School Holiday: ಸೋಮವಾರವೂ ಶಾಲೆ, ಕಾಲೇಜ್‌ಗಳಿಗೆ ರಜೆ; ಇಲ್ಲಿ ಸರ್ಕಾರಿ ಕಚೇರಿಗಳಿಗೂ ಬಿಡುವು! ಕಾರಣವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ


Last Updated:

ಈ ಸ್ಥಳೀಯ ರಜಾ ದಿನವು ಚಲಾವಣಾ ಸಾಧನ ಕಾಯ್ದೆ 1881ರ ಅಡಿಯಲ್ಲಿ ಬರುವುದಿಲ್ಲವಾದ್ದರಿಂದ, ಈ ಸ್ಥಳೀಯ ರಜೆಯು ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಈ ನೆಲದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ (British) ವಿರುದ್ಧ ಹೋರಾಡಿದ ಮಹಾವೀರರ ತ್ಯಾಗವನ್ನು ಸ್ಮರಿಸುವುದು ಮತ್ತು ಅವರ ಬಲಿದಾನಗಳನ್ನು ಗೌರವಿಸುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ, ಸ್ವಾತಂತ್ರ್ಯ ಹೋರಾಟಗಾರರೊಬ್ಬರ (Freedom fighter) ನೆನಪಿನ ದಿನದ ಅಂಗವಾಗಿ ತಮಿಳುನಾಡಿನ (Tamil Nadu) ಈ ಜಿಲ್ಲೆಯಲ್ಲಿ ಸೋಮವಾರ (Monday) ಅಂದರೆ, ಆಗಸ್ಟ್​​ 3 ರಂದು ರಜೆ ಘೋಷಣೆ ಮಾಡಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರನಿಗೆ ನಮನ

ತಮಿಳುನಾಡಿನ ತಿರುಪೂರ್ ಜಿಲ್ಲೆಯ ಕಾಂಗೇಯಂ ತಾಲ್ಲೂಕಿನ ಮೇಲಪಾಳೆಯಂ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿ, ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಧೀರನ್ ಚಿನ್ನಮಲೈ ಅವರ ನೆನಪಿನ ದಿನದ ಅಂಗವಾಗಿ ಸೋಮವಾರದಂದು ತಿರುಪೂರ್ ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸ್ಥಳೀಯ ರಜೆ ಘೋಷಿಸಿ ಆದೇಶಿಸಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಧೀರನ್ ಚಿನ್ನಮಲೈ

ಶಾಲೆ-ಕಾಲೇಜುಗಳಲ್ಲಿ ಈಗಾಗಲೇ ಪರೀಕ್ಷೆಗಳು ಘೋಷಿಸಲ್ಪಟ್ಟಿದ್ದರೆ ಈ ರಜಾ ಪ್ರಕಟಣೆಯು ಅನ್ವಯಿಸುವುದಿಲ್ಲ, ಹಾಗೂ ಪರೀಕ್ಷೆಗಳು ಮುಂಚಿತವಾಗಿ ಘೋಷಿಸಿದಂತೆ ನಡೆಯಲಿವೆ ಎಂದು ತಿಳಿದು ಬಂದಿದೆ. ಈ ಸ್ಥಳೀಯ ರಜಾ ದಿನವು ಚಲಾವಣಾ ಸಾಧನ ಕಾಯ್ದೆ 1881 ರ (Under Negotiable Instruments Act 1881) ಅಡಿಯಲ್ಲಿ ಬರುವುದಿಲ್ಲವಾದ್ದರಿಂದ, ಈ ಸ್ಥಳೀಯ ರಜೆಯು ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ.

ಸ್ಥಳೀಯ ರಜಾ ದಿನವಾದ 03.08.2026 ಸೋಮವಾರದಂದು ತುರ್ತು ಕೆಲಸ ಕಾರ್ಯಗಳನ್ನು ನಿರ್ವಹಿಸುವ ಸಲುವಾಗಿ ತಿರುಪೂರ್ ಜಿಲ್ಲೆಯಲ್ಲಿರುವ ಖಜಾನೆ ಮತ್ತು ಉಪ ಖಜಾನೆಗಳು ನಿರ್ದಿಷ್ಟ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬೇಕೆಂದು ಆದೇಶಿಸಲಾಗಿದೆ ಎಂದು ತಿರುಪೂರ್ ಜಿಲ್ಲಾಧಿಕಾರಿ ಮನೀಶ್ ನಾರಣವರೇ ಅವರು ಮಾಹಿತಿ ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed