Shah Rukh Khan: ಕಿಂಗ್ ಖಾನ್ ಮನೆ ರಿಪೇರಿಗೆ ಸಿಕ್ತು ಕೋರ್ಟ್ ಅನುಮತಿ, ಮನ್ನತ್ ರಿನೋವೇಷನ್ ಯಾವಾಗಿನಿಂದ? | | ACTPnews

ಶಾರುಖ್ ಖಾನ್-ಮನ್ನತ್


Last Updated:

Mannat Home: ಶಾರುಖ್ ಖಾನ್ ಅವರ ಮುಂಬೈನ ಮನ್ನತ್ ಬಂಗಲೆಯ ರಿನೋವೇಷನ್​ಗೆ ಕೋರ್ಟ್ ಅನುಮತಿ ಸಿಕ್ಕಿದೆ. ಯಾವಾಗಿನಿಂದ ಶುರುವಾಗಲಿದೆ ಕೆಲಸ?

ಶಾರುಖ್ ಖಾನ್-ಮನ್ನತ್
ಶಾರುಖ್ ಖಾನ್-ಮನ್ನತ್

ಮುಂಬೈನ (Mumbai) ಬಾಂದ್ರಾದಲ್ಲಿರುವ (Bandra) ನಟ ಶಾರುಖ್ ಖಾನ್ (Shah Rukh Khan) ಮತ್ತು ಗೌರಿ ಖಾನ್ (Gauri Khan) ಅವರ ಸಮುದ್ರ ತೀರದ ನಿವಾಸ ‘ಮನ್ನತ್’ (Mannat) ನವೀಕರಣಕ್ಕೆ ನೀಡಲಾದ ಅನುಮೋದನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅನುಮೋದಿಸಿದೆ.

ಈ ಸುದ್ದಿ ನ್ಯೂಸ್​18 ಹಿಂದಿಗೆ ಎಕ್ಸ್​ಕ್ಲೂಸಿವ್ ಆಗಿ ಸಿಕ್ಕಿದೆ. ಈ ಸುದ್ದಿ ಇದೀಗ ಬಹಿರಂಗವಾಗಿದೆ. ಈ ಹಿಂದೆಯೇ ಶಾರುಖ್ ಖಾನ್ ಅವರ ಮನೆಯಾಗಿರುವ ಮನ್ನತ್ ರಿನೋವೇಷನ್ ನಡೆಯಲಿದ್ದು ಅವರು ಬೇರೆ ಮನೆಗೆ ಶಿಫ್ಟ್ ಆಗುತ್ತಾರೆ ಎನ್ನಲಾಗಿತ್ತು. ಕೆಲವು ವರ್ಷಗಳ ಕಾಲ ಮನೆ ರಿಪೇರಿ ನಡೆಯಲಿದ್ದು ಸದ್ಯ ಕೋರ್ಟ್ ಅನುಮತಿ ಸಿಕ್ಕಿದೆ.

ಮುಂಬೈನ ಬಾಂದ್ರಾದಲ್ಲಿರುವಂತಹ ಮನ್ನತ್ ಶಾರುಖ್ ಖಾನ್ ಪಾಲಿಗೆ ಮನೆ ಆದರೆ ಬಹಳಷ್ಟು ಜನರಿಗೆ ಈ ಮನೆ ಒಂದು ಪ್ರವಾಸಿ ತಾಣದಂತೆ, ಈ ಮನೆಯನ್ನು ಹೊರಗಿನಿಂದ ನೋಡೋಕಂತಲೇ ಬಹಳಷ್ಟು ಜನರು ಹೋಗುತ್ತಾರೆ.

ಇನ್ನು ಮುಂಬೈನ ಬಾಂದ್ರಾದಲ್ಲಿ ಶಾರುಖ್ ಖಾನ್ ಅವರ ಮನೆಯೇ ಒಂದು ಲ್ಯಾಂಡ್​ಮಾರ್ಕ್.

ಮತ್ತಷ್ಟು ದೊಡ್ಡದಾಗಲಿದೆ ಮನೆ

ಮನ್ನತ್ ನೋಡಲು ಪ್ರತಿದಿನ ನೂರಾರು ಜನರು ಬರುತ್ತಾರೆ. ಮನ್ನತ್ ನೋಡಲು, ಕಿಂಗ್ ಖಾನ್ ಹಾಗೂ ಅವರ ಕುಟುಂಬವನ್ನು ನೋಡಲು ಫ್ಯಾನ್ಸ್ ಅವರ ಮನೆ ಮುಂದೆ ಕಾಯುತ್ತಾರೆ. ಸದ್ಯ ಖಾನ್ ಫ್ಯಾಮಿಲಿ ತಮ್ಮ ಮನ್ನತ್ ಮನೆಯನ್ನು ಮತ್ತಷ್ಟು ಗ್ರ್ಯಾಂಡ್ ಮಾಡೋಕೆ ಪ್ಲಾನ್ ಮಾಡಿದ್ದಾರಂತೆ.

ವರದಿಗಳ ಪ್ರಕಾರ ಶಾರುಖ್ ಖಾನ್ ಈ ಬಂಗಲೆಯನ್ನು 2001 ರಲ್ಲಿ 13 ಕೋಟಿ ರೂಪಾಯಿಗಳಿಗೂ ಹೆಚ್ಚು ಕೊಟ್ಟು ಖರೀದಿಸಿದ್ದರು. ಆರಂಭದಲ್ಲಿ ಶಾರುಖ್ ಇದನ್ನು ಜನ್ನತ್ ಎಂದು ಹೆಸರಿಸಿದ್ದರು. ಆದರೆ 2005 ರಲ್ಲಿ ಮನ್ನತ್ ಎಂದು ಹೆಸರನ್ನು ಬದಲಾಯಿಸಲಾಯಿತು ಎನ್ನಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed