School Holidays: ನಾಳೆ ಶಾಲೆ-ಕಾಲೇಜ್‌ಗೆ ರಜೆ ಇರುತ್ತಾ? ಸ್ತಬ್ಧವಾಗಲಿದೆ ರಾಷ್ಟ್ರರಾಜಧಾನಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

Rapid Read


Last Updated:

School Holidays: ನಾಳೆ ರಾಷ್ಟ್ರ ರಾಜಧಾನಿ ದೆಹಲಿ ಬಹುತೇಕ ಸ್ತಬ್ಧವಾಗಲಿದೆ! ಕಾರಣ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ಎಸ್ಐಆರ್ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 10ರಂದು ರಾಷ್ಟ್ರ ರಾಜಧಾನಿಯಲ್ಲಿ ಶಾಲೆಗಳಿಗೆ ಸರ್ಕಾರದಿಂದ ರಜೆ ಇದೆಯಾ, ಇಲ್ವಾ ಎಂಬ ಸಂಶಯ ಇದೀಗ ಎದ್ದಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ದೆಹಲಿ: ನಾಳೆ ರಾಷ್ಟ್ರ ರಾಜಧಾನಿ ದೆಹಲಿ (Delhi) ಬಹುತೇಕ ಸ್ತಬ್ಧವಾಗಲಿದೆ! ಕಾರಣ ಕಾಕ್ರೋಚ್ ಜನತಾ ಪಕ್ಷದ (CJP – Cockroach Janata Party) ನೇತೃತ್ವದಲ್ಲಿ ಎಸ್ಐಆರ್ (SIR) ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (CEC – Gyanesh Kumar) ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ. ಅಕ್ಟೋಬರ್ 9ರ ರಾತ್ರಿ 9 ಗಂಟೆಯಿಂದ ಅಕ್ಟೋಬರ್ 10ರವರೆಗೆ 57 ಮೆಟ್ರೋ ನಿಲ್ದಾಣಗಳ ಪ್ರವೇಶ-ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತಿದೆ. ಹಲವೆಡೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಸಂಚಾರಕ್ಕೂ ರೂಲ್ಸ್ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 10ರಂದು ರಾಷ್ಟ್ರ ರಾಜಧಾನಿಯಲ್ಲಿ ಶಾಲೆಗಳಿಗೆ ಸರ್ಕಾರದಿಂದ ರಜೆ (School Holiday) ಇದೆಯಾ, ಇಲ್ವಾ ಎಂಬ ಸಂಶಯ ಇದೀಗ ಎದ್ದಿದೆ.

ಸಿಜೆಪಿ ಪ್ರತಿಭಟನೆಗೆ ಅನುಮತಿ ನಿರಾಕರಣೆ

ನಾಳೆ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ, ಎಡಪಂಥೀಯ ಗುಂಪುಗಳು ಮತ್ತು ಆಮ್ ಆದ್ಮಿ ಪಕ್ಷದ ವಿದ್ಯಾರ್ಥಿ ಸಂಘಟನೆಗಳು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಪಡೆಯುವುದಕ್ಕಾಗಿ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಅಕ್ರಮ ನಡೆದಿದೆ ಎಂಬ ಆರೋಪದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿವೆ. ಆದರೆ ದೆಹಲಿ ಪೊಲೀಸರು ಸಣ್ಣ ಅವಧಿಯ ಸೂಚನೆ, ಹಿಂದಿನ ಸಂದರ್ಭದಲ್ಲಿ ನಿಯಮಗಳನ್ನು ಪಾಲಿಸದಿರುವುದು ಹಾಗೂ ಕಾನೂನು-ಸುವ್ಯವಸ್ಥೆ ಮತ್ತು ಸಾರ್ವಜನಿಕ ಸುರಕ್ಷತೆಯ ಕಾಳಜಿಯನ್ನು ಉಲ್ಲೇಖಿಸಿ ಈ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ.

ದೆಹಲಿ ಮೆಟ್ರೋ ಸಂಚಾರ ಸ್ಥಗಿತ?

ಅಕ್ಟೋಬರ್ 9ರ ರಾತ್ರಿ 9 ಗಂಟೆಯಿಂದ ಅಕ್ಟೋಬರ್ 10ರವರೆಗೆ 57 ಮೆಟ್ರೋ ನಿಲ್ದಾಣಗಳ ಪ್ರವೇಶ-ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತಿದೆ. ನ್ಯೂ ದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ನಿಲ್ದಾಣಗಳಿಗೆ ಬರುವ ಹಲವು ಮೇಲ್-ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ. ಚಿಲ್ಲರೆ ಮದ್ಯದಂಗಡಿಗಳು ಅಕ್ಟೋಬರ್ 9 ಮತ್ತು 10ರಂದು ಮುಚ್ಚಿರುತ್ತವೆ. ಪರವಾನಗಿ ಪಡೆದ ರೆಸ್ಟೋರೆಂಟ್, ಬಾರ್ ಮತ್ತು ಕ್ಲಬ್‌ಗಳಲ್ಲಿ ಮದ್ಯ ಮಾರಾಟ ಮುಂದುವರಿಯುತ್ತದೆ.

ದೆಹಲಿಯಲ್ಲಿ ಶಾಲೆ, ಕಾಲೇಜ್‌ಗಳಿಗೆ ರಜೆ ಇದೆಯೇ?

ಭದ್ರತಾ ಕಾಳಜಿ ಮತ್ತು ಮೆಟ್ರೋ ಸೇವೆಗಳ ಮೇಲಿನ ನಿರ್ಬಂಧಗಳಿಂದ ಶಾಲೆ, ಕಾಲೇಜ್‌ಗಳಿಗೆ ರಜೆ ಇದೆಯೇ ಎಂಬ ಸಂಶಯ ಎದ್ದಿದೆ. ಆದರೆ ಹಲವು ಶಾಲೆ-ಕಾಲೇಜುಗಳು ತರಗತಿಗಳನ್ನು ಆನ್‌ಲೈನ್‌ಗೆ ವರ್ಗಾಯಿಸಿವೆ. ಪೋಷಕ-ಶಿಕ್ಷಕ ಸಭೆಗಳನ್ನು ಮುಂದೂಡಿವೆ ಮತ್ತು ಅದೇ ದಿನ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಿವೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಹಲವೆಡೆ ಆನ್‌ಲೈನ್‌ನಲ್ಲೇ ಕ್ಲಾಸ್

ಪಿಟಿಐ ವರದಿಯ ಪ್ರಕಾರ, ಸರ್ದಾರ್ ಪಟೇಲ್ ವಿದ್ಯಾಲಯವು 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಶನಿವಾರ ಆನ್‌ಲೈನ್ ತರಗತಿ ನಡೆಸುವುದಾಗಿ ತಿಳಿಸಿದೆ. ಕಸ್ತೂರಬಾ ಗಾಂಧಿ ಮಾರ್ಗದಲ್ಲಿರುವ ಭಾರತೀಯ ವಿದ್ಯಾ ಭವನ್ ಮೆಹ್ತಾ ವಿದ್ಯಾಲಯವು 9ರಿಂದ 12ನೇ ತರಗತಿಗಳ ಕ್ರೀಡಾ ದಿನದ ಅಭ್ಯಾಸ ಮತ್ತು ಪೂರಕ ತರಗತಿಗಳನ್ನು ರದ್ದುಗೊಳಿಸಿದೆ. ಕೆಲವು ಶಾಲೆಗಳು ಶುಕ್ರವಾರದ ಸ್ಟೇ-ಬ್ಯಾಕ್ ಸೌಲಭ್ಯವನ್ನೂ ನಿಲ್ಲಿಸಿವೆ. ಕಾಲೇಜುಗಳಲ್ಲಿ ಅಕ್ಟೋಬರ್ 10ಕ್ಕೆ ನಿಗದಿಯಾಗಿದ್ದ ಮಧ್ಯಾವಧಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಪೊಲೀಸರೊಂದಿಗೆ ಸಹಕರಿಸುವಂತೆ ಮನವಿ

ಸರ್ಕಾರದಿಂದ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸದ ಕಾರಣ, ಪೋಷಕರು ತಮ್ಮ ಮಕ್ಕಳ ಶಾಲೆಯ ಅಧಿಕೃತ ಸೂಚನೆಯನ್ನು ಪರಿಶೀಲಿಸಿ ಪ್ರಯಾಣ ಯೋಜಿಸಬೇಕು ಎಂದು ಸಲಹೆ ನೀಡಲಾಗಿದೆ. ಪೊಲೀಸರು ಸ್ಥಳೀಯ ನಿವಾಸಿಗಳು ಮತ್ತು ವಿದ್ಯಾರ್ಥಿಗಳನ್ನು ಸಾರ್ವಜನಿಕ ಸುವ್ಯವಸ್ಥೆ ಭಂಗಗೊಳಿಸುವ ಚಟುವಟಿಕೆಗಳಿಂದ ದೂರವಿರಲು ಕೋರಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports