕ್ಯಾಶ್‌ ನಂತಹ ಪ್ರಸಿದ್ದ ಬಾಲಿವುಡ್‌ ಚಿತ್ರಗಳಲ್ಲಿ ನಟಿಸಿದ್ದಾರೆ. ಬಿಗ್‌ ಬಾಸ್‌ 15, ಖತ್ರೋನ್‌ ಕೆ ಕಿಲಾಡಿ 9 ಮತ್ತು ಜಲಕ್‌ ದಿಖ್ಲಾ 8 ರಂತಹ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದರು. ಕೊನೆಯದಾಗಿ ಅವರು ದಿ ಟೆನೆಂಟ್‌ ಎಂಬ ವೆಬ್‌ ಶೋನಲ್ಲಿ ಕಾಣಿಸಿಕೊಂಡಿದ್ದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports